ಬಿಸಿಎ ಶೇ.97 ಫಲಿತಾಂಶ

Published on

ಕೊಳ್ಳೇಗಾಲ: ಡಿಸೆಂಬರ್-ಜನವರಿ (2025) ಯಲ್ಲಿ ನಡೆಸಿದ ಐದನೇ ಸೆಮಿಸ್ಟರ್ ಪದವಿ ಪರೀಕ್ಷೆಯಲ್ಲಿ ಪಟ್ಟಣದ ನಿಸರ್ಗ ಕಾಲೇಜ್ ಆಫ್ ಮ್ಯಾನೇಜ್‌ಮೆಂಟ್‌ನ ಮೊದಲ ಬ್ಯಾಚ್‌ನ ಬಿಸಿಎ ವಿದ್ಯಾರ್ಥಿಗಳು ಹಾಗೂ ಬಿ.ಕಾಂ, ಮತ್ತು ಬಿ.ಎ ವಿದ್ಯಾರ್ಥಿಗಳು ಅತ್ಯುತ್ತಮ ಫಲಿತಾಂಶ ನೀಡುವುದರ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಬಿಸಿಎ 5ನೇ ಸೆಮಿಸ್ಟರ್ ಪದವಿ ಪರೀಕ್ಷೆಯಲ್ಲಿ ಶೇ.97 ಫಲಿತಾಂಶ ಬಂದಿದ್ದು, 37 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಡಿಜಿಟಲ್ ಮಾರ್ಕೆಟಿಂಗ್ ವಿಷಯದಲ್ಲಿ 7 ವಿದ್ಯಾರ್ಥಿಗಳು 100 ಕ್ಕೆ 100 ಅಂಕಗಳಿಸಿದ್ದಾರೆ. ಎಫ್.ಫಿಜಿಯಾ ನಸೀಬಾ 700 ಅಂಕಗಳಿಗೆ 667 (ಶೇ.95), ಕೆ.ಸಿಂಚನಾ 655 (ಶೇ.94), ಜಿ.ತರುಣ್ 654 (ಶೇ.93) ಅಂಕ ಗಳಿಸಿದ್ದಾರೆ.

ಬಿಕಾಂ 5ನೇ ಸೆಮಿಸ್ಟರ್ ಪದವಿ ಪರೀಕ್ಷೆಯಲ್ಲಿ ಶೇ.94 ಫಲಿತಾಂಶ ಬಂದಿದ್ದು, 90 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 8 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗೆಡೆಯಾಗಿದ್ದಾರೆ. ಜಿಎಸ್‌ಟಿ ಲಾ ಮತ್ತು ಪ್ರಾಕ್ಟಿಸ್ ವಿಷಯದಲ್ಲಿ 8 ವಿದ್ಯಾರ್ಥಿಗಳು ಇಂಡಿಯನ್ ಅಕೌಂಟಿಂಗ್ ಸ್ಟ್ಯಾಂಡರ್ಡ್ ವಿಷಯದಲ್ಲಿ 4 ವಿದ್ಯಾರ್ಥಿಗಳು, ಇನ್‌ಕಮ್ ಟ್ಯಾಕ್ಸ್ ಮತ್ತು ಆಡಿಟಿಂಗ್ ವಿಷಯದಲ್ಲಿ ತಲಾ 1 ವಿದ್ಯಾರ್ಥಿಯು 100 ಕ್ಕೆ 100 ಅಂಕಗಳಿಸಿದ್ದಾರೆ. ಜಿ.ಮನೋಜ್ 700ಕ್ಕೆ 673, ಕೆ.ಮೇಘನಾ 671, ಜಿ.ಸೃಜನ್ 670 ಅಂಕ ಪಡೆದಿದ್ದಾರೆ.

ಬಿಎ 5ನೇ ಸೆಮಿಸ್ಟರ್ ಪದವಿ ಪರೀಕ್ಷೆಯಲ್ಲಿ ಶೇ.76 ಫಲಿತಾಂಶ ಬಂದಿದ್ದು, 18 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಎಂ.ವಿನೋದಾ 700 ಅಂಕಗಳಿಗೆ 622, ಎಂ.ಶ್ರೀಲೇಖನಾ, ಎನ್.ಸಾನಿಯಾ ಭಾನು 618, ಎನ್.ಮನೋಜ್ ಕುಮಾರ್ 615 ಅಂಕ ಗಳಿಸಿದ್ದಾರೆ.

ಸಾಧನೆಗೈದ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಎಸ್.ನಾಗರಾಜು, ಕಾರ್ಯದರ್ಶಿ ಡಾ.ಎಸ್.ದತ್ತೇಶ್ ಕುಮಾರ್, ವಿಶೇಷಾಧಿಕಾರಿ ಡಾ.ಆರ್.ನಾಗಭೂಷಣ್, ಪ್ರಾಂಶುಪಾಲ ಡಾ.ಡಿ.ಧನಂಜಯ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net