

ಬಾಗಲಕೋಟೆ: ಇಲ್ಲಿನ ಬಿವಿವಿ ಸಂಘದ ವಿವಿಧ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ೧೬ ರ‍್ಯಾಂಕ್ ಪಡೆದು ಸಾಧನೆ ಮಾಡುವ ಮೂಲಕ ಸಂಘ ಹಾಗೂ ವಿಶ್ವ ವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾರೆ ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ, ಮಾಜಿ ಶಾಸಕ ವೀರಣ್ಣ ಚರಂತಿಮಠ ಹೇಳಿದರು.
ನಗರದ ಸಂಘದ ಮಿನಿ ಸಭಾಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದ ಪೂಜಾ ಕನಬೂರಮಠ ಬಿಎಸ್‌ಸಿ ಕಂಪ್ಯೂಟರ್ ವಿಜ್ಞಾನ ವಿಷಯದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡರೇ, ಬಿಎಸ್‌ಸಿಯಲ್ಲಿ ಭಾಗ್ಯಶ್ರೀ ದಳವಾಯಿ ೫ನೇ ರ‍್ಯಾಂಕ, ರೂಪಾ ಎನ್.ಮೇಟಿ ೮ನೇ ರ‍್ಯಾಂಕ್, ಎಂಎಸ್‌ಸಿ ಗಣಿತದಲ್ಲಿ ಶಿವಕುಮಾರ ಸರದಾರ ಪ್ರಥಮ ಸ್ಥಾನ, ಎಂಎಸ್‌ಸಿ ರಸಾಯನ ಶಾಸöದಲ್ಲಿ ನವೀನ ಗೌಡರ ೩ ನೇ ರ‍್ಯಾಂಕ್, ಭೌತಶಾಸöದಲ್ಲಿ ಅರ್ಪಿತಾ ೩ ನೇ ರ‍್ಯಾಂಕ ಪಡೆದುಕೊಂಡಿದ್ದಾರೆ.
ಬಸವೇಶ್ವರ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಗುರುರಾಜ ಗೌಡರ ಬಿಪಿಎಡ್‌ದಲ್ಲಿ ಪ್ರಥಮ ಸ್ಥಾನ, ಶ್ರದ್ಧಾನಂದ ಕನ್ನೂರ ೨ ನೇ ರ‍್ಯಾಂಕ ಪಡೆದುಕೊಂಡಿದ್ದಾರೆ. ಎಂಪಿಎಡ್‌ನಲ್ಲಿ ಯಮನವ್ವ ಬಾನು ಪ್ರಥಮ ಸ್ಥಾನ ಪಡೆದುಕೊಂಡರೇ, ಗಂಗರಾಜು ಎನ್. ೩ ನೇ ರ‍್ಯಾಂಕ ಪಡೆದುಕೊಂಡಿದ್ದಾರೆ. ಕಲಾ ಮಹಾವಿದ್ಯಾಲಯದ ಎಂ.ಎ.ಕನ್ನಡ ವಿಭಾಗದಲ್ಲಿ ನೀಲಮ್ಮ ಎಂ.ಶಿರೂರ ದ್ವಿತೀಯ ರ‍್ಯಾಂಕ ಪಡೆದುಕೊಂಡರೇ, ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬಿ.ಕಾಂ ಪದವಿಯಲ್ಲಿ ಉನ್ನತಿ ಪಟೇಲ ೫ ನೇ ರ‍್ಯಾಂಕ ಪಡೆದುಕೊಂಡಿದ್ದಾರೆ ಎಂದರು.
ಮುಧೋಳದ ಎಸ್.ಆರ್.ಕಂಠಿ ಪದವಿ ಕಾಲೇಜಿನ ದೀಪಾ ಅಮ್ಮಣಗಿ ಎಂ.ಎ.ಇಂಗ್ಲೀಷ ವಿಭಾಗದಲ್ಲಿ ಪ್ರಥಮ ಸ್ಥಾನ, ದಾನಮ್ಮದೇವಿ ಮಹಿಳಾ ಕಾಲೇಜಿನ ಬಿ.ಎ.ವಿಭಾಗದಲ್ಲಿ ರೂಪಾ ಎನ್.ಮಾಳಿ ೪ನೇ ರ‍್ಯಾಂಕ, ಅಕ್ಷತಾ ಸುನಗಾರ ೬ನೇ ರ‍್ಯಾಂಕ ಪಡೆದುಕೊಂಡಿದ್ದಾರೆ. ಬಿ.ಕಾಂ ವಿಭಾಗದಲ್ಲಿ ಭುವನೇಶ್ವರಿ ಎಸ್.ದೇವೂರ ೬ ನೇ ರ‍್ಯಾಂಕ ಪಡೆಯುವ ಮೂಲಕ ಅತ್ತುತ್ತಮ ಸಾಧನೆ ಮಾಡಿದ್ದಾರೆ. ಈ ಎಲ್ಲ ವಿದ್ಯಾರ್ಥಿಗಳ ಸಾಧನೆ ಶ್ಲಾಘನೀಯ ಎಂದು ತಿಳಿಸಿದರು.