ಬೆಂಬಲ ಬೆಲೆಯಲ್ಲಿ ಉತ್ಪನ್ನಗಳ ಖರೀದಿ

bkt-28-1
Published on

ಬಾಗಲಕೋಟೆ: ಕೇಂದ್ರ ಸರಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ಸೂರ್ಯಕ್ರಾಂತಿ ಉತ್ಪನ್ನಕ್ಕೆ ಪ್ರತಿ ಕ್ವಿಂಟಲ್‍ಗೆ 7280 ರೂ. ಹಾಗೂ ಹೆಸರುಕಾಳು ಪ್ರತಿ ಕ್ವಿಂಟಲ್‍ಗೆ 8682 ರೂ.ಗಳಂತೆ ಖರೀದಿ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿದ ಅವರು ಸೂರ್ಯಕ್ರಾಂತಿ ಉತ್ಪನ್ನವನ್ನು ಪ್ರತಿ ಎಕರೆಗೆ 3 ಕ್ವಿಂಟಲ್‍ನಂತೆ ಪ್ರತಿ ರೈತರಿಂದ ಗರಿಷ್ಟ ಪ್ರಮಾಣ 15 ಕ್ವಿಂಟಲ್ ಖರೀದಿಸಲಾಗುತ್ತದೆ. ಖರೀದಿ ಹಾಗೂ ನೋಂದಣಿ ಪ್ರಕ್ರಿಯೆ ಆಗಸ್ಟ 27 ರಿಂದ ಪ್ರಾರಂಭಿಸಲಾಗಿದ್ದು, ಪ್ರಾರಂಭದಿಂದ 45 ದಿನಗಳವರೆಗೆ ರೈತರು ನೋಂದಣಿ ಮಾಡಿಕೊಳ್ಳಬಹುದು. ಖರೀದಿ ಅವಧಿಯನ್ನು 90 ದಿನಗಳವರೆಗೆ ನೋಂದಣಿ ಕಾರ್ಯದ ಜೊತೆಗೆ ಖರೀದಿ ಪ್ರಕ್ರಿಯೆ ಪ್ರಾರಂಭಿಸಲಾಗುತ್ತದೆ.

ಹೆಸರುಕಾಳು ಉತ್ಪನ್ನವನ್ನು ಪ್ರತಿ ಎಕರೆಗೆ 2 ಕ್ವಿಂಟಲ್ ಮತ್ತು ಗರಿಷ್ಠ ಪ್ರಮಾಣ ಪ್ರತಿ ರೈತರಿಂದ 10 ಕ್ವಿಂಟಲ್ ಖರೀದಿಸಲಾಗುತ್ತದೆ. ರೈತರ ನೋಂದಣಿ ಕಾರ್ಯ 45 ದಿನಗಳ ವರೆಗೆ ಹಾಗೂ ಖರೀದಿ ಅವಧಿಯನ್ನು 90 ದಿನಗಳವರೆಗೆ ನಿಗಧಿಪಡಿಸಲಾಗಿದೆ. ನೋಂದಣಿ ಕಾರ್ಯದ ಜೊತೆಗೆ ಖರೀದಿ ಪ್ರಕ್ರಿಯೆ ಪ್ರಾರಂಭಿಸಲಾಗುತ್ತದೆ. ಹೆಸರುಕಾಳು ಗುಣಮಟ್ಟದ ಪ್ರಕಾರ ಪ್ರತಿ ಕ್ವಿಂಟಲ್ ತೂಕದಲ್ಲಿ ಧೂಳು, ಹರಳು, ಹೊಟ್ಟು ಶೇ.2, ಬೆರೆಕೆ ಮಿಶ್ರಣ ಶೇ.3, ಹಾಳಾದ ಕಾಳುಗಳು ಶೇ.3, ಒಡೆದ ಕಾಳುಗಳು ಶೇ.4, ಅಪೂರ್ಣ ಮತ್ತು ಕುಗ್ಗಿದ ಕಾಳುಗಳು ಶೇ.3, ಹುಳುಕಾದ ಕಾಳುಗಳು ಶೇ.4 ಹಾಗೂ ತೇವಾಂಶ ಶೇ.12 ಇರುತ್ತದೆ.

ಜಿಲ್ಲೆಯಲ್ಲಿ ಸ್ಥಾಪಿಸಲಾದ ಖರೀದಿ ಕೇಂದ್ರಗಳಲ್ಲಿ ರೈತರು ನೋಂದಣಿ ಮಾಡಿಕೊಳ್ಳಲು ಕೃಷಿ ಇಲಾಖೆಯಿಂದ ನೀಡಿರುವ ಎಫ್.ಐ.ಡಿ ನಂಬರ ಮತ್ತು ಆಧಾರ ಕಾರ್ಡನ್ನು ನೀಡಿ ನೋಂದಾಯಿಸತಕ್ಕದ್ದು, ಒಂದು ವೇಳೆ ಬೆಳೆ ದರ್ಶಕದಲ್ಲಿ ಮತ್ತು ಪ್ರೂಟ್ಸ್ ತಂತ್ರಾಂಶದಲ್ಲಿ ಬೆಳೆ ಬೆಳೆಯುವುದು ಕಂಡು ಬರದೇ ಇದ್ದಲ್ಲಿ ಹತ್ತಿರದ ಕೃಷಿ ಇಲಾಖೆಗೆ ಹೋಗಿ ಆಕ್ಷೇಪಣೆ ಸಲ್ಲಿಸಿ ಸರಿಪಡಿಸಿಕೊಳ್ಳಬಹುದಾಗಿದೆ. ನೋಂದಣಿ ಸಮಯದಲ್ಲಿ ಆಧಾರ ಕಾರ್ಡ, ಪಹಣಿ ಪತ್ರಿಕೆ, ಆಧಾರ ಲಿಂಕ ಆಗಿರುವ ರಾಷ್ಟ್ರೀಕೃತ ಬ್ಯಾಂಕಿನ ಪಾಸಬುಕ್ಕ ಪ್ರತಿ ಸಲ್ಲಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net