ಬುಡಕಟ್ಟು ಸಿದ್ದಿ ಮನೆಯಲ್ಲಿ ಸಚಿವ ಶ್ರೀರಾಮುಲು ವಾಸ್ತವ್ಯ ಇಂದು

ಸಾಂದರ್ಭಿಕ ಚಿತ್ರ
Published on


ಕಾರವಾರ: ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರು ಡಿ.8 ಬುಡಕಟ್ಟು ಸಿದ್ದಿ ಸಮುದಾಯದ ಮನೆಯೊಂದರಲ್ಲಿ ವಾಸ್ತವ್ಯ ಮಾಡುವರು. ಯಲ್ಲಾಪುರ ತಾಲೂಕಿನ ನಂದೊಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಗೋಡು ಗ್ರಾಮದ ಕೆರೆಕುಂಬ್ರಿಯ ಗಣಪತಿ ರಾಮಾ ಸಿದ್ದಿ ಅವರ ಮನೆಯಲ್ಲಿ ವಾಸ್ತವ್ಯ ಹೂಡುವರು. ಮತ್ತು ಅವರೊಂದಿಗೆ ಸಂವಾದ ನಡೆಸುವರು. ಗಣಪತಿ ರಾಮಾ ಸಿದ್ದಿ ಅವರು ಎಂಎಲ್‌ಸಿ ಶಾಂತಾರಾಮ ಸಿದ್ದಿ ಅವರ ಕಾರು ಚಾಲಕರಾಗಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ, ಹಳಿಯಾಳ ತಾಲೂಕುಗಳಲ್ಲಿ ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿರುವ ಸಿದ್ದಿ ಸಮುದಾಯದ ಜನ ದಕ್ಷಿಣ ಆಫ್ರಿಕಾದ ನಿಗ್ರೋಗಳಂತೆ ಮೈಕಟ್ಟು ಹೋಂದಿದ್ದಾರೆ. ಕಾಡಿನಲ್ಲೇ ವಾಸಿಸುವ ಈ ಸಮುದಾಯ ಸಾಕಷ್ಟು ಪರಿಶಿಷ್ಟ ಪಂಗಡಕ್ಕೆ ಸೇರಿದೆ. ಸಾಕಷ್ಟು ಸಮಸ್ಯೆಗಳನ್ನು ಹೊಂದಿದೆ. ಎರಡು ವರ಼್ಗಳ ಹಿಂದೆ ಬಿಜೆಪಿ ಸಿದ್ದಿ ಸಮುದಾಯದ ಶಾಂತಾರಾಮ ಸಿದ್ದಿ ಅವರನ್ನು ವಿಧಾನಸಭೆಗೆ ನಾಮನಿರ್ದೇಶನ ಮಾಡಿತ್ತು. ನಂತರ ಸಿದ್ದಿಗಳ ಸಂಕಷ್ಟದ ಬಗ್ಗೆ ನಾಡಿಗೆ ಅರಿವಿಗೆ ಬಂದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net