ಬೀಳಗಿ ಸಿಡಿಪಿಒ ಮೇಲೆ ಶಿಸ್ತು ಕ್ರಮಕ್ಕೆ ಸೂಚನೆ

bkt-1-1
ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲೆಯ ಅಂಗನವಾಡಿ ಮೇಲ್ವಿಚಾರಕರ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಽಕಾರಿ ಶಶಿಧರ ಕುರೇರ ಮಾತನಾಡಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಕೆ.ಪ್ರಭಾಕರ ಇತರರು ಉಪಸ್ಥಿತರಿದ್ದರು.
Published on

ಬಾಗಲಕೋಟೆ: ಅಂಗನವಾಡಿ ಸ್ವಂತ ಕಟ್ಟಡಕ್ಕೆ ಸಂಬAಽಸಿದAತೆ ಗುರುತಿಸಲಾಗುತ್ತಿರುವ ನಿವೇಶನದ ಮಾಹಿತಿಯನ್ನು ಜಿಲ್ಲಾ ಕಚೇರಿಗೆ ಕಳುಹಿಸದೇ ತಮ್ಮ ಹಂತದಲ್ಲಿ ಇಟ್ಟುಕೊಂಡು ಕರ್ತವ್ಯದಲ್ಲಿ ಲೋಪ ಎಸಗಿದ ಬೀಳಗಿ ಶಿಶು ಅಭಿವೃದ್ಧಿ ಯೋಜನಾಽಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಽಕಾರಿ ಶಶಿಧರ ಕುರೇರ ಅಽಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲೆಯ ಅಂಗನವಾಡಿ ಮೇಲ್ವಿಚಾರಕರ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಂಗನವಾಡಿಗೆ ಸ್ವಂತ ನಿವೇಶನ ಗುರುತಿಸಿ ಖರೀದಿಸುವ ಸಲುವಾಗಿ ಬೀಳಗಿ ಪುರಸಭೆಯಿಂದ ಪಡೆಯಲಾದ ನಿವೇಶನದ ಅಂದಾಜು ವೆಚ್ಚದ ಮಾಹಿತಿಯನ್ನು ಜಿಲ್ಲಾ ಕಚೇರಿಗೆ ಕಳುಹಿಸದೇ ವಿಳಂಬ ದೋರಣೆ ಅನುಸರಿಸುವದಲ್ಲದೇ ಹಾರಿಕೆ ಉತ್ತರ ನೀಡುತ್ತಿದ್ದರು. ಕರ್ತವ್ಯದಲ್ಲಿ ಬೇಜವಾಬ್ದಾರಿ ತೋರಿದ ಹಿನ್ನಲೆಯಲ್ಲಿ ಶಿಸ್ತು ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.

ಕಳೆದ ಒಂದು ವರ್ಷದಿಂದ ಸ್ವಂತ ಕಟ್ಟಡ ಇಲ್ಲದ ಅಂಗನವಾಡಿ ಕೇಂದ್ರಗಳ ಪಟ್ಟಿ ಮಾಡಿ ನಿವೇಶನ ಗುರುತಿಸಲು ಸೂಚನೆ ನೀಡಲಾಗಿತ್ತು. ಆದರೆ ಇನ್ನು ಕೆಲವು ಮೇಲ್ವಿಚಾರಕರು ನಿವೇಶನ ಗುರುತಿಸುವ ಕಾರ್ಯದಲ್ಲಿ ಬೇಜವಾಬ್ದಾರಿ ತೋರುತ್ತಿದ್ದು, ಆಯಾ ತಾಲೂಕಾ ಮೇಲ್ವಿಚಾರಕರು ತಮ್ಮ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರಗಳು ಸ್ವಂತ ಕಟ್ಟಡ, ಬಾಡಿಗೆ ಕಟ್ಟಡ ಎಷ್ಟು ಇವೆ. ಸ್ವಂತ ಕಟ್ಟಡಕ್ಕೆ ಗುರುತಿಸಿದ ನಿವೇಶನ ಎಷ್ಟು, ನಿವೇಶನ ಗುರುತಿಸಿರುವ ಬಗ್ಗೆ ದೃಢೀಕರಣ ಸಹಿತ ಮಾಹಿತಿ ನೀಡುವಂತೆ ಒಂದು ತಿಂಗಳ ಗಡುವು ನೀಡಿದರು.

ಆಸಕ್ತಿಯಿಂದ ಕೆಲಸ ಮಾಡಿದರೆ ಎಲ್ಲವೂ ಸಾಧ್ಯವಾಗುತ್ತದೆ. ನಿವೇಶನ ಹುಡುಕಿ ಮಾಹಿತಿ ಪಡೆದ ಶಿಶು ಅಭವೃದ್ಧಿ ಯೋಜನಾಽಕಾರಿಗಳು ಖರೀದಿ ಕುರಿತು ಮೇಲಾಽಕಾರಿಗಳೊಂದಿಗೆ ಚರ್ಚೆ ಮಾಡಬೇಕು. ನಿಮ್ಮ ಜವಾಬ್ದಾರಿ ಹೆಚ್ಚಿಗೆ ಇದೆ. ತುಂಬಾ ಮುತುವರ್ಜಿ ವಹಿಸಿ ಕೆಲಸ ಮಾಡಲು ತಿಳಿಸಿದ ಸಿಇಓ ಅವರು ಆಯಾ ತಾಲೂಕಿನಲ್ಲಿರುವ ನಿವೇಶನ ರಹಿತಿ ನಗರ ಹಾಗೂ ಗ್ರಾಮೀಣ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರಗಳ ಮಾಹಿತಿಯನ್ನು ಪಡೆದುಕೊಂಡರು.

ಅಂಗನವಾಡಿ ಕೇಂದ್ರಗಳಲ್ಲಿ ಪ್ರತಿತಿಂಗಳ ಹಾಜರಾತಿ ಸರಿಯಾಗಿ ಹಾಕುತ್ತಿಲ್ಲ. ಅಂದಾಜು ಲೆಕ್ಕದ ಮೇಲೆ ಹಾಜರಾತಿ ಇದ್ದು, ವಾಸ್ತವವಾಗಿ ನೋಡಿದಾಗ ಬಹಳಷ್ಟು ಕಡಿಮೆ ಇದೆ. ಅಲ್ಲದೇ ಪೋಷನ್ ಟ್ರ‍್ಯಾಕ್‌ನಲ್ಲಿ ಸಹ ವ್ಯತ್ಯಾಸ ಕಂಡುಬರುತ್ತಿದೆ. ಈ ರೀತಿಯ ವ್ಯತ್ಯಾಸ ಆಗಬಾರದು. ಮುಂದಿನ ಮಾಹೆಯಲ್ಲಿ ವ್ಯತ್ಯಾಸ ಕಂಡುಬAದಲ್ಲಿ ಅನಿರೀಕ್ಷಿತವಾಗಿ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಮಕ್ಕಳ ಹಾಜರಾತಿ ಪರಿಶೀಲಿಸಲಾಗುವುದೆಂದು ಎಚ್ಚರಿಕೆ ನೀಡಿದರು.

ಸರ್ಕಾರ ಅಪೌಷ್ಠಿಕ ಮಕ್ಕಳಿಗೆ ಪೌಷ್ಠಿಕಾಂಶವುಳ್ಳ ಆಹಾರ ನೀಡುತ್ತಿದೆ. ಆದರೂ ಸಹ ಅಪೌಷ್ಠಿಕ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಅಂತಹ ಮಕ್ಕಳ ಬಗ್ಗೆ ಆಯಾ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಽಕಾರಿಗಳು ಗಮನ ಹರಿಸಬೇಕು. ಕಾಲ ಕಾಲಕ್ಕೆ ಮಕ್ಕಳ ತೂಕ, ಎತ್ತರ ಪರೀಕ್ಷೆ ಮಾಡಬೇಕು. ಕಡಿಮೆ ಪ್ರಗತಿ ಸಾಽಸಿದ ಮೇಲ್ವಿಚಾರಕರ ಮೇಲೆ ನೋಟಿಸ್ ಜಾರಿ ಮಾಡಬೇಕು. ಶಿಶು ಅಭಿವೃದ್ಧಿ ಯೋಜನಾಽಕಾರಿಗಳು ಕೇವಲ ಅಂಗನವಾಡಿಗಳಿಗೆ ಭೇಟಿ ನೀಡಿದರೆ ಸಾಲದು. ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿರುವ ಮೂಲಭೂತ ಸೌಲಭ್ಯ, ಹಾಜರಾತಿ ಪರಿಶೀಲಿಸಿ ಮುಂದಿನ ಭೇಟಿ ಸಮಯದಲ್ಲಿ ಸುಧಾರಣೆ ಆಗಿರುವ ಬಗ್ಗೆ ಗಮನ ಹರಿಸುವ ಕಾರ್ಯವಾಗಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಕೆ.ಪ್ರಭಾಕರ ಸೇರಿದಂತೆ ಆಯಾ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಽಕಾರಿಗಳು ಹಾಗೂ ಅಂಗನವಾಡಿ ಕೇಂದ್ರಗಳ ಮೇಲ್ವಿಚಾರಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net