ಬೆಂಗಳೂರಿನಲ್ಲಿ ಅರಸು ಜಯಂತಿ 31ರಂದು

D G SAGAR new
Published on

ಕಲಬುರಗಿ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯಿಂದ ಆ.31ರಂದು ಮಧ್ಯಾಹ್ನ ೧೨ಕ್ಕೆ ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ಸಾಮಾಜಿಕ ನ್ಯಾಯದ ಹರಿಕಾರ ಡಿ.ದೇವರಾಜ ಅರಸು ಜಯಂತ್ಯುತ್ಸವ ಹಾಗೂ ಕೋಮುವಾದಿಗಳನ್ನು ಹಿಮ್ಮೆಟ್ಟಿಸಲು, ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ವರ್ಗಗಳ ಏಕತೆಗಾಗಿ ರಾಜ್ಯ ಮಟ್ಟದ ಬೃಹತ್ ಸಮಾವೇಶ ಆಯೋಜಿಸಲಾಗಿದೆ ಎಂದು ಸಮಿತಿ ರಾಜ್ಯ ಸಂಚಾಲಕ ಡಾ.ಡಿ.ಜಿ.ಸಾಗರ್ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿz್ದÁರೆ. ಮಹಾನಾಯಕ ಡಾ.ಡಿ.ಜಿ.ಸಾಗರ್ ಅವರ ಜೀವನ-ಹೋರಾಟ ಕುರಿತ ಹಿಂದಿ ಭಾಷೆಯ ಪುಸ್ತಕವನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಬಿಡುಗಡೆ ಮಾಡುವರು. ಸಚಿವರಾದ ಡಾ.ಎಚ್.ಸಿ.ಮಹಾದೇವಪ್ಪ, ಪ್ರಿಯಾಂಕ್ ಖರ್ಗೆ, ಡಾ.ಶರಣಪ್ರಕಾಶ ಪಾಟೀಲ್, ಸತೀಶ ಜಾರಕಿಹೊಳಿ, ಬಿ.ನಾಗೇಂದ್ರ, ಶಿವರಾಜ ತಂಗಡಗಿ, ಆರ್.ಬಿ.ತಿಮ್ಮಾಪುರ ಸೇರಿ ರಾಜ್ಯದ ವಿವಿಧ ಶಾಸಕರು, ಮುಖಂಡರು ಭಾಗವಹಿಸಲಿz್ದÁರೆ ಎಂದರು.
ಪ್ರೊ.ಎಚ್.ರುದ್ರಸ್ವಾಮಿ ಅವರು ಅರಸು ಕುರಿತು ಉಪನ್ಯಾಸ ನೀಡಲಿz್ದÁರೆ. ಸಮಾವೇಶಕ್ಕೆ ಜಿ¯್ಲೆಯಿಂದ ೫೦೦ ಮತ್ತು ರಾಜ್ಯದಿಂದ ಸುಮಾರು ೨೫೦೦ ಜನ ಪ್ರಮುಖ ಪದಾಧಿಕಾರಿಗಳು ಭಾಗವಹಿಸಲಿz್ದÁರೆ ಎಂದರು.
ಸುರೇಶ ಹಾದಿಮನಿ, ಎಚ್.ಶಂಕರ್, ಎಸ್.ಪಿ.ಸುಳ್ಳದ್, ಉಮೇಶ ನರೋಣಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net