ಬೆಳೆ ಹಾನಿ ಜಂಟಿ ಸಮೀಕ್ಷೆ

skp corn crop
ನೀರು ನಿಂತು ಹಾಳಾಗುತ್ತಿರುವ ಮೆಕ್ಕೆಜೋಳ.
Published on

ತುಮಕೂರು: ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನಲ್ಲಿ ಅತಿ ಹೆಚ್ಚು ಮಳೆಯಿಂದ ಬೆಳೆಹಾನಿಯಾದ ಕ್ಷೇತ್ರಗಳಿಗೆ ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಅ.29ರಂದು ಭೇಟಿ ನೀಡಿ ಜಂಟಿ ಸಮೀಕ್ಷೆ ಕೈಗೊಳ್ಳಲಿದ್ದಾರೆ.

ಜಿಲ್ಲೆಯಲ್ಲಿ ಅಕ್ಟೋಬರ್​ನಲ್ಲಿ 115.2 ಮಿಮೀ. ವಾಡಿಕೆ ಮಳೆಯಿದ್ದು, ಇಲ್ಲಿಯವರೆಗೆ 271.30 ಮಿಮೀ ಮಳೆಯಾಗಿದೆ, ಮುಂಗಾರು ಹಂಗಾಮಿನಲ್ಲಿ ಬೆಳೆದ ಬೆಳೆಗಳಲ್ಲಿ ಇಲ್ಲಿಯವರೆಗೆ 108.72 ಹೆಕ್ಟೇರ್​ ಪ್ರದೇಶದಲ್ಲಿ ಭತ್ತ, ರಾಗಿ, ನೆಲಗಡಲೆ, ಮುಸುಕಿನ ಜೋಳ, ಹತ್ತಿ ಮತ್ತು ಇತರೆ ಕೃಷಿ ಬೆಳೆಗಳು ಹಾಗೂ ಹಿಂಗಾರು ಹಂಗಾಮಿನಲ್ಲಿ ಬೆಳೆದ ಬೆಳೆಗಳಲ್ಲಿ ಇಲ್ಲಿಯವರೆಗೆ 93.68 ಹೆಕ್ಟೇರ್​ ಪ್ರದೇಶದಲ್ಲಿ ತೋಟಗಾರಿಕಾ ಬೆಳೆಗಳು ಹಾನಿಯಾಗಿದೆ.

ಬೆಳೆ ಹಾನಿಯಾದ ರೈತ ಫಲಾನುಭವಿಗಳ ವಿವರಗಳನ್ನು ಸಂಬಂಧಪಟ್ಟ ಗ್ರಾಮ ಪಂಚಾಯತಿ, ನಾಡಕಚೇರಿ, ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ತೋಟಗಾರಿಕಾ ನಿರ್ದೇಶಕರ ಕಚೇರಿ ಹಾಗೂ ತಾಲೂಕು ಕಚೇರಿಗಳಲ್ಲಿ ಈಗಾಗಲೇ ಪ್ರಕಟಿಸಲಾಗಿದೆ.

ಬೆಳೆ ಹಾನಿ ಬಗ್ಗೆ ರೈತರಲ್ಲಿ ಯಾವುದೇ ದೂರುಗಳಿದ್ದಲ್ಲಿ ಕೃಷಿ ಇಲಾಖೆ ಸಹಾಯವಾಣಿ : 8884006306, 8884006308, 0816-2278474, ತೋಟಗಾರಿಕೆ ನಿರ್ದೇಶಕರು, ತುಮಕೂರು- 9686503500, ಗುಬ್ಬಿ- 9535781963, ಕುಣಿಗಲ್​ -9980073909, ತುರುವೇಕೆರೆ- 9448416334, ಚಿಕ್ಕನಾಯಕನಹಳ್ಳಿ- 9686056705, ತಿಪಟೂರು- 9845014293, ಶಿರಾ- 9844042356, ಕೊರಟಗೆರೆ- 9448001644, ಮಧುಗಿರಿ -9611789551, ಪಾವಗಡ- 9448448970 ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net