

ಹುಣಸೂರು: ತಮಿಳು ಚಿತ್ರರಂಗದ ಖ್ಯಾತ ನಟ ರಜನಿಕಾಂತ್ ನಟನೆಯ ಜೈಲರ್-2 ಚಿತ್ರದ ಚಿತ್ರೀಕರಣ ತಾಲೂಕಿನ ಬಿಳಿಕೆರೆ ಗ್ರಾಮದ ಕೆರೆ ಏರಿಯ ಮೇಲೆ ಮೂರು ದಿನಗಳ ಕಾಲ ನಡೆಯಿತು.
ಚಿತ್ರೀಕರಣಕ್ಕೆ ಆಗಮಿಸಿದ ರಜನಿಕಾಂತ್ ಅವರನ್ನು ಕಂಡ ಬಿಳಿಕೆರೆ ಸುತ್ತಮುತ್ತಲ ಜನರು ತಲೈವಾ, ತಲೈವಾ ಎಂದು ಕೂಗಿ ಸಂಭ್ರಮಿಸಿದರು. ಮೇರು ನಟನಾದರೂ ರಜನಿಕಾಂತ್ ಯಾವುದೇ ಹಮ್ಮು ಬಿಮ್ಮು ಇಲ್ಲದೆ ತೆರೆದ ಜೀಪಿನಲ್ಲಿ ನಿಂತು ಕೈಮುಗಿದು ಅಭಿಮಾನಿಗಳನ್ನು ಸಂತಸಪಡಿಸಿದರು.
1983ರಲ್ಲಿ ಚಿತ್ರೀಕರಣ ನಡೆದಿತ್ತು: ಬಿಳಿಕೆರೆ ಕೆರೆಯ ಏರಿ ಸುಂದರ ಪರಿಸರವನ್ನು ಹೊಂದಿದ್ದು, ವಿಶಾಲ ನೀರಿನ ರಾಶಿ ನೋಡುಗರನ್ನು ಆಕರ್ಷಿಸುತ್ತದೆ. 1983ರಲ್ಲಿ ಡಾ.ರಾಜ್‌ಕುಮಾರ್ ಅಭಿನಯದ ಕಾಮನಬಿಲ್ಲು ಚಿತ್ರದ ಒಂದು ಹಾಡಿನ ಚಿತ್ರೀಕರಣ ಇದೇ ಕೆರೆಯ ಏರಿಯ ಮೇಲೆ ನಡೆದಿತ್ತು ಎಂದು ಬಿಳಿಕೆರೆ ನಿವಾಸಿ ಸ್ಟುಡಿಯೋ ಮಂಜು ನೆನಪಿಸಿಕೊಳ್ಳುತ್ತಾರೆ. ನಂತರ ರಜನೀಕಾಂತ್‌ರ ಚಿತ್ರ ಚಿತ್ರೀಕರಣಗೊಂಂಡಿದೆ. ಮೂರು ದಿನಗಳ ಕಾಲ ಫೈಟಿಂಗ್ ಚಿತ್ರೀಕರಣಗೊಂಡಿದೆ. ಈ ವೇಳೆ ಜೀಪನ್ನು ಸ್ಫೋಟಿಸುವ ಸೀನ್ ಕೂಡ ಚಿತ್ರೀಕರಿಸಲಾಯಿತು. ಒಂದು ಕೆಎಸ್‌ಆರ್‌ಪಿ ತುಕುಡಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಮೂರು ದಿನಗಳ ಚಿತ್ರೀಕರಣದ ನಂತರ ಭಾನುವಾರ ತನ್ನ ಅಭಿಮಾನಿಗಳನ್ನು ಸಂತಸಪಡಿಸಲು ರಜನಿಕಾಂತ್ ತೆರದ ಕಾರಿನಲಿ ನಿಂತು ಕೈಬೀಸಿ ವಂದನೆಗಳನ್ನು ತಿಳಿಸಿ ಮೈಸೂರಿಗೆ ತೆರಳಿದರು.