

ಸಿದ್ದಾಪುರ: ತಾಲೂಕು ಬೇಡ ಜಂಗಮ ಸಮಾಜದವರು ತಮ್ಮ ಸಮಾಜಕ್ಕೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ವಿತರಿಸುವಂತೆ ಆಗ್ರಹಿಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಪರಮೇಶ್ವರಯ್ಯ ಕಾನಳಿಮಠ ಮಾತನಾಡಿ, ಬೇಡ ಜಂಗಮರಿಗೆ ಸಂವಿಧಾನಾತ್ಮಕವಾಗಿ ಸಿಗುವ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡಬೇಕು ಎಂದು ಆಗ್ರಹಿಸಿ ನ್ಯಾಯವಾದಿ ಬಿ.ಡಿ. ಹಿರೇಮಠ ನೇತೃತ್ವದಲ್ಲಿ 21 ದಿನಗಳಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಸತ್ಯ ಪ್ರತಿಪಾದನಾ ಸತ್ಯಾಗ್ರಹ ನಡೆಯುತ್ತಿದೆ. ಬೇಡ ಜಂಗಮ ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಸಮಾಜವಾಗಿದೆ. ಹಿಂದಿನಿಂದಲೂ ಬೇಡ ಜಂಗಮ ಪ್ರಮಾಣಪತ್ರ ನೀಡಬೇಕು ಎಂದು ಆಗ್ರಹಿಸುತ್ತಿದ್ದೇವೆ. ಈ ಹಿಂದೆ ಕೆಲವು ಸರ್ಕಾರದ ಸುತ್ತೋಲೆಗಳು ಹಾಗೂ ಕರ್ನಾಟಕ ಸರ್ಕಾರದ ಮುಖ್ಯ ಗೆಜೆಟಿಯರ್ ಸೂರ್ಯನಾಥ ಕಾಮತ್ ಅವರ ವರದಿಯಂತೆ ನಮಗೆ ಜಾತಿ ಪ್ರಮಾಣಪತ್ರ ನೀಡಬೇಕು ಎಂದು ಆಗ್ರಹಿಸಿ ತಹಸೀಲ್ದಾರ್ಗೆ ಮನವಿ ಸಲ್ಲಿಸಿದರು.
ಚಂದ್ರಶೇಖರಯ್ಯ ಕಾನಳ್ಳಿಮಠ, ಸಂಗಮೇಶ, ರಾಜಶೇಖರ ಸ್ವಾಮಿ, ವೀರಭದ್ರ ಸ್ವಾಮಿ, ಅರುಣ ತೆಂಗಿನಮಠ, ಶಿವಕುಮಾರ ಹಿರೇಮಠ,ಪುಟ್ಟಯ್ಯ ಆಲಳ್ಳಿಮಠ, ಮಹಾಲಿಂಗಯ್ಯ ಕುಂದಗೋಳಮಠ, ಶಿವಲಿಂಗಯ್ಯ ಹಂಚಿನಮಠ ಇತರರಿದ್ದರು.