

ಬ್ಯಾಡಗಿ: ಇಲ್ಲಿನ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಸೋಮವಾರ ಡಬ್ಬಿ ತಳಿ ಮೆಣಸಿನಕಾಯಿ ಕ್ವಿಂಟಾಲ್ಗೆ 66,666 ರೂ. ಮಾರಾಟವಾಗಿದೆ. ಅಲ್ಲದೆ, ಪ್ರಸಕ್ತ ಸಾಲಿನಲ್ಲಿ 1,97,770 ಚೀಲಗಳು ಅತಿ ಹೆಚ್ಚು ಆವಕವಾಗಿವೆ ಎಂದು ಎಪಿಎಂಸಿ ಕಾರ್ಯದರ್ಶಿ ಎಸ್.ಬಿ. ನ್ಯಾಮಗೌಡ್ರ ತಿಳಿಸಿದ್ದಾರೆ. ಕಳೆದ ವಾರ 76, 109 ರೂ. ಬೆಲೆಯಲ್ಲಿ ಡಬ್ಬಿ ಕಾಯಿ ಮಾರಾಟವಾಗಿದೆ. ಕಳೆದ ಒಂದೂವರೆ ತಿಂಗಳ ಹಿಂದೆ ಸರಾಸರಿ ಬೆಲೆ ದಾಟಿ ಮಾರುಕಟ್ಟೆಯಲ್ಲಿ ಖರೀದಿ ನಡೆದಿದ್ದು, ರೈತರು ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯತ್ತ ಮುಖ ಮಾಡಿದ್ದಾರೆ. ಸೋಮವಾರ ಮಾರುಕಟ್ಟೆಗೆ ಒಟ್ಟು 1,97,770 ಚೀಲ ಮೆಣಸಿನಕಾಯಿ ಆವಕವಾಗಿದ್ದು, ವಿಶೇಷ. ಒಟ್ಟು 271 ದಲಾಲರ ಅಂಗಡಿಯಲ್ಲಿ 2,19,958 ಲಾಟ್ಗಳನ್ನು ಹಾಕಲಾಗಿತ್ತು. ಈ ಪೈಕಿ 458 ಲಾಟ್ ತಿರಸ್ಕೃತವಾಗಿವೆ. 383 ಜನ ಖರೀದಿದಾರರು ಪಾಲ್ಗೊಂಡಿದ್ದರು.
ಇಂದಿನ ದರ: ಕಡ್ಡಿ 1250 ರೂ.ನಿಂದ 27, 699 ರೂ. ಸರಾಸರಿ 12, 509 ರೂ.
ಡಬ್ಬಿತಳಿ 2089 ರೂ. ನಿಂದ 66,666 ಸರಾಸರಿ 15,429 ರೂ.
ಗುಂಟೂರು 700ರೂ. ನಿಂದ 10,569 ರೂ. ಸರಾಸರಿ 5,310 ರೂ.