ಬೀಳಗಿ ತಾಲೂಕಾ ಆಸ್ಪತ್ರೆ ಡಿಸಿ ಪರಿಶೀಲನೆ

bkt-13-4
ಬೀಳಗಿ ತಾಲೂಕಾ ಆಸ್ಪತ್ರೆಗೆ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು. ಬೀಳಗಿ ತಾಲೂಕಾ ಆಸ್ಪತ್ರೆ ವೈದ್ಯಾಧಿಕಾರಿ ದಯಾನಂದ ಕರೆನ್ನವರ, ಜಮಖಂಡಿ ಉಪವಿಭಾಗಾಧಿಕಾರಿ ಸಿದ್ದು ಹುಲ್ಲೊಳ್ಳಿ, ತಹಸೀಲ್ದಾರ ಸುಭಾಸ ಇಂಗಳೆ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಕುಸಮಾ ಮಾಗಿ, ವೈದ್ಯಾಧಿಕಾರಿ ಡಾ.ಮಹಾಂತೇಶ ಇದ್ದರು.
Published on

ಬಾಗಲಕೋಟೆ: ಬೀಳಗಿ ತಾಲೂಕಾ ಆಸ್ಪತ್ರೆಗೆ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ ಮಂಗಳವಾರ ಭೇಟಿ ನೀಡಿ ಹೆರಿಗೆ ವಿಭಾಗ, ವಿವಿಧ ವಾರ್ಡ್ ಹಾಗೂ ಐಸಿಯು ವಿಭಾಗಗಳ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಗಳಲ್ಲಿರುವ ವೈದ್ಯಾಕಾರಿಗಳು, ಸಿಬ್ಬಂದಿಗಳ ಮಾಹಿತಿ ಪಡೆದುಕೊಂಡರು. ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರು ಖಾಸಗಿಯಾಗಿ ಸೇವೆ ಸಲ್ಲಿಸುತ್ತಿರುವ ಬಗ್ಗೆ ಕೇಳಿದಾಗ ಯಾರು ಖಾಸಗಿಯಾಗಿ ಸೇವೆ ಮಾಡದಿರುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವೈದ್ಯರುಗಳು ತಿಳಿಸಿದರು. ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇರುವದಿಲ್ಲ. ಉತ್ತಮ ಚಿಕಿತ್ಸೆ ನೀಡಲಾಗುತ್ತಿರುವ ಬಗ್ಗೆ ತಾಲೂಕಾ ಆಸ್ಪತ್ರೆ ವೈದ್ಯಾಧಿಕಾರಿ ದಯಾನಂದ ಕರೆನ್ನವರ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು. ನಂತರ ತಾಲೂಕಾ ಆಡಳಿತ ಭವನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಭೇಟಿ ಸಂದರ್ಭದಲ್ಲಿ ಜಮಖಂಡಿ ಉಪವಿಭಾಗಾಧಿಕಾರಿ ಸಿದ್ದು ಹುಲ್ಲೊಳ್ಳಿ, ತಹಸೀಲ್ದಾರ ಸುಭಾಸ ಇಂಗಳೆ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಕುಸಮಾ ಮಾಗಿ, ವೈದ್ಯಾಧಿಕಾರಿ ಡಾ.ಮಹಾಂತೇಶ ಸೇರಿದಂತೆ ಇತರರು ಉಪಸ್ಥಿತರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net