

ಕಲಬುರಗಿ: ಹಿರಿಯ ಕತೆಗಾರ ಮಹಾಂತೇಖ ನವಲಕಲ್ ಅವರ ಹೊಸ ಕಥಾ ಸಂಕಲನ ಬುದ್ಧ ಗಂಟೆಯ ಸದ್ದು ಬಿಡುಗಡೆ ಸಮಾರಂಭ ಸೆ.೮ರಂದು ಬೆಳಗ್ಗೆ ೧೧ಕ್ಕೆ ನಗರದ ಕನ್ನಡ ಸಾಹಿತ್ಯ ಪರಿಷತ್ ಅವರಣದ ಕನ್ನಡ ಭವನದಲ್ಲಿ ನಡೆಯಲಿದೆ ಎಂದು ಸಮುದಾಯ ಅಧ್ಯಕ್ಷ ಡಾ.ದತ್ತಾತ್ರೇಯ ಇಕ್ಕಳಕಿ ಹಾಗು ಕಾರ್ಯದರ್ಶಿ ಡಾ.ಶ್ರೀಶೈಲ ಘೂಳಿ ತಿಳಿಸಿದ್ದಾರೆ. ಸಮುದಾಯ ಕಲಬುರಗಿ ಮತ್ತು ಪಲ್ಲವ ಪ್ರಕಾಶನ ಸಹಯೋಗದ ಕಾರ್ಯಕ್ರಮದಲ್ಲಿ ಪಿಯು ಡಿಡಿ ಶಿವಶರಣಪ್ಪ ಮುಳೆಗಾಂವ ಪುಸ್ತಕ ಬಿಡುಗಡೆ ಮಾಡುವರು. ಸಂಸ್ಕೃತಿಕ ಚಿಂತಕ ಪ್ರೊ.ಆರ್.ಕೆ. ಹುಡಗಿ ಅಧ್ಯಕ್ಷತೆ ವಹಿಸುವರು. ಸಿಯುಕೆ ಪ್ರಾಧ್ಯಾಪಕ ಡಾ.ವಿಕ್ರಮ ವಿಸಾಜಿ ಪುಸ್ತಕ ಕುರಿತು ಮಾತನಾಡುವರು. ಬಿ.ಆರ್. ಬುದ್ಧಾ, ಡಾ.ಅಪ್ಪಗೆರೆ ಸೋಮಶೇಖರ, ಡಾ.ಅಶೋಕ ಶೆಟಗಾರ, ರಮೇಶ ಮಾಡಿಯಾಳಕರ್ ಮುಖ್ಯ ಅತಿಥಿಗಳಾಗಿದ್ದಾರೆ. ಡಾ.ಮೀನಾಕ್ಷಿ ಬಾಳಿ ಪ್ರಾಸ್ತಾವಿಕ ಮಾತನಾಡುವರು. ಡಾ.ಪಲ್ಲವ ವೆಂಕಟೇಶ ಹಾಗೂ ಮಹಾಂತೇಶ ನವಲಕಲ್ ಉಪಸ್ಥಿತಿರುವರು. ಲೇಖಕ ಮಹಿಪಾಲರೆಡ್ಡಿ ಮುನ್ನೂರ್ ನುಡಿಸಾರಥ್ಯವಿದ್ದು, ಸಂದೀಪ ಮಾಳಗೆ, ಕಲ್ಯಾಣಿ ಬಜಂತ್ರಿ, ಮೇಘಾ ಚಿಚಕೋಟಿ ಅವರಿಂದ ಜನಪದ ಹಾಡುಗಳ ಪ್ರಸ್ತುತಿ ಇದೆ ಎಂದು ತಿಳಿಸಿದ್ದಾರೆ.