ಬೀಳೂರ ಗುರುಬಸವ ಮಹಾಸ್ವಾಮಿಗಳ ಕಾರ್ತಿಕೋತ್ಸವ

bbaf15b0-4535-4c7b-817b-24e459389954
Published on

ಬಾಗಲಕೋಟೆ: ಪ್ರತಿಷ್ಥಿತ ಬಸವವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಸಂಸ್ಥಾಪಕರಾದ ಪರಮಪೂಜ್ಯ ಶ್ರೀ ಬೀಳೂರು ಗುರುಬಸವ ಮಹಾಸ್ವಾಮಿಗಳ ಕಾರ್ತಿಕೋತ್ಸವ ಶೃದ್ಧಾಭಕ್ತಿಯಿಂದ ಅದ್ಧೂರಿಯಾಗಿ ಜರುಗಿತು.

ಬೇಳಗಿನ ಜಾವ ಬೀಳೂರ ಅಜ್ಜನ ಪ್ರತಿಮೇಗೆ ರುದ್ರಾಭಿಷೇಕ,ಪಂಚಾಮೃತ ಅಭಿಷೇಕ,ಪಂಚಾಕ್ಷರಿ ಮಂತ್ರ ಪಠಣ, ಶಿವಸ್ತೋತ್ರ, ಶಿವನಾಮ ಜಪ ಹಾಗೂ ವಿಶೇಷ ಹೂವಿನ ಅಲಂಕಾರದೊಂದಿಗೆ ಮಹಾಮಂಗಳಾರುತಿ ಮಾಡಲಾಯಿತು, ಸಂಜೆ ಬೀಳೂರ ಅಜ್ಜನ ಮೋರ್ತಿಗೆ ವಿಶೇಷ ಪೂಜೆ ಮಹಾಮಂಗಳಾರುತಿ ಸಲ್ಲಿಸಿ ದೀಪಗಳನ್ನು ಬೇಳಗಿಸುವ ಮೂಲಕ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ ದೀಪೋತ್ಸವಕ್ಕೆ ಚಾಲನೆ ನೀಡಿದರು.


ಕಾರ್ತಿಕೋತ್ಸವ ನಿಮಿತ್ಯ ಬೀಳೂರ ಅಜ್ಜನ ದೇವಸ್ಥಾನ ಆವರಣ ತುಂಬಾ ಬಣ್ಣ ಬಣ್ಣದ ರಂಗೋಲಿ ಬಿಡಿಸಿ ದೀಪಗಳನ್ನು ಅಲಂಕರಿಸಿದ್ದು ಜನರ ಗಮಬ ಸೇಳೆಯಿತು, ಹೆಚ್ಚಿನ ಭಕ್ತಾಧಿಗಳು ಪಾಲ್ಘೊಂಡು ದೀಪಗಳನ್ನು ಹಚ್ಚುವ ಮೂಲಕ ಕಾರ್ತಿಕೋತ್ಸವವನ್ನು ಆಚರಿಸಿದರು.

ಬಿವ್ಹಿ.ವ್ಹಿ.ಸಂಘದ ಬೀಳೂರು ಗುರುಬಸವ ಮಹಾಸ್ವಾಮಿಗಳ ಉತ್ಸವ ಸಮಿತಿಯಿಂದ ಕಾರ್ತಿಕೋತ್ಸವದಲ್ಲಿ ಬಂದAತ ಭಕ್ತಾಧಿಗಳಿಗೆ ಪ್ರಸಾದ ವಿತರಣೆ ಕಾರ್ಯ ಜರುಗಿತು. ಈ ಸಂಧರ್ಭದಲ್ಲಿ ಅಶೋಕ ರೇಣುಕೊಪ್ಪ, ಕುಮಾರ ಹಿರೇಮಠ, ರಾಜು ಪಾಟೀಲ, ರಾಜು ಪಲ್ಲೆದ, ಎಸ್,ಆರ,ಮನಹಳ್ಳಿ, ಚಂದ್ರು ಬ್ಯಾಳಿ, ಬಿ.ಆರ್.ಬೋಳಿಶೇಟ್ಟಿ. ಡಾ ಅರುಣ ಹೂಲಿ,ವಿ,ಆರ್.ಶಿರೂಳ.ಅಶೋಕ ಸೇರಿದಂತೆ ಅನೇಕರು ಬಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net