

ಸುಂಟಿಕೊಪ್ಪ: ಸುಂಟಿಕೊಪ್ಪದ ಮಧುರಮ್ಮ ಬಡಾವಣೆಯ ರಘು ಹಾಗೂ ರಾಣಿ ಅವರು ಸುಬ್ರಮಣ್ಯ ದೇವಾಲಯದಲ್ಲಿ ಷಷ್ಠಿ ಉತ್ಸವವನ್ನು ಆಚರಿಸಿದರು.
ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ಸುಂಟಿಕೊಪ್ಪದ ಉಲುಗುಲಿ ಗ್ರಾಮದ ಶ್ರೀಬೆಳ್ಳಾರಿಕಮ್ಮ ದೇವಾಲಯದಲ್ಲಿ ಸುಬ್ರಮಣ್ಯ ಷಷ್ಠಿ ಉತ್ಸವವನ್ನು ಆಚರಿಸಲಾಯಿತು.
ಶ್ರೀಬೆಳ್ಳಾರಿಕಮ್ಮ ದೇವಾಲಯದಲ್ಲಿ ಸುಬ್ರಮಣ್ಯ ಷಷ್ಠಿ ಪ್ರಯುಕ್ತ ಶ್ರೀಚಾಮುಂಡೇಶ್ವರಿ ದೇವಸ್ಥಾನದ ಮಂಜುನಾಥ ಉಡುಪ ಮತ್ತು ಹಿರಿಯ ಆರ್ಚಕ ಗಣೇಶ್ ಶರ್ಮಾ ಅವರು ವಿಶೇಷ ಪೂಜೆ, ದೇವರಿಗೆ ವಿವಿಧ ಅಭಿಷೇಕ, ಹೋಮ ಹವನ ಹಾಗೂ ಮಹಾ ಮಂಗಳಾರತಿ ನೆರವೇರಿಸಿದರು. ನಂತರ ನೆರೆದಿದ್ದ ಭಕ್ತರಿಗೆ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪಟ್ಟೆಮನೆ ಉದಯಕುಮಾರ್, ಉಪಾಧ್ಯಕ್ಷ ಕುಂತೋಳಿ ಚಂಗಪ್ಪ, ಕಾರ್ಯದರ್ಶಿ ಮಾಗಲು ವಸಂತ, ಖಜಾಂಚಿ ಪಟ್ಟೆಮನೆ ಅನಿಲ್‌ಕುಮಾರ್, ಸಹ ಕಾರ್ಯದರ್ಶಿ ಮಲ್ಲನ ಸತೀಶ್ ಹಾಗೂ ತಕ್ಕ ಮುಖ್ಯಸ್ಥ ಕೆ.ಪಿ.ಜಗನ್ನಾಥ್, ಶಶಾಂಕ್, ಪ್ರೀತಮ್ ಮತ್ತಿತರರು ಪೂಜಾ ಕೈಂಕರ್ಯದ ಸಂದರ್ಭ ಹಾಜರಿದ್ದರು.
ಉಲುಗುಲಿ, ಸುಂಟಿಕೊಪ್ಪ, ನಾರ್ಗಾಣೆ, ಗುಂಡುಗುಟ್ಟಿ, ಹರದೂರು ಸೇರಿದಂತೆ ಸುತ್ತ ಮುತ್ತಲ್ಲ ಗ್ರಾಮಗಳಿಂದ ನೂರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶ್ರದ್ಧಾಭಕ್ತಿಯಿಂದ ಪೂಜಾ ಕೈಂಕರ್ಯದಲ್ಲಿ ಭಾಗವಹಿಸಿದ್ದರು.