ಬ್ಯಾಂಕ್ ಮೇಲ್ದರ್ಜೆಗೇರಿಸಲು ಚಿಂತನೆ

SRP_25-01jpj
Published on

ಶ್ರೀರಂಗಪಟ್ಟಣ: ಶ್ರೀ ಕೃಷ್ಣರಾಜೇಂದ್ರ ಸಹಕಾರ ಬ್ಯಾಂಕ್‌ನ ಎಲ್ಲ 13 ನಿರ್ದೇಶಕ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆಗೊಳಿಸಿ ಮೇಲ್ದರ್ಜೆಗೇರಿಸಲು ಚಿಂತನೆ ನಡೆಸಲಾಗಿದೆ ಎಂದು ಪುರಸಭೆ ಉಪಾಧ್ಯಕ್ಷ ಹಾಗೂ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಎಲ್.ದಿನೇಶ್ ತಿಳಿಸಿದರು.

ಪಟ್ಟಣದ ಪುರಸಭೆ ಆವರಣದಲ್ಲಿ ಮಂಗಳವಾರ ಪುರಸಭೆ ಸದಸ್ಯರು ಹಾಗೂ ಸಹಕಾರ ಬ್ಯಾಂಕಿನ ಷೇರುದಾರರೊಂದಿಗೆ ಸಭೆ ನಡೆಸಿ ಅಭಿವೃದ್ಧಿ ಕುರಿತು ಅವರು ಚರ್ಚಿಸಿದರು. ಬ್ಯಾಂಕ್ ಸಾವಿರಕ್ಕೂ ಹೆಚ್ಚು ಷೇರುದಾರರನ್ನು ಹೊಂದಿದ್ದು, 450ಕ್ಕೂ ಅಧಿಕೃತ ಮತದಾರರನ್ನು ಹೊಂದಿದೆ. ಶೀಘ್ರದಲ್ಲೇ ಚುನಾವಣೆ ನಡೆಯಲಿದ್ದು, ಷೇರುದಾರರಲ್ಲಿ ಅರ್ಹ ವ್ಯಕ್ತಿಗಳನ್ನು ಆಯೆ ಮಾಡಿ ಬ್ಯಾಂಕ್ ಅಭಿವೃದ್ಧಿಗೆ ಮುಂದಾಗುತ್ತೇವೆ ಎಂದರು.

ಬ್ಯಾಂಕ್ ಬೈಲಾದಲ್ಲಿನ ಕೆಲ ನೀತಿ ನಿಯಮಗಳನ್ನು ತಿದ್ದುಪಡಿ ಮಾಡುವ ಜತೆಗೆ ವಿಸ್ತರಣೆ ಮಾಡಿ ಷೇರುದಾರರ ಸದಸ್ಯತ್ವ ಹೆಚ್ಚಿಸಲಾಗುವುದು. ಇದಕ್ಕೆ ಪಟ್ಟಣದ ಜನಪ್ರತಿನಿಧಿಗಳು ಹಾಗೂ ಷೇರುದಾರರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಟಿಎಪಿಸಿಎಂಎಸ್ ಅಧ್ಯಕ್ಷ ಎಂ.ನಂದೀಶ್, ಪುರಸಭೆ ಸದಸ್ಯ ಎಸ್.ಎನ್.ದಯಾನಂದ್, ಎಂ.ನಂದೀಶ್, ಸೊಸೈಟಿ ನಿರ್ದೇಶಕ ಶ್ರೀಕಂಠು, ಮುಖಂಡರಾದ ಭಾಸ್ಕರ್, ನಾರಾಯಣ್, ಶೇಖರ್, ಸುಬ್ಬಣ್ಣ, ಪ್ರಸನ್ನ, ವೆಂಕಟೇಶ್, ಪರಮೇಶ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net