ಬಿಟಿಡಿಎಯಿಂದ ಬಡವರಿಗೆ ಅನ್ಯಾಯ ಆಗಲು ಬಿಡಲ್ಲ

bkt-26-1
Published on

ಬಾಗಲಕೋಟೆ ಮುಳುಗಡೆ ಸಂತ್ರಸ್ತರಿಗೆ ನಿವೇಶನ ಹಂಚಿಕೆ ಮಾಡುವಲ್ಲಿ ವಿಳಂಬ ಆಗಿದ್ದರ ಬಗ್ಗೆ ತಮಗೆ ಮಾಹಿತಿ ಇಲ್ಲ. ಈ ಬಗ್ಗೆ ಶೀಘ್ರದಲ್ಲೆ ಅಽಕಾರಿಗಳ ಸಭೆ ನಡೆಸಿ, ಏನೆಲ್ಲ ಆಗಬೇಕು ಎಂದು ಪರಿಶೀಲಿಸುತ್ತೇನೆ. ಬಡ ಸಂತ್ರಸ್ತರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಬಿಟಿಡಿಎನಲ್ಲಿ ಕೆಲ ಅವ್ಯವಹಾರದ ಬಗ್ಗೆ ತಮ್ಮ ಗಮನಕ್ಕೆ ಬಂದಾಗಿ ಖುದ್ದು ನಾನೇ ವರದಿ ತರಿಸಿಕೊಂಡು ಸರ್ಕಾರದಿಂದ ಹಿಂದಿನ ಸಿಇ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ. ಈಗಲೂ ಅಲ್ಲಿ ಏನಾದರೂ ಲೋಪಗಳು ನಡೆದಿದ್ದರೆ ಆ ಬಗ್ಗೆ ಲೋಕಾಯುಕ್ತ ತನಿಖೆಯೂ ಬೇಕಾದರೆ ನಡೆಯಲಿ. ಯಾರೇ ತಪ್ಪು ಮಾಡಿದರೂ ಅವರಿಗೆ ತಕ್ಕ ಶಿಕ್ಷೆ ಆಗಲೇಬೇಕು. ಇಲ್ಲಿ ಯಾರನ್ನೂ ರಕ್ಷಿಸುವ ಕೆಲಸ ಮಾಡಲ್ಲ. ಬಿಟಿಡಿಎಗೆ ಅಧ್ಯಕ್ಷರ ನೇಮಕ ಆಗಿದೆ. ಉಳಿದ ಸದಸ್ಯರ ಆಯ್ಕೆ ಆಗಿಲ್ಲ. ಇದು ಸರ್ಕಾರದ ಮಟ್ಟದಲ್ಲಿ ಆಗಬೇಕಾದ ಕೆಲಸ. ಸದಸ್ಯರ ನೇಮಕಾತಿ ಆಗಿಲ್ಲ ಎನ್ನುವುದು ದೊಡ್ಡ ಲೋಪವೇನಲ್ಲ ಎಂದು ಹೇಳಿದರು.

ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಗುರುಪಾದ ಡೂಗನವರ, ಪೀರಪ್ಪ ಮ್ಯಾಗೇರಿ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net