ಬೀಡಿ ಎಲೆ ಸಾಗಿಸುತ್ತಿದ್ದ ಲಾರಿ ಭಸ್ಮ

1ANKOLA4
Published on

ಅಂಕೋಲಾ: ಬೀಡಿ ಎಲೆ ಸಾಗಿಸುತ್ತಿದ್ದ ಲಾರಿಗೆ ಬೆಂಕಿ ತಗುಲಿ ಲಾರಿ ಸಂಪೂರ್ಣ ಸುಟ್ಟಿರುವ ಘಟನೆ ರಾ.ಹೆ. 63ರ ಕಂಚಿನಬಾಗಿನಲ್ಲಿ ಸಮೀಪ ಸೋಮವಾರ ಸಂಜೆ ನಡೆದಿದೆ.

ಮಂಗಳೂರಿನ ಫ್ಯಾಕ್ಟರಿಯೊಂದಕ್ಕೆ ಬೀಡಿ ಎಲೆಗಳನ್ನು ಸಾಗಿಸುತ್ತಿದ್ದ ಲಾರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಗಾಬರಿಗೊಂಡ ಚಾಲಕ ಲಾರಿಯಿಂದ ಜಿಗಿದು ಸ್ಥಳದಿಂದ ನಾಪತ್ತೆಯಾಗಿದ್ದಾನೆ. ಬೆಂಕಿಯ ಜ್ವಾಲೆ ಬಾನೆತ್ತರದವರೆಗೂ ವ್ಯಾಪಿಸಿದ್ದರಿಂದ ಸುತ್ತಮುತ್ತ ಸಂಪೂರ್ಣ ಹೊಗೆಯ ವಾತಾವರಣ ಕಂಡು ಬಂತು. ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಕದಳದ ಈಶ್ವರ ಡಿ. ನಾಯ್ಕ, ಗಜಾನನ ದೇವಾಡಿಗ, ಗಜೇಂದ್ರ ಬೊಬ್ರುಕರ್, ಗಣೇಶ ಶೇಟ್, ಜೀವನ ಬೊಬ್ರುಕರ್, ವಿಘ್ನೕಶ್ವರ ಎಂ. ನಾಯ್ಕ, ಗಣೇಶ ನಾಯ್ಕ, ಮಹೇಶ ಗೌಡ ಅವರು ತಮ್ಮ ಎರಡು ವಾಹನಗಳ ಮೂಲಕ ಬೆಂಕಿ ನಂದಿಸಲು ಶ್ರಮಿಸಿದರು. ಘಟನಾ ಸ್ಥಳದಿಂದ 2 ಕಿ.ಮೀ. ವರೆಗೂ 2 ತಾಸಿಗೂ ಹೆಚ್ಚು ಕಾಲ ಹೆದ್ದಾರಿಯಲ್ಲಿ ವಾಹನಗಳು ಟ್ರಾಫಿಕ ಜಾಮ್ಲ್ಲಿ ಸಿಲುಕಿದವು. ಸಿಪಿಐ ಕೃಷ್ಣಾನಂದ ನಾಯಕ, ಪಿಎಸ್​ಐ ಈ.ಸಿ. ಸಂಪತ್, ಎಎಸ್​ಐ ರಾಮನಾಥ ಗುಡೇಂಗಡಿ, ದುರ್ಗಪ್ಪ ಕಲಘಟಗಿ, ಸಿಬ್ಬಂದಿ ನೀಲಕಂಠ ಆಚಾರಿ, ಸತೀಶ ನಾಯ್ಕ, ಜಗದೀಶ ನಾಯ್ಕ, ಆಶೀಫ್ ಕುಂಕೂರು, ಮನೋಜ ಡಿ. ಇತರರು ಹೆದ್ದಾರಿಯಲ್ಲಿ ಸಂಚಾರಕ್ಕೆ ಸಹಕರಿಸಿದರು.</

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net