ಬೇಬಿಬೆಟ್ಟದ ದನಗಳ ಜಾತ್ರೆ ಸಂಪನ್ನ

IMG20250306140154
Published on

ಪಾಂಡವಪುರ: ತಾಲೂಕಿನ ಬೇಬಿಬೆಟ್ಟದಲ್ಲಿ ಶ್ರೀರಾಮಯೋಗೇಶ್ವರ ಮಠದ ಜಾತ್ರಾ ಆವರಣದ ಅಮೃತಮಹಲ್ ಕಾವಲು ಪ್ರದೇಶದಲ್ಲಿ ಕಳೆದ 8 ದಿನಗಳ ಕಾಲ ನಡೆದ ಭಾರಿ ದನಗಳ ಜಾತ್ರಾ ಮಹೋತ್ಸವ ಗುರುವಾರ ಸಂಪನ್ನಗೊಂಡು ಜಾತ್ರೆಯಲ್ಲಿ ಭಾಗವಹಿಸಿದ್ದ ಉತ್ತಮ ರಾಸುಗಳಿಗೆ ಚಿನ್ನದ ಬಹುಮಾನ ನೀಡುವ ಮೂಲಕ ತೆರೆ ಎಳೆಯಲಾಯಿತು.

ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ್ದ ಉತ್ತಮ ರಾಸುಗಳನ್ನು ಪಶು ಸಂಗೋಪನೆ ಇಲಾಖೆಯ ಅಧಿಕಾರಿಗಳು ಆಯ್ಕೆ ಮಾಡಿದರು. ಮಠದ ಶ್ರೀಶಿವಬಸವ ಸ್ವಾಮೀಜಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ರೈತರ ಎದುರು ಆಯ್ಕೆ ಪಟ್ಟಿಯನ್ನು ತೆರೆದು ಹೆಸರುಗಳನ್ನು ಘೋಷಣೆ ಮಾಡಿದರು.

ಬಳಿಕ ಬಹುಮಾನಕ್ಕೆ ಆಯ್ಕೆಯಾದ 81ರಾಸುಗಳ ಮಾಲೀಕರಿಗೆ 4 ಗ್ರಾಂ ಚಿನ್ನದ ನಾಣ್ಯಗಳನ್ನು ಬಹುಮಾನವಾಗಿ ವಿತರಿಸಲಾಯಿತು.

ಬಳಿಕ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ರೈತರು ಬಹಳ ಉತ್ಸಾಹದಿಂದ ಜಾತ್ರಾ ಮಹೋತ್ಸವಲ್ಲಿ ರಾಸುಗಳನ್ನು ಕಟ್ಟುವ ಮೂಲಕ ಜಾತ್ರೆಗೆ ಮೆರಗು ನೀಡಿದ್ದಾರೆ. ಸರ್ಕಾರದ ವಿವಿಧ 28 ಇಲಾಖೆಗಳು, ಗ್ರಾಪಂ ಅಧಿಕಾರಿಗಳು, ರೈತರ ಸಹಕಾರದಿಂದ ಐತಿಹಾಸಿಕ ಜಾತ್ರೆ ಯಶಸ್ಸು ಕಂಡಿದೆ. ಉತ್ತಮ ರಾಸುಗಳ ಬಹುಮಾನ ಆಯ್ಕೆ ಮಾಡುವ ವಿಚಾರದಲ್ಲಿ ತಮ್ಮ ಪಾತ್ರವಿಲ್ಲ. ಪಶು ಇಲಾಖೆಯ ಅಧಿಕಾರಿಗಳು ಉತ್ತಮ ರಾಸುಗಳನ್ನು ಯಾವುದೇ ಶಿಫಾರಸು ಇಲ್ಲದೆ ಆಯ್ಕೆ ಮಾಡಿದ್ದಾರೆ. ಬಹುಮಾನ ಸಿಗದ ರೈತರು ಬೇಸರ ಮಾಡಿಕೊಳ್ಳಬಾರದು. ಜಾತ್ರೆಯಲ್ಲಿ ಭಾಗವಹಿಸಿದ್ದ ಎಲ್ಲ ರೈತರೂ ನನ್ನ ಪ್ರಕಾರ ಗೆದ್ದಂತೆ. ರಾಸುಗಳ ಮಾಲೀಕರು ತಮ್ಮ ಮಕ್ಕಳನ್ನು ಸಾಕಿದಂತೆ ರಾಸುಗಳನ್ನು ಸಾಕಿ ಜಾತ್ರೆಗೆ ಕರೆ ತಂದಿದ್ದಾರೆ. ಈ ಜಾತ್ರೆಯಲ್ಲಿ ಆಗಿರುವ ಲೋಪದೋಷಗಳನ್ನು ತಿದ್ದಿಕೊಂಡು ಮುಂದಿನ ವರ್ಷದ ಜಾತ್ರೆಯನ್ನು ಮತ್ತಷ್ಟು ಯಶಸ್ವಿಗೊಳಿಸಲಾಗುವುದು ಎಂದರು.

ರಾಮಯೋಗೀಶ್ವರ ಮಠದ ಶಿವ ಬಸವಸ್ವಾಮೀಜಿ ಮಾತನಾಡಿ, ಎಲ್ಲರ ಶ್ರಮದಿಂದ ಜಾತ್ರೆ ಯಶಸ್ವಿಯಾಗಿ ನಡೆದಿದೆ. ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಪರಿಶ್ರಮ ಹೆಚ್ಚಾಗಿದೆ. ಮಠಗಳು ಯಾವುದೇ ಜಾತಿ ಧರ್ಮಕ್ಕೆ ಸೀಮಿತವಾಗಿಲ್ಲ, ಮಠಗಳು ಸಾರ್ವಜನಿಕರ ಸ್ವತ್ತು, ಎಲ್ಲರೂ ಜಾತಿ ಭೇದದ ಭಾವನೆ ಬಿಟ್ಟು ಇದು ನಮ್ಮಮಠ ಎಂಬ ಭಾವನೆಯಲ್ಲಿ ಮಠದ ಪ್ರಗತಿಗೆ ಸಹಕಾರ ನೀಡಬೇಕು. ಮಠದ ವಿಚಾರವಾಗಿ ಕೆಲವರು ಉದ್ದೇಶಪೂರ್ವಕವಾಗಿ ಅಪಪ್ರಚಾರ ಮಾಡಿದ್ದಾರೆ. ಮಠ ಸಾರ್ವಜನಿಕರ ಸ್ವತ್ತೇ ಹೊರತು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ ಎಂದರು.

ಉತ್ತಮ ರಾಸುಗಳಿಗೆ ಚಿನ್ನದ ಬಹುಮಾನ: ಜಾತ್ರೆಯಲ್ಲಿ ಪಾಲ್ಗೊಂಡಿದ್ದ ಸಾವಿರಾರು ರಾಸುಗಳಿಗೆ ಆಯ್ಕೆಯಾದ 81 ಉತ್ತಮ ರಾಸುಗಳಿಗೆ 4 ಗ್ರಾಮಿನಂತೆ 300ಕ್ಕೂ ಹೆಚ್ಚು ಗ್ರಾಂ ಚಿನ್ನದ ನಾಣ್ಯಗಳು, ಬಕೆಟ್ ಬಹುಮಾನವಾಗಿ ವಿತರಿಸಿ ಪ್ರಮಾಣ ಪತ್ರ ನೀಡಲಾಯಿತು.

ಬಹುಮಾನಿತ ರಾಸುಗಳ ವಿವರ: ಹಾಲು ಹಲ್ಲಿನ ಜೋಡಿ ಕರುಗಳ ವಿಭಾಗ: ಶಶಿಧರ್, ಹಿರೋಡೆ ಬೀದಿ ಪಾಂಡವಪುರ, ಬಸವಣ್ಣ ಹೊನ್ನೇನಹಳ್ಳಿ ಪಾಂಡವಪುರ, ನಡಕರೀಗೌಡ ಬೇವಿನಕುಪ್ಪೆ ಪಾಂಡವಪುರ, ಪ್ರವೀಣ್ ಪಡುವಾರಹಳ್ಳಿ ಮೈಸೂರು, ಪೈ.ಶಿವಕುಮಾರ್ ಗಂಜಾಂ, ಶಿವಣ್ಣ ಚೀಕನಹಳ್ಳಿ ಕೆ.ಆರ್.ಪೇಟೆ, ಅಭಿನಂದನ್ ಹೊಳಲು ಮಂಡ್ಯ, ಹೋರಿ ಮಾದಪ್ಪ ಮೈಸೂರು, ಎಚ್.ಬಿ.ದೊಡ್ಡೇಗೌಡ ಹೊಳಲು ಮಂಡ್ಯ, ಕಾರ್ತಿಕ್ ಮೋದೂರು ಕೆ.ಆರ್.ಪೇಟೆ.

ಎರಡು ಹಲ್ಲಿನ ಜೋಡಿ ಎತ್ತುಗಳ ವಿಭಾಗ: ತೇಜಸ್ ಟಿ.ನರಸೀಪುರ, ರೇವಣ್ಣ ಕೆ.ಆರ್.ಪೇಟೆ, ವಿನೋದ್ ಟಿ.ನರಸೀಪುರ, ಅನಿಲ್‌ಕುಮಾರ್ ಬೇವಿನಕುಪ್ಪೆ, ಲಿಖಿತ್‌ಗೌಡ ಪಾಂಡವಪುರ, ಮರಿಯಪ್ಪ ಗಂಜಾಂ, ಚಲುವರಾಜು ಶ್ಯಾದನಹಳ್ಳಿ,

ನಾಲ್ಕು ಹಲ್ಲಿನ ಜೋಡಿ ಎತ್ತುಗಳ ವಿಭಾಗ: ಮಂಜುನಾಥ್ ಬೆಂಗಳೂರು ಪೂರ್ವ, ಹೇಮೇಶ್ ಸೀಹಳ್ಳಿ ಟಿ.ನರಸೀಪುರ, ಪುನೀತ ಗಂಜಾಂ, ನಾಗರಾಜು ಹೊಳಲು ಮಂಡ್ಯ, ರವಿಕುಮಾರ್ ಹಾರೋಹಳ್ಳಿ, ಸಂದೀಪ್ ಹಿರೀಸಾವೆ, ಸೋಮಣ್ಣ ಕಾಳಿಸಿದ್ದನಹುಂಡಿ,

ಆರು ಹಲ್ಲಿನ ಜೋಡಿ ಎತ್ತುಗಳ ವಿಭಾಗ: ವಿಜಯಕುಮಾರ್ ಕೆ.ಬೆಟ್ಟಹಳ್ಳಿ, ರವಿಕುಮಾರ್ ಕಡಕೋಳ,ಮೈಸೂರು, ನಿರಂಜನ್ ಕೆನ್ನಾಳು, ರವಿ ಕಡತನಾಳು, ಪೂಜಾರಿ ನಾಗರಾಜು ಸಾತನೂರು, ಶಿವನಂಜೇಗೌಡ ಚಿಕ್ಕಪಾಳ್ಯ, ಹೊನ್ನಗಾಗಯ್ಯ ವಿರೂಪಸಂದ್ರ ರಾಮನಗರ.

ಬಾಯಿಗೂಡಿದ ಜೋಡಿ ಎತ್ತುಗಳ ವಿಭಾಗ: ಆಲೆಮೆನೆ ಬಲರಾಮೇಗೌಡ ಪಾಂಡವಪುರ, ಚಂದ್ರಶೇಖರ್ ದೊಡ್ಡ ಅರಸಿನಕೆರೆ, ಶಿವಣ್ಣ ಮಿರ್ಲೆ, ಸಂತೋಷ್ ಹಳ್ಳನಾಯಕನಹಳ್ಳಿ ಬೆಂಗಳೂರು, ರಾಜು ಕಾಳಿಸಿದ್ದಹುಂಡಿ ಮೈಸೂರು, ಕುಮಾರ ದೊಡ್ಡಗಾಡಿಗನಹಳ್ಳಿ, ಗೋಪಾಲಕೃಷ್ಣ ನೆಲಮನೆ, ರೇವಂತಗೌಡ ಕೆನ್ನಾಳು, ಶಶಿಧರ್ ಹಳೇಕೆಂಪಯ್ಯನಹುಂಡಿ, ಕೃಷ್ಣೇಗೌಡ ತಿಮ್ಮನಕೊಪ್ಪಲು.

ಹಾಲುಹಲ್ಲಿನ ಜೋಡಿ ಕಡಸುಗಳ ವಿಭಾಗ: ಅನಿಲ್ ಕುಮಾರ್ ಮಿರ್ಲೆ, ಕೆಂಚಮ್ಮ ಕೋಟೆಹುಣಸಿಗನಹಳ್ಳಿ, ಮಂಜು ನಂಜೇಗೌಡನದೊಡ್ಡಿ, ಪುಟ್ಟರಾಜು ವಿಠಲಾಪುರ, ಕೃಷ್ಣ ಬೆಟ್ಟಹಳ್ಳಿ ಎಸ್.ಆರ್.ಪಟ್ಟಣ್ಣ.

ಎರಡು ಹಲ್ಲಿನ ಕಡಸುಗಳ ವಿಭಾಗ: ಮಹೇಶ್ ಕೆ.ಆರ್.ಪೇಟೆ, ರೇಣು ಚೀಕನಹಳ್ಳಿ, ಜೋಗಪ್ಪ ಮೇಗಲಕೊಪ್ಪಲು, ಮಹದೇವು ಬೀಡನಹಳ್ಳಿ ಟಿ.ನರಸೀಪುರ, ಸಿದ್ದಪ್ಪ ಕಳ್ಳೀಪುರ ಟಿ.ನರಸೀಪುರ.

ನಾಲ್ಕು ಹಲ್ಲಿನ ಜೋಡಿ ಕಡಸುಗಳ ವಿಭಾಗ: ರವಿಕುಮಾರ್ ಹಳೇ ಬೂದನೂರು, ಅಶೋಕ ರಾಗಿಮುದ್ದನಹಳ್ಳಿ, ಪ್ರಸನ್ನ ಹಳೇ ಸಾಯಪನಹಳ್ಳಿ, ಮಂಜು ಮರಡಿಕೊಪ್ಪಲು, ಆಕಾಶ್ ಎಂ.ಹೊಸೂರು,

ಆರು ಹಲ್ಲಿನ ಕಡಸುಗಳು: ಮಣಿ ಮಹದೇವು ಬಿ.ಸೀಹಳ್ಳಿ, ಶಿವಣ್ಣ ಶೆಟ್ಟಿ ಕಳ್ಳೀಪುರ, ಹುಚ್ಚೇಗೌಡ ಬೀಡನಹಳ್ಳಿ, ಲಿಂಗರಾಜು ಕೊತ್ತತ್ತಿ, ಉಮೇಶ್ ಎಂ.ಹೊಸೂರು.

ಬಾಯಿಗೂಡಿದ ಜೋಡಿ ಕಡಸು: ಕೃಷ್ಣೇಗೌಡ ಅಕ್ಕಿಹೆಬ್ಬಾಳು, ಸ್ವಾಮೀಗೌಡ ಎಂ.ಹೊಸೂರು, ಪರಶಿವಮೂರ್ತಿ ಎಂ.ಎಲ್.ಹುಂಡಿ, ಚೇತನ್ ಪುರಿಗಾಲಿ, ಸಚ್ಚಿನ್ ತೆಂಡೇಕೆರೆ.

ಹಾಲು ಹಲ್ಲಿನ ಬೀಜದ ಹೋರಿ ವಿಭಾಗ: ಸಾಗರ್ ಹುಳೇನಹಳ್ಳಿ, ವಿನು ಸೋನಗಹಳ್ಳಿ, ಶಾಂತರಾಜು ಬ್ಯಾಟರಾಯನಕೊಪ್ಪಲು. ಎರಡು ಹಲ್ಲಿನ ಬೀಜದ ಹೋರಿ: ಸೋಮೇಗೌಡ ಕುರುಬಹಳ್ಳಿ, ಪುಟ್ಟರಾಜು ಹೊಸಕೋಟೆ, ನರಸೇಗೌಡ ಹೊಸಮಾವಿನಕೆರೆ.

ನಾಲ್ಕು ಹಲ್ಲಿನ ಬೀಜದ ಹೋರಿ: ಮರಿಯಪ್ಪ ಹುಣಸೂರು, ರೇವಣ್ಣ ಅಂಜನಾಪುರ, ಗೋಪಾಲಗೌಡ ಹಳೇಮಾವಿನಕೆರೆ. ಆರು ಹಲ್ಲಿನ ಬೀಜದ ಹೋರಿ: ಚಿಕ್ಕಣ್ಣ ದೇವರ ದೊಡ್ಡಿ ರಾಮನಗರ, ಪ್ರಕಾಶ್ ಹಳೇಮಾವಿನಕೆರೆ, ರಂಜನ್ ಗುಮ್ಮನಹಳ್ಳಿ ಸಾಲಿಗ್ರಾಮ.

ಬಾಯಿಗೂಡಿದ ಬೀಜದ ಹೋರಿ: ನಂಜೇಗೌಡ ಬನ್ನಂಗಾಡಿ, ಅನಿಲ್‌ಕುಮಾರ್ ಅಂಕನಹಳ್ಳಿ ಹುಣಸೂರು, ಮೋಹನ್ ಕುಮಾರ್ ಮುತ್ತಪುರದ ದೊಡ್ಡಿ ಈ ರೈತರಿಗೆ ಬಹುಮಾನ ನೀಡಲಾಯಿತು. ಬಹುಮಾನ ವಿಭಾಗದಲ್ಲಿ ಭಾಗವಹಿಸಿದ ಎಲ್ಲ ರೈತರಿಗೂ ಸಮಾಧಾನಕರ ಬಹುಮಾನ ವಿತರಿಸಲಾಯಿತು.

ಸಮಾರಂಭದಲ್ಲಿ ತಹಸೀಲ್ದಾರ್ ಎಸ್.ಸಂತೋಷ್, ತಾಪಂ ಇಒ ಲೋಕೇಶ್ ಮೂರ್ತಿ, ರೈತಸಂಘ ತಾಲೂಕು ಅಧ್ಯಕ್ಷ ವಿಜಯ ಕುಮಾರ್, ಕಾರ್ಯದರ್ಶಿ ವೈ.ಪಿ.ಮಂಜುನಾಥ್, ಮುಖಂಡರಾದ ರಾಘವ ಪ್ರಕಾಶ್, ಶ್ಯಾದನಹಳ್ಳಿ ಚಲುವರಾಜು, ಬನ್ನಂಗಾಡಿ ಬಿ.ಕೆ.ಶ್ರೀನಿವಾಸ್, ಕಟ್ಟೇರಿ ಗ್ರಾಪಂ ಅಧ್ಯಕ್ಷ ರಮೇಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net