

ಬಾಗಲಕೋಟೆ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜಿಲ್ಲಾಧ್ಯಕ್ಷರಾಗಿ ನರಸಿಂಹ ಆಲೂರ, ಉಪಾಧ್ಯಕ್ಷರಾಗಿ ಸಂತೋಷ ಗದ್ದನಕೇರಿ ಹಾಗೂ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಶುಭದಾ ದೇಶಪಾಂಡೆ ಅವರನ್ನು ಆಯ್ಕೆ ಮಾಡಲಾಗಿದೆ.
ಮುಧೋಳದಲ್ಲಿ ಶನಿವಾರ ಸಂಜೆ ನಡೆದ ಅಲ್ಲಿನ ತಾಲೂಕಾ ಬ್ರಾಹ್ಮಣ ಸಂಘದ ೩೦ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಬ್ರಾಹ್ಮಣ ಮಹಾಸಭೆ ಅಧ್ಯಕ್ಷ ಅಶೋಕ ಹಾರನಹಳ್ಳಿ ಅವರು ಈ ಆಯ್ಕೆಯನ್ನು ಘೋಷಿಸಿದರು. ಎಕೆಬಿಎಂಎಸ್ ಜಿಲ್ಲಾಧ್ಯಕ್ಷ ಕೆ.ಎಸ್.ದೇಶಪಾಂಡೆ ಅವರ ನಿಧನದ ನಂತರ ಆ ಸ್ಥಾನ ಖಾಲಿಯಾಗಿತ್ತು. ಈಗ ಸಮಾಜದ ಹಿರಿಯರಾದ ನರಸಿಂಹ ಆಲೂರ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮಹಸಭೆ ರಾಜ್ಯ ಉಪಾಧ್ಯಕ್ಷ ಡಾ.ಗಿರೀಶ ಮಸೂರಕರ