ಬೆಳಗಾವಿ ಉದ್ಯಮಿಗಳ ಮನೆ, ಕಚೇರಿ ಮೇಲೆ ಐಟಿ ದಾಳಿ

05
Published on

ಬೆಳಗಾವಿ: ಅಕ್ರಮ ಆಸ್ತಿ ಸಂಪಾದನೆ, ತೆರಿಗೆ ವಂಚನೆ ದೂರಿನ ಆಧಾರದ ಮೇಲೆ ನಗರದ ವಿವಿಧೆಡೆ ಉದ್ಯಮಿಗಳ ಮನೆ, ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ (ಐಟಿ)ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿ, ದಾಖಲೆಗಳನ್ನು ತಪಾಸಣೆ ನಡೆಸಿದ್ದಾರೆ.

ಸಕ್ಕರೆ ಕಾರ್ಖಾನೆ, ಐರಾನ್ ಹಾಗೂ ಗ್ರಾನೈಟ್ ಉದ್ಯಮ ಕ್ಷೇತ್ರದಲ್ಲಿ ಹೆಸರು ಮಾಡಿರುವ ದೊಡ್ಡಣ್ಣವರ ಉದ್ಯಮಗಳ ಕಂಪನಿ ಕಚೇರಿ,ಮನೆ ಮೇಲೂ ಬೆಂಗಳೂರು, ಗೋವಾ ಐಟಿ ಅಧಿಕಾರಿಗಳು ಜಂಟಿ ದಾಳಿ ಬೆಳಗ್ಗೆಯಿಂದ ರಾತ್ರಿಯವರೆಗೆ ಮುಂದುವರಿದಿದೆ.

ಕಾಗವಾಡ ತಾಲೂಕಿನಲ್ಲಿ ಎರಡು ಸಕ್ಕರೆ ಕಾರ್ಖಾನೆಗಳು, ಕಬ್ಬಿಣ ಹಾಗೂ ಗ್ರಾನೈಟ್ ಉದ್ಯಮಿಯಾಗಿರುವ ದೊಡ್ಡಣ್ಣವರ ಕುಟುಂಬವು ದೇಶ, ವಿದೇಶಗಳಲ್ಲಿ ಕೆಲ ಉದ್ಯಮಗಳ ಒಡೆತನ ಹೊಂದಿದೆ. ಕಬ್ಬಿಣ ಹಾಗೂ ಗ್ರಾನೈಟ್ ರಫ್ತು ಮಾಡುವುದರಲ್ಲಿ ಹೆಸರು ಪಡೆದುಕೊಂಡಿದೆ.

ನಾಲ್ಕು ಕಡೆ ಐಟಿ ಅಧಿಕಾರಿಗಳು ಪ್ರತ್ಯೇಕವಾಗಿ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ನಿಯಮ ಮೀರಿ ಆಸ್ತಿ ಸಂಪಾದನೆ, ದೇಶ, ವಿದೇಶಗಳಲ್ಲಿ ಬೇನಾಮಿ ಹೆಸರಿನಲ್ಲಿ ಕೋಟ್ಯಂತರ ರೂ. ಹೂಡಿಕೆ ಮಾಡಿರುವ ಹಿನ್ನೆಲೆ ದಾಳಿ ನಡೆದಿದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net