ಬೆಂಕಿ ತಗುಲಿ ಎರಡು ಮನೆ ಸಂಪೂರ್ಣ ಭಸ್ಮ

6-RNR-03
Published on

ರಾಣೆಬೆನ್ನೂರ: ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಎರಡು ಮನೆಗಳು ಸಂಪೂರ್ಣ ಸುಟ್ಟು ಕರಕಲಾದ ಘಟನೆ ತಾಲೂಕಿನ ಅರೇಮಲ್ಲಾಪುರ ಗ್ರಾಮದಲ್ಲಿ ಬುಧವಾರ ನಡೆದಿದೆ. ಗ್ರಾಮದ ಫಕೀರಪ್ಪ ಹಲವಾಗಿಲ ಹಾಗೂ ಕೋಟೆಪ್ಪ ಎಂಬುವರಿಗೆ ಸೇರಿದ ಮನೆಗಳು ಬೆಂಕಿಗಾಹುತಿಯಾಗಿವೆ. ಘಟನೆಯಲ್ಲಿ ಕುಟುಂಬದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮಂಗಳವಾರ ರಾತ್ರಿ ಎಲ್ಲರೂ ಮಲಗಿದ್ದ ವೇಳೆ ಮಧ್ಯೆರಾತ್ರಿ ಆಕಸ್ಮಿಕವಾಗಿ ಮನೆಗೆ ಬೆಂಕಿ ತಗುಲಿದೆ. ಬೆಂಕಿ ಜೋರಾದ ಕಾರಣ ಪಕ್ಕದ ಕೋಟೆಪ್ಪ ಎಂಬುವರ ಮನೆಗೂ ವ್ಯಾಪಿಸಿದೆ. ಕೂಡಲೆ ಎಚ್ಚೆತ್ತ ಎರಡೂ ಮನೆಯವರು ಹೊರಗೆ ಬಂದಿದ್ದಾರೆ.

ಮನೆಯಲ್ಲಿದ್ದ ಟಿವಿ, ಬಟ್ಟೆ, ಪಾತ್ರೆ, ಜಮೀನು ಹಾಗೂ ಮನೆಗೆ ಸಂಬಂಧಿಸಿದ ಕಾಗದಪತ್ರಗಳು ಹಾಗೂ ಚಿನ್ನಾಭರಣ ಸುಟ್ಟು ಕರಕಲಾಗಿವೆ. ಘಟನಾ ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿಸಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net