

ಮುಂಡಗೋಡ: ತಾಲೂಕಿನ ಹುಡೇಲಕೊಪ್ಪ ಗ್ರಾಮದ ಬಳಿ ಎರಡು ಬೈಕ್ಗಳ ಮಧ್ಯೆ ಡಿಕ್ಕಿ ಸಂಭವಿಸಿ ಒಬ್ಬ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಸೋಮವಾರ ಸಂಭವಿಸಿದೆ.
ಕಾತೂರ ಗ್ರಾಮದ ರಾಘವೇಂದ್ರ ಯಲ್ಲಾಪುರ (38) ಮೃತಪಟ್ಟ ವ್ಯಕ್ತಿ. ಹಿರೇಹಳ್ಳಿ ಗ್ರಾಮದ ನವೀನ ಮಟ್ಟಿಮನಿ ಮತ್ತು ಪಾಂಡಪ್ಪ ಮಟ್ಟಿಮನಿ ಗಾಯಗೊಂಡವರು. ರಾಘವೇಂದ್ರ ಕಾತೂರಿನಿಂದ ಮಳಗಿ ಕಡೆಗೆ ತೆರಳುತ್ತಿದ್ದರು. ನವೀನ ಮಟ್ಟಿಮನಿ ಮಳಗಿಯಿಂದ ಹಿರೇಹಳ್ಳಿ ಕಡೆಗೆ ತೆರಳುತ್ತಿದ್ದಾಗ ಬೈಕ್ಗಳ ಮಧ್ಯೆ ಡಿಕ್ಕಿ ಸಂಭವಿಸಿದೆ. ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್ಗೆ ದಾಖಲಿಸಲಾಗಿದೆ. ಈ ಕುರಿತು ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.