

ಬಾಗಲಕೋಟೆ: ಸತ್ಯ, ನಿಷ್ಠೆ, ಪ್ರಾಮಾಣಿಕತೆಯ ಸಮಾಜಮುಖಿಯಾದ ಜನೋದ್ದಾರ ಪರವಾದ ಈ ಪಯಣದಲ್ಲಿ ಬೀಳೂರು ಅಜ್ಜನವರ ಶಕ್ತಿಯೆ ನನಗೆ ಪ್ರೇರಕವಾಗಿದೆ ಎಂದು ಮಾಜಿ ಶಾಸಕರು, ಬಿ.ವಿ.ವಿ.ಸಂಘದ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಹೇಳಿದರು.
ಅವರು ನಗರದ ಬಿ.ವ್ಹಿ.ವ್ಹಿ.ಎಸ್. ಹೋಮಿಯೋಪಥಿಕ್ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ ಸಂಸ್ಥಾಪಕ ದಿನಾಚಾರಣೆ ಹಾಗೂ ಶ್ರೀ ಬೀಳೂರು ಗುರು ಬಸವ ಮಹಾಸ್ವಾಮಿಗಳ ಶ್ರಾವಣ ಮಾಸದ ಉತ್ಸವವನ್ನು ಜ್ಯೋತಿ ಬೇಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಬೀಳೂರ ಗುರುಬಸವ ಮಹಾಸ್ವಾಮಿಗಳ ಧರ್ಮಭಾನುವಿನ ತತ್ವಾದರ್ಶಗಳ ಅಮರ ಅಭಿದಾನದಲ್ಲಿ ಉದಯವಾದ ಬಿ.ವಿ.ವಿ.ಸಂಘದ ಶಿಕಷಣ ಸೇವೆ ನೀರಂತರ, ಅರಿವು ಆಚಾರ ಸಮನ್ವಿತವಾದ ಲೋಕ ಶಿಕ್ಷಣಗಳಾದ ಜ್ಞಾನ-ವಿಜ್ಞಾನ, ತಂತ್ರಜ್ಞಾನ, ಗಣಕ ವಿಜ್ಞಾನ, ವೈದ್ಯ ವಿಜ್ಞಾನ, ಔಷಧಿ ವಿಜ್ಞಾನ, ಸೇವಾ ವಿಜ್ಞಾನಗಳಿಗೆ ಸಂಬಂಧಿಸಿದಂತೆ ಸೇವಾ ಪಥದಲ್ಲಿ ಸಾಲುದೀಪಗಳನ್ನು ಹಚ್ಚುತ್ತಾ ಮುನ್ನೆಡೆದಿದೆ, “ನೀವು ಕೊಟ್ಟ ದ್ರವ್ಯವ ನಿಮಗಲ್ಲದೆ ಮತ್ತೊಂದಕ್ಕೆ ಕ್ರೀಯೆ ಮಾಡೇನು ನಿಮ್ಮ ಸೊಮ್ಮಿಂಗೆ ಸಲಿಸುವೇನು, ನಿಮ್ಮಾಣೆ ಕೂಡಲಸಂಗಮದೇವಾ”ಎಂಬ ಬಸವಣ್ಣವರ ಆಣೆನುಡಿಯಂತೆ ಸಂಘವು ಅರಿವವನ್ನು ಬಿತ್ತುವುದೇ ನಿಜವಾದ ಪೂಜೆಯಂದು ನಂಬಿ ನಡೆದಿರುವ, ಹಿಂದಿನ ಮಹಾಚೇತನವೇ ಬೀಳೂರು ಶ್ರೀಗಳು ಎಂದರು.
ನಿರ್ವತ್ತ ಪ್ರಾಚಾರ್ಯರಾದ ಎ.ಎಸ್. ಪಾವಟೆ ಮಾತನಾಡಿ ಶ್ರೀ ಬೀಳೂರು ಗುರು ಬಸವ ಮಹಾಸ್ವಾಮಿಗಳು ವಿದ್ಯಾರ್ಥಿಗಳೇ ದೇವರು, ವಿದ್ಯಾಲಯವೇ ದೇವಾಲಯ ಶಿಕ್ಷಣ ಪ್ರಸಾರವೇ ಲಿಂಗಪೂಜೆ ಎಂದು ತಮ್ಮ ಜೀವನವನ್ನು ಸದೃಢ ಸಮಾಜ ನಿರ್ಮಾಣ ಮತ್ತು ಶಿಕ್ಷಣ ಪ್ರಸಾರಕ್ಕಾಗಿ ಮೀಸಲಿರಿಸಿದ ಭಕ್ತಾನುರಾಗಿ ಅವರನ್ನು ಸ್ತುತಿಸುವ ಈ ದಿನ ಅತ್ಯಂತ ಮಹತ್ವದ್ದಾಗಿದೆ ಎಂದರು.
ಪ್ರಾಚಾರ್ಯ ಡಾ.ಅರುಣ ಹೂಲಿ ಮಾತನಾಡಿ ಶ್ರೀ ಬೀಳೂರು ಗುರು ಬಸವ ಮಹಾಸ್ವಾಮಿಗಳು ಕಟ್ಟಿ ಬೆಳೆಸಿದ ಈ ಸಂಘ ಇಂದು ವಿಶ್ವವಿಖ್ಯಾತವಾಗಿದೆ ಅವರ ಸನ್ಮಾರ್ಗದಲ್ಲಿ ಸಂಘದ ಕಾರ್ಯಾಧ್ಯಕ್ಷಾರದ ಡಾ.ವೀರಣ್ಣ ಚರಂತಿಮಠರ ಅವಿರತ ಶ್ರಮದಿಂದ ಇಂದು ದೇಶದ ಶೇಷ್ಠ ವಿದ್ಯಾ ಸಂಸ್ಥೆಗಳ ಸಾಲಿನಲ್ಲಿ ನಿಂತಿದ್ದೇವೆ ಎಂದರು.
ಡಾ.ರವಿ.ಎಸ್.ಕೋಟೆಣ್ಣವರ ಸ್ವಾಗತಿಸಿ ಪರಿಚಯಿಸಿದರು. ಕುಮಾರಿ ಭಾಗ್ಯಾ ವಂದಿಸಿದರು. ಕುಮಾರಿ ಸೃಷ್ಠಿ ತೋಟದ ಕಾರ್ಯಕ್ರಮ ನಿರೂಪಿಸಿದರು.ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಕಾಲೇಜು ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಶ್ರೀ ಮಲ್ಲಿಕಾರ್ಜುನ ಸಾಸನೂರ, ಗುರುಬಸವ ಸೂಳಿಬಾವಿ, ಕುಮಾರ ಹಿರೇಮಠ, ಬಿ.ಎಸ್.ಬೋಳಿಶೇಟ್ಟಿ, ಹಾಗೂ ಬವಿವಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ವಚನ ವಾಚನ ಹಾಗೂ ಭಕ್ತಿ ಗೀತೆಗಳ ಗಾಯನ ಜರುಗಿದವು.