ಬೆಳಗುಂಬ ಗ್ರಾಪಂಗೆ ತೋಂಟಾರಾಧ್ಯ ಅಧ್ಯಕ್ಷ

25arsph1ep
ಬೆಳಗುಂಬ ಗ್ರಾಮ ಪಂಚಾಯಿತಿಗೆ ಆಯ್ಕೆಯಾದ ಅಧ್ಯಕ್ಷ ತೋಂಟಾರಾಧ್ಯ ಹಾಗೂ ಉಪಾಧ್ಯಕ್ಷೆ ಭಾಗ್ಯಮ್ಮ ಅವರನ್ನು ಶಾಸಕ ಕೆ.ಎಂ.ಶಿವಲಿಂಗೇಗೌಡ ಹಾಗೂ ಗ್ರಾಪಂ ಸದಸ್ಯರು, ಬೆಂಬಲಿಗರು ಅಭಿನಂದಿಸಿದರು. ಮುಖಂಡ ಎಂ.ಜಿ.ಶಿವಶಂಕರಸ್ವಾಮಿ, ವೇದಮೂರ್ತಿ, ಜಯಣ್ಣ ಸಿದ್ದೇಶ್ ಇದ್ದರು.
Published on

ಅರಸೀಕೆರೆ: ತಾಲೂಕಿನ ಬೆಳಗುಂಬ ಗ್ರಾಮ ಪಂಚಾಯಿತಿಯ ಎರಡನೇ ಅವಧಿಗೆ ಅಧ್ಯಕ್ಷರಾಗಿ ತೋಂಟಾರಾಧ್ಯ ಹಾಗೂ ಉಪಾಧ್ಯಕ್ಷೆಯಾಗಿ ಭಾಗ್ಯಮ್ಮ ಅವಿರೋಧವಾಗಿ ಆಯ್ಕೆಯಾದರು.

20 ಸದಸ್ಯ ಬಲದ ಪಂಚಾಯಿತಿಗೆ ಮಂಗಳವಾರ ಚುನಾವಣೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ತೋಂಟಾರಾಧ್ಯ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಭಾಗ್ಯಮ್ಮ ಮಾತ್ರ ಉಮೇದುವಾರಿಕೆ ಸಲ್ಲಿಸಿದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ನವ್ಯಶ್ರೀ ಆಯ್ಕೆಯನ್ನು ಪ್ರಕಟಿಸಿದರು. ಸುದ್ದಿ ತಿಳಿಯುತ್ತಿದ್ದಂತೆ ಹೊರಗೆ ಜಮಾಯಿಸಿದ್ದ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಶಾಸಕ ಕೆ.ಎಂ.ಶಿವಲಿಂಗೇಗೌಡ, ಮುಖಂಡ ಎಂ.ಜಿ.ಶಿವಶಂಕರಸ್ವಾಮಿ, ಬೆಳಗುಂಬ ಬಾಬು, ಸಿದ್ದರಾಜು, ಸದಸ್ಯರಾದ ವೇದಮೂರ್ತಿ, ಜಯಣ್ಣ ಸಿದ್ದೇಶ್ ಸೇರಿ ಗ್ರಾಪಂ ಸದಸ್ಯರು ಹಾಗೂ ಇತರರು ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net