

ಬಾಗಲಕೋಟೆ: ಬೈಕ್ ಕಳ್ಳತನ ಮಾಡುತ್ತಿದ್ದ ಓರ್ವ ಕಳ್ಳನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಮೂರು ಬೈಕ್ ವಶಕ್ಕೆ ಪಡೆದ ಘಟನೆ ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಭಾನುವಾರ ನಡೆದಿದೆ.
ಮಹೇಶ ರಾಚಪ್ಪ ಪಟ್ಟಣಶೆಟ್ಟಿ(25) ಬಂಧಿತ ಆರೋಪಿ. ಬಾದಾಮಿ ತಾಲೂಕಿನ ಹಲಕುರ್ಕಿ ಗ್ರಾಮದ ನಿವಾಸಿಯಾಗಿದ್ದಾನೆ. ಬಾಗಲಕೋಟೆ ತಾಲೂಕಿನ ಮುಚಖಂಡಿ ಗ್ರಾಮದ ವೀರಭದ್ರೇಶ್ವರ ದೇವಸ್ಥಾನ ಎದುರು ನವನಗರದ ಹುಡ್ಕೋ ಕಾಲೋನಿ ನಿವಾಸಿ ಹಣುಮಂತ ಯರಮಲ್ಲ ತಮ್ಮ ಸ್ಕೋಟಿ ನಿಲ್ಲಿಸಿ ದೇವರ ದರ್ಶನಕ್ಕೆ ಹೋಗಿದ್ದರು. ವಾಪಸ್ಸ ಬಂದಾಗ ಸ್ಕೋಟಿ ಇರಲಿಲ್ಲ. ಆ.23 ರಂದು ನಡೆದ ಘಟನೆ ಕುರಿತು ಆ.27 ರಂದು ಪೊಲೀಸ ಠಾಣೆಗೆ ದೂರು ನೀಡಿದ್ದರು.
ಎಸ್ಪಿ ಜಯಪ್ರಕಾಶ ಹಕ್ಕರಕಿ, ಡಿಎಸ್ಪಿ ಪ್ರಶಾಂತ ಮುನ್ನೋಳ್ಳಿ, ಸಿಪಿಐ ಭೀಮಣ್ಣ ಸೂರಿ ಮಾರ್ಗದರ್ಶನದಲ್ಲಿ ಗ್ರಾಮೀಣ ಠಾಣೆಯ ಪಿಎಸ್ಐ ಜನಾರ್ಧನ ಭಟ್ರಳ್ಳಿ, ಸಿಬ್ಬಂದಿಗಳಾದ ಡಿ.ಸಿ.ಗುಡ್ಡಳ್ಳಿ, ರಾಜೇಶ ಪದರಾ, ಸಿ.ಎಂ.ಕುಂಬಾರ, ರಾಜಬಕ್ಷಿ ನದಾಫ ಪ್ರದೀಪಕುಮಾರ ಪಾಟೀಲ, ಎಸ್.ಎಸ್.ಸೊನ್ನದ, ವೈ.ಎಚ್.ಭಗವತಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಈ ಸಂದರ್ಭದಲ್ಲಿ ಆರೋಪಿ ಮಹೇಶ ರಾಚಪ್ಪ ಪಟ್ಟಣಶೆಟ್ಟಿ ಮುಚಖಂಡಿಯಲ್ಲಿ ಸ್ಕೋಟಿ, ಹುಬ್ಬಳ್ಳಿಯಲ್ಲಿ ಕಳ್ಳತನ ಮಾಡಿದ ಒಂದು ಸ್ಕೋಟಿ ಹಾಗೂ ಬೈಕ್ ಸೇರಿ ಮೂರು ವಾಹನ ವಶಕ್ಕೆ ಪಡೆದು ಪಡೆದುಕೊಂಡಿದ್ದಾರೆ. ಈ ಕುರಿತು ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.