ಭಕ್ತಿ ಸಡಗರದೊಂದಿಗೆ ರಂಜಾನ್ ಆಚರಣೆ

ramjan rajapur (4)
Published on

ಕಲಬುರಗಿ: ನಗರ ಸೇರಿ ಜಿಲ್ಲಾದ್ಯಂತ ಮುಸ್ಲಿಮರು ಈದ್ ಉಲ್ ಫಿತ್ರ ಹಬ್ಬವನ್ನು ಗುರುವಾರ ಸಡಗರ, ಸಂಭ್ರಮದೊಂದಿಗೆ ಆಚರಿಸಿದರು. ಹೊಸ ಬಟ್ಟೆ ಧರಿಸಿ, ಆತ್ಮೀಯರನ್ನು ಪರಸ್ಪರ ಆಲಿಂಗಿಸಿ, ಶುಭಾಶಯ ವಿನಿಮಯ ಮಾಡಿಕೊಂಡರು. ಬೆಳಗ್ಗೆಯಿಂದಲೇ ಮಸೀದಿ ಈದ್ಗಾ ಮೈದಾನಗಳಿಗೆ ತೆರಳಿದ ಪುರುಷರು, ಮಕ್ಕಳು ಸೇರಿ ಸಾಮೂಹಿಕ ನಮಾಜ್ ಸಲ್ಲಿಸಿದರು.

ನಗರದ ರಾಜಾಪುರ ಬಳಿಯ ಈದ್ಗಾ ಮೈದಾನದಲ್ಲಿ ಹೊಸ ಬಟ್ಟೆ ತೊಟ್ಟ ಮುಸ್ಲಿಂ ಯುವಕರು, ಹಿರಿಯರು, ಮಕ್ಕಳು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಪ್ರಾರ್ಥನೆ ನಂತರ ಪರಸ್ಪರ ಶುಭಾಶಯ ಕೋರಿಕೊಂಡರು.
ಇಸ್ಲಾಂ ಕಾಲನಿ, ಹುಮನಾಬಾದ್ ರಿಂಗ್ ರಸ್ತೆ, ಖಾಜಾ ಬಂದಾ ನವಾಜ್ ದರ್ಗಾ, ಮುಸ್ಲಿಂ ಚೌಕ್, ಸಾಥ್ ಗುಂಬಜ್, ಗಂಜ್, ಹಳೇ ಜೇವರ್ಗಿ ರಸ್ತೆ, ರೈಲು ನಿಲ್ದಾಣದ ಮಾರ್ಗ, ಕಪಡಾ ಬಜಾರ್, ಎಪಿಎಂಸಿ ರಸ್ತೆ, ಎಪಿಎಂಸಿ ಸರ್ಕಲ್, ದರ್ಗಾ ರಸ್ತೆ, ಖೂನಿ ಹವಾಲಾ, ಸಂಘತ್ರಸವಾಡಿ, ಗಾಜಿ ಮೊಹಲ್ಲ, ಎಂಎಸ್‌ಕೆ ಮಿಲ್ ಪ್ರದೇಶದಲ್ಲಿರುವ ಮಸೀದಿಗಳಲ್ಲೂ ಖುರಾನ್ ಪಠಣ, ನಮಾಜ್ ಮಾಡಿದರು. ರಾಜಕೀಯ ಪP್ಷÀಗಳ ಮುಖಂಡರು ಈದ್ಗಾ ಮೈದಾನಕ್ಕೆ ಭೇಟಿ ನೀಡಿ ಶುಭ ಕೋರಿದರು.
ಹಲವು ಮಕ್ಕಳು ಜುಬ್ಬಾ, ಟೋಪಿ ಧರಿಸಿ ಖುಷಿ ಹಂಚಿಕೊAಡರು. ಎಲ್ಲೆಡೆ ಶಾಂತಿ, ಸಹಬಾಳ್ವೆ, ಸೌಹಾರ್ದ ಮೂಡಿ, ಸಂಕಷ್ಟ ದೂರಾಗಲಿದ ಎಂದು ಪ್ರಾರ್ಥಿಸಲಾಗಿದೆ ಎಂದು ಮೌಲ್ವಿಗಳು ತಿಳಿಸಿದರು. ಪ್ರಾರ್ಥನೆ ಮುಗಿಸಿದ ನಂತರ ಬಡವರಿಗೆ, ನಿರ್ಗತಿಕರಿಗೆ ಧನದಾನ ಮಾಡಿದರು.
ಪ್ರಾರ್ಥನೆ ನಂತರ ಸುರಕುಂಬಾ ಸವಿಸಿದರು. ಕುಟುಂಬದವರೊAದಿಗೆ ಬಿರಿಯಾನಿ, ಕಬಾಬï ಸೇರಿದಂತೆ ವಿವಿಧ ರೀತಿಯ ಮಾಂಸಾಹಾರದ ಖಾದ್ಯಗಳು ಹಾಗೂ ಸಿಹಿ ತಿನಿಸು ಸೇವಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net