ಬೈಕ್​ ಅಪಘಾತದಲ್ಲಿ ಪುರೋಹಿತರಿಬ್ಬರು ಸ್ಥಳದಲ್ಲೇ ಸಾವು

Crime Logo
Published on

ಹೊನ್ನಾವರ: ಪಟ್ಟಣದ ಎಮ್ಮೆಪೈಲ್ ತಿರುವಿನಲ್ಲಿ ಅಪರಿಚಿತ ವಾಹನವೊಂದು ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ತಡರಾತ್ರಿ ಸಂಭವಿಸಿದೆ. ಕುಮಟಾ ಕಡೆಯಿಂದ ಹೊನ್ನಾವರ ಕಡೆಗೆ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಖರ್ವಾ ಹಸಿಮನೆ ಬಾಲಚಂದ್ರ ಗಜಾನನ ಭಟ್ವ (32) ಮತ್ತು ಯಲ್ಲಾಪುರ ಪತ್ರಮಕ್ಕಿ ಮಳವಳ್ಳಿಯ ಜಗದೀಶ ಗೋಪಾಲಕೃಷ್ಣ ಹೆಬ್ಬಾರ (38) ಮೃತಪಟ್ಟವರು. ಈ ಇಬ್ಬರೂ ಪುರೋಹಿತ ವೃತ್ತಿ ಮಾಡುತ್ತಿದ್ದರು. ಅಪರಿಚಿತ ವಾಹನ ಚಾಲಕ ಅಪಘಾತ ಪಡಿಸಿ ಪರಾರಿಯಾಗಿದ್ದಾನೆ. ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net