ಬೆಳೆ ಸಮೀಕ್ಷೆ ಮೊಬೈಲ್ ಆಪ್ ಕಾರ್ಯಾರಂಭಕ್ಕೆ ಚಾಲನೆ

13-RNR-01
Published on

ರಾಣೆಬೆನ್ನೂರ: ರೈತರು ಸ್ವಾವಲಂಬಿಯಾಗಿ ತಮ್ಮ ಬೆಳೆಗಳನ್ನು ತಾವೇ ಸಮೀಕ್ಷೆಗೆ ಒಳಪಡಿಸುವ ದೃಷ್ಟಿಯಿಂದ ಸರ್ಕಾರ ಮೊಬೈಲ್ ಆಪ್ ರೂಪಿಸಿದ್ದು, ಆ. 24ರೊಳಗೆ ಎಲ್ಲ ರೈತರು ಈ ಆಪ್ ಮೂಲಕ ಬೆಳೆ ಸಮೀಕ್ಷೆ ಮಾಡಿ ಫೋಟೋ ಅಪಲೋಡ್ ಮಾಡಬೇಕು ಎಂದು ಶಾಸಕ ಅರುಣಕುಮಾರ ಪೂಜಾರ ಮನವಿ ಮಾಡಿದರು.

ತಾಲೂಕಿನ ಕರೂರ ಗ್ರಾಮದ ರೈತರ ಜಮೀನಿನಲ್ಲಿ ಬೆಳೆ ಸಮೀಕ್ಷೆ ಮೊಬೈಲ್​ಆಪ್ ಕಾರ್ಯಾರಂಭಕ್ಕೆ ಗುರುವಾರ ಚಾಲನೆ ನೀಡಿ, ಅವರು ಮಾತನಾಡಿದರು.

ಈ ಹಿಂದೆ ಬೆಳೆ ಸಮೀಕ್ಷೆಯನ್ನು ಖಾಸಗಿಯವರಿಂದ ಮಾಡಿಸಲಾಗುತ್ತಿತ್ತು. ಇದರಿಂದ ಬಹಳಷ್ಟು ಲೋಪದೋಷ ಕಂಡು ಬಂದ ಹಿನ್ನೆಲೆಯಲ್ಲಿ ಸರ್ಕಾರ ಈ ಬಾರಿ ಮೊಬೈಲ್ ಆಪ್ ಮೂಲಕ ಸ್ವತಃ ಆಯಾ ಜಮೀನಿನ ರೈತರೇ ಬೆಳೆ ಸಮೀಕ್ಷೆ ಮಾಡಿ ಫೋಟೋಗಳನ್ನು ಅಪಲೋಡ್ ಮಾಡುವ ವ್ಯವಸ್ಥೆ ಕಲ್ಪಿಸಿದೆ.

ಇದರಿಂದ ಆಯಾ ಗ್ರಾಮದ ರೈತರು ತಮ್ಮ ಜಮೀನಿನಲ್ಲಿ ಏನು ಬೆಳೆ ಹಾಕಿದ್ದಾರೆ ಎಂಬುದು ಸಮರ್ಪಕವಾಗಿ ಮಾಹಿತಿ ಲಭ್ಯವಾಗಲಿದೆ. ಆದ್ದರಿಂದ ಅವರಿಗೆ ಬೆಳೆಹಾನಿ ಪರಿಹಾರ ಹಾಗೂ ಬೆಳೆ ವಿಮೆ ಹಣವನ್ನು ನೀಡಲು ತುಂಬ ಅನುಕೂಲವಾಗಲಿದೆ ಎಂದರು.

ಕೃಷಿ ಇಲಾಖೆ ಉಪ ನಿರ್ದೇಶಕಿ ಸ್ಪೂರ್ತಿ, ಸಹಾಯಕ ಕೃಷಿ ನಿರ್ದೇಶಕ ಜಿ.ಎಂ. ಬತ್ತಿಕೊಪ್ಪ, ಕೃಷಿ ಅಧಿಕಾರಿ ರಿಜ್ವಾನ್​ಅಹ್ಮದ್, ರೈತರಾದ ನಾಗರಾಜ ಚಳಗೇರಿ, ಚಂದ್ರಗೌಡ ಭರಮಗೌಡ್ರ, ಅಜ್ಜನಗೌಡ ಕನ್ನಗೌಡ್ರ, ಪ್ರಕಾಶ ಹೊರಕೇರಿ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net