ಬಿಸಿಯೂಟ ವ್ಯವಸ್ಥೆ ಪರಿಶೀಲಿಸಿದ ಅಧಿಕಾರಿಗಳು

20BTP01
Published on

ಬೆಟ್ಟದಪುರ: ಬೆಟ್ಟದಪುರ ಸಮೀಪದ ಹಾರನಹಳ್ಳಿ ಕರ್ನಾಟಕ ಪಬ್ಲಿಕ್ (ಪ್ರಾಥಮಿಕ ವಿಭಾಗ) ಶಾಲೆಗೆ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಪ್ರಶಾಂತ್ ಇತ್ತೀಚೆಗೆ ಭೇಟಿ ನೀಡಿ ದಾಸ್ತಾನು ಸಹಿತ ಅಡುಗೆ ಕೊಠಡಿ ಪರಿಶೀಲಿಸಿದರು.

ಬಳಿಕ ಮಾತನಾಡಿದ ಅವರು ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರವನ್ನು ಪರಿಶೀಲಿಸಲು ಆಗಮಿಸಿದ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಶಾಲೆಗೆ ಭೇಟಿ ನೀಡಿದ್ದೇವೆ. ಮಕ್ಕಳಿಗೆ ನೀಡಲಾಗುವ ಮಧ್ಯಾಹ್ನದ ಊಟದ ಗುಣಮಟ್ಟ ಮತ್ತು ಪ್ರಮಾಣವನ್ನು ಪರಿಶೀಲಿಸಲಾಯಿತು. ಅಡುಗೆ ಕೋಣೆಯ ಸ್ವಚ್ಛತೆ ಮತ್ತು ನೈರ್ಮಲ್ಯ, ಊಟದ ತಯಾರಿಕೆಯಲ್ಲಿ ಬಳಸುವ ಪದಾರ್ಥಗಳ ಗುಣಮಟ್ಟ, ಮಕ್ಕಳಿಗೆ ನೀಡಲಾಗುವ ಊಟದ ಮೆನು ಮತ್ತು ಪೌಷ್ಟಿಕಾಂಶ, ಅಡುಗೆ ಸಿಬ್ಬಂದಿ ಹಾಜರಾತಿ, ಕಾರ್ಯವೈಖರಿ, ದಾಸ್ತಾನು ಕೊಠಡಿಯ ನಿರ್ವಹಣೆ ಮತ್ತು ದಾಸ್ತಾನುಗಳ ಲಭ್ಯತೆ, ಮಕ್ಕಳ ಹಾಜರಾತಿ, ಮಕ್ಕಳಿಗೆ ನೀಡಲಾಗುವ ಆಹಾರದ ಪ್ರಮಾಣ ಎಲ್ಲವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಮುಖ್ಯಶಿಕ್ಷಕ ಕೆ.ಸಿ.ಸತೀಶ್, ಶಿಕ್ಷಕರಾದ ಸಾಜಿಯಾ ಪರ್ವೀನ್, ವಿದ್ಯಾಶ್ರೀ, ಉಮಾಶ್ರೀ, ಚಂದ್ರಶೇಖರ್, ಅಡುಗೆ ಸಹಾಯಕರಾದ ಸುಚಿತ್ರಮ್ಮ, ಪ್ರೇಮಮ್ಮ, ಸವಿತಾ, ಮಂಜುಳಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net