ಬೆಳೆ ಸಮೀಕ್ಷೆ ಆಪ್​ಗೆ ಚಾಲನೆ

16 YLP 01
Published on

ಯಲ್ಲಾಪುರ: ತಮ್ಮ ಬೆಳೆ ಸಮೀಕ್ಷೆಯನ್ನು ಸ್ವತಃ ರೈತರೇ ನಡೆಸುವ ನೂತನ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದ್ದು, ಇದರ ಕುರಿತು ರೈತರಿಗೆ ಮಾಹಿತಿ ನೀಡುವ ಕಾರ್ಯಕ್ರಮ ಕೃಷಿ ಇಲಾಖೆಯ ಆಶ್ರಯದಲ್ಲಿ ತಾಲೂಕಿನ ಹಿತ್ಲಳ್ಳಿಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಗಣಪತಿ ಶಾಸ್ತ್ರಿ ಮಾಹಿತಿ ನೀಡಿ, ಈ ಆಪ್ ಮೂಲಕ ತಮ್ಮ ಬೆಳೆ ಸಮೀಕ್ಷೆಯನ್ನು ರೈತರು ಸ್ವತಃ ಮಾಡಿ, ಅಪ್​ಲೋಡ್ ಮಾಡಬೇಕಿದೆ. ಪಹಣಿ ಪತ್ರಿಕೆಯಲ್ಲಿ ಬೆಳೆಯ ಮಾಹಿತಿ ತಪ್ಪಾಗಿ ನಮೂದಾಗುವ ಸಮಸ್ಯೆಗಳು ಇದರಿಂದ ದೂರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಸಹಾಯಕ ಕೃಷಿ ನಿರ್ದೇಶಕ ಎಂ.ಎಸ್. ಕುಲಕರ್ಣಿ, ಕೃಷಿ ಅಧಿಕಾರಿ ಪ್ರಮೀಳಾ ಗೋಡ್ಸೆ ಹಾಗೂ ಕೃಷಿಕರು ಭಾಗವಹಿಸಿದ್ದರು. ಕೃಷಿ ಅಧಿಕಾರಿಗಳು ರೈತರ ತೋಟದಲ್ಲಿ ಆಪ್ ಬಳಕೆ ಹಾಗೂ ಅದರ ಮೂಲಕ ತಮ್ಮ ಬೆಳೆ ಸಮೀಕ್ಷೆ ವಿಧಾನವನ್ನು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net