ಬೋರ್ಡ್​ಗೆ ಕಾರು ಡಿಕ್ಕಿ, ಮೂವರಿಗೆ ಗಾಯ

10 YLP 02
Published on

ಯಲ್ಲಾಪುರ: ಕಾರೊಂದು ರಸ್ತೆ ಬದಿಯ ಬೋರ್ಡ್​ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಗಾಯಗೊಂಡ ಘಟನೆ ಪಟ್ಟಣದ ಸವಣಗೇರಿ ಬಳಿ ಯಲ್ಲಾಪುರ-ಶಿರಸಿ ರಸ್ತೆಯಲ್ಲಿ ನಡೆದಿದೆ. ಮಂಚಿಕೇರಿ ಸಮೀಪದ ಮಳಗಿಮನೆಯ ಮಂಜುನಾಥ ಭಾಸ್ಕರ ಹೆಗಡೆ, ಪತ್ನಿ ಕೀರ್ತಿ ಮಂಜುನಾಥ ಹೆಗಡೆ ಹಾಗೂ ಮಗ ಪ್ರಜ್ವಲ ಮಂಜುನಾಥ ಹೆಗಡೆ ಗಾಯಗೊಂಡವರು. ಇವರು ಯಲ್ಲಾಪುರದಿಂದ ಶಿರಸಿ ಕಡೆಗೆ ಹೊರಟಿದ್ದಾಗ ಸವಣಗೇರಿ ಬಳಿ ರಸ್ತೆಯಲ್ಲಿ ಎದುರಾಗಿ ಬಂದ ಹಸು ತಪ್ಪಿಸಲು ಹೋಗಿ ರಸ್ತೆ ಪಕ್ಕದ ಬೋರ್ಡ್​ಗೆ ಡಿಕ್ಕಿ ಹೊಡೆದಿದ್ದಾರೆ. ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ಜಖಂಗೊಂಡಿದೆ. ಈ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net