ಬೇಗೂರಲ್ಲಿ ಸೈನಿಕನಿಗೆ ಅದ್ದೂರಿ ಸ್ವಾಗತ

3-KLG-1- soldier sanmana
Published on

ಕಲಘಟಗಿ: ಭಾರತೀಯ ಸೇನೆಯಲ್ಲಿ 24 ವರ್ಷ ಸೇವೆ ಸಲ್ಲಿಸಿ ತಾಯ್ನಾಡಿಗೆ ಮರಳಿದ ತಾಲೂಕಿನ ಬೇಗೂರು ಗ್ರಾಮದ ಸೈನಿಕ ನಿಂಗಪ್ಪ ದೊಡಮನಿ ಅವರನ್ನು ಗ್ರಾಮಸರು ಅದ್ದೂರಿಯಾಗಿ ಸ್ವಾಗತಿಸಿದರು.


ಸೈನಿಕ ನಿಂಗಪ್ಪ ದೊಡಮನಿ ಹೈದ್ರಾಬಾದ್ ಎನ್​ಎಸ್​ಜಿ ಕಮಾಂಡೋ ತರಬೇತಿ ಕೇಂದ್ರ, ಉತ್ತರ ಪ್ರದೇಶದ ಮಿರತ್​ನಲ್ಲಿರುವ ಆರ್​ವಿಸಿ ಸೈನಿಕ ತರಬೇತಿ ಕೇಂದ್ರ, ಜಮ್ಮು ಕಾಶ್ಮೀರ, ಲಡಾಕ್ ಸೇರಿ ದೇಶದ ವಿವಿಧ ಗಡಿ ಭಾಗಗಳಲ್ಲಿ ದೇಶ ಸೇವೆ ಮಾಡಿ ಸೇವಾ ನಿವೃತ್ತರಾಗಿದ್ದಾರೆ. ಈ ಹಿನ್ನೆಲೆ ಗುರುವಾರ ಸ್ವಗ್ರಾಮಕ್ಕೆ ಆಗಮಿಸಿದ ನಿಂಗಪ್ಪ ಅವರನ್ನು ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿದರು.


ವಿವಿಧ ಜನಪದ ವಾದ್ಯಗಳ ಮೆರವಣಿಗೆ ಮೂಲಕ ಗ್ರಾಮಕ್ಕೆ ಕರೆತರಲಾಯಿತು. ದಾರಿಯುದ್ದಕ್ಕೂ ದೇಶಭಕ್ತಿ ಸಾರುವ ಹಾಡುಗಳಿಗೆ ಮಕ್ಕಳು ನೃತ್ಯ ಮಾಡಿದರು. ನಂತರ ಗ್ರಾಮದ ಹುತಾತ್ಮ ಯೋಧ ಮಹಾದೇವಪ್ಪ ಮುತ್ತಗಿ ಪುತ್ಥಳಿಗೆ ಹೂಮಾಲೆ ಹಾಕಿ ಗೌರವ ನಮನ ಸಲ್ಲಿಸಲಾಯಿತು.


ಗ್ರಾಮದ ಹಿರಿಯ ಮಡಿವಾಳಪ್ಪ ನೂಲ್ವಿ, ಮಾಜಿ ಸೈನಿಕರಾದ ಚನ್ನಪ್ಪ ಕಾಮದೇನು, ಬಸಪ್ಪ ಜಿನ್ನೂರು, ಈರಪ್ಪ ರೊಟ್ಟಿ, ಮಂಜುನಾಥ ಬೋಳಣ್ಣವರ, ಗಜಾನನ ಮೇಟಿ ಗೆಳೆಯರ ಬಳಗದ ಬಸವರಾಜ ಕಂಟೆಪ್ಪಗೌಡರ, ಮಲ್ಲಿಕಾರ್ಜುನ ಧನಿಗೊಂಡ, ಬಸವಣ್ಣೆಪ್ಪ ಬೋಳಣ್ಣವರ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಗುರನಾಥ ಹರಿಜನ, ಸಿದ್ದಪ್ಪ ನಿಗದಿ, ಬಸವರಾಜ ಮೂಗಣ್ಣವರ, ಪರಮೇಶ್ವರ ಸುಣಗಾರ, ಹರೀಶ ಚಳಮಟ್ಟಿ, ಡಾ. ಸುರೇಶ ಕಳಸಣ್ಣವರ, ಬಸವರಾಜ ಸುಳ್ಳದ, ಮಂಜುನಾಥ ಮೂಗಣ್ಣವರ, ಗಿರೀಶ ಬಂಡಿ, ಗ್ರಾಮಸ್ಥರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net