

ಬಾಗಲಕೋಟೆ: ಬೀದಿ ನಾಯಿಗಳ ದಾಳಿಗೆ ಎರಡು ಮೇಕೆಗಳು, ಒಂದು ಓತದ ಮರಿ ಮೃತಪಟ್ಟಿರುವ ಘಟನೆ ನಗರದ ತರಕಾರಿ ಮಾರುಕಟ್ಟೆ ಬಳಿ ಶುಕ್ರವಾರ ತಡ ರಾತ್ರಿ ನಡೆದಿದೆ.
ಬೀದಿನಾಯಿಗಳ ಗುಂಪು ದಾಳಿ ಏಕಾಏಕಿ ದಾಳಿ ಮಾಡಿದ್ದರಿಂದ ಸುಲ್ತಾನ ಮನಿಯಾರ ಅವರಿಗೆ ಸೇರಿದ ಎರಡು ಆಡು ಹಾಗೂ ಒಂದು ಓತದ ಮರಿ ಅಸುನೀಗಿವೆ. ಬೆಳಗ್ಗೆಯಷ್ಟೆ ೨೪ ಸಾವಿರ ರೂ. ಕೊಟ್ಟು ಖರೀದಿ ಮಾಡಿ ತಂದಿದ್ದ ಆಡಗಳಲ್ಲಿ ಒಂದು ದೇವರಿಗೆ ಎರಡು ಸಾಕಲು ತಂದಿದ್ದರು. ಮನೆಯ ಹೊರಗಡೆ ಓಪನ್ ಶೆಡ್‌ನಲ್ಲಿ ಇದ್ದ ಆಡುಗಳು ನಾಲ್ಕೈದು ಬೀದಿನಾಯಿಗಳು ಒಮ್ಮೆಲೆ ಅಟ್ಯಾಕ್ ಮಾಡಿ ಒಂದು ಆಡನ್ನು ತಿಂದು ಹಾಕಿವೆ. ಎರಡಕ್ಕೆ ಮನಬಂದಂತೆ ಕಚ್ಚಿದ್ದರಿಂದ ಸಾವನ್ನಪ್ಪಿವೆ. ಆಡಿನ ಮೇಲೆ ನಾಯಿಗಳು ದಾಳಿ ನಡೆಸಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮೇಕೆಗಳ ಮಾಲೀಕ ದಾಳಿಯಿಂದ ಕಣ್ಣೀರು ಹಾಕಿದರು.