ಬಿಟಿಡಿಎದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ

bkt-6-1
ಬಾಗಲಕೋಟೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಎಎಪಿ ರಾಜ್ಯ ಕಾರ್ಯದರ್ಶಿ ರಮೇಶ ಬದ್ನೂರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮುಖಂಡರಾದ ವಿಠಲ ಲಮಾಣಿ, ಬಿ.ಎಸ್.ಭಜನ್ನವರ, ವೀರನಗೌಡ ಕೋಮಾರ ಇತರರು ಇದ್ದರು.
Published on

ಬಾಗಲಕೋಟೆ: ಸಂತ್ರಸ್ತರಿಗೆ ಆಶ್ರಯ, ಸೌಲಭ್ಯ ಒದಗಿಸಬೇಕಾದ ಬಾಗಲಕೋಟ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ. ಎಜೆಂಟರು, ಅಧಿಕಾರಿಗಳ ಹಾವಳಿಯಿಂದ ಸಂತ್ರಸ್ತರು ನಲುಗಿ ಹೋಗಿದ್ದಾರೆ ಎಂದು ಎಎಪಿ ರಾಜ್ಯ ಕಾರ್ಯದರ್ಶಿ ರಮೇಶ ಬದ್ನೂರ ಹೇಳಿದರು.

ಮುಳಗಡೆ ಸಂತ್ರಸ್ತರಿಗೆ ನಿವೇಶನ ದೊರಕಬೇಕಾದರೇ ಏಜೆಂಟರನ್ನು ಅವಲಂಬಿಸಬೇಕಾದ ಅನಿವಾರ್ಯತೆ ಇದೆ. ಒಂದು ನಿವೇಶನಕ್ಕೆ ಕನಿಷ್ಠ ೨ ಲಕ್ಷ ರೂ. ದಿಂದ ಆರಂಭವಾಗುವ ಲಂಚ ನಿವೇಶನ ಅಳತೆ ಆಧಾರದ ಮೇಲೆ ಹೆಚ್ಚಾಗುತ್ತದೆ. ಇದರಿಂದ ಸಂತ್ರಸ್ತರು ಕಣ್ಣೀರಿನಲ್ಲಿ ಕೈ ತೊಳೆಯುಂತವಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಮಾ.೩ ರಂದು ರಾತ್ರಿ ೭.೩೦ ಗಂಟೆ ವರೆಗೆ ಕಚೇರಿ ಆರಂಭವಾಗಿತ್ತು. ಸಾರ್ವಜನಿಕರು ಗಮನಕ್ಕೆ ತಂದ ಬಳಿಕ ಖುದ್ದಾಗಿ ಭೇಟಿ ನೀಡಿದೆ. ಅಲ್ಲಿ ಸಾರ್ವಜನಿಕರಿಗ್ಗಿಂತ ಏಜೆಂಟರೇ ಹೆಚ್ಚಾಗಿದ್ದರು. ಸ್ಥಳದಲ್ಲಿ ಇದ್ದ ಪುನರ್ ವಸತಿ ಅಽಕಾರಿ ಗುರುಸಿದ್ದಯ್ಯ ಹಿರೇಮಠ ಅವರನ್ನು ಸಂಪರ್ಕ ಮಾಡಿದರೇ ಬೇಜವಾಬ್ದಾರಿಯಿಂದ ಮಾತನಾಡಿದರು. ದುರಹಂಕರಾದಿಂದ ವರ್ತಿಸಿದರು. ಕಚೇರಿ ಅವಧಿಯಲ್ಲಿ ಸಾರ್ವಜನಿಕರು, ಸಂತ್ರಸ್ತರು ಅಲೆದಾಡಿದರು ಒಂದು ಕೆಲಸ ಮಾಡಿಕೊಡುವದಿಲ್ಲ. ಕುಂಟು ನೆಪ ಹೇಳುತ್ತಾರೆ. ಅವಽ ಮುಗಿದ ಬಳಿಕವು ರಾತ್ರಿ ೮ ಗಂಟೆ ವರಗೆ ಕೆಲಸ ಮಾಡುವ ಉದ್ದೇಶವಾದರು ಏನು? ಇನ್ನು ನಮ್ಮ ಭೇಟಿ ಬಳಿಕ ಕೆಲವೇ ಕ್ಷಣಗಳಲ್ಲಿ ಅಲ್ಲಿದ್ದ ಸಿಬ್ಬಂದಿ, ಏಜೆಂಟರು ಜಾಗೆ ಖಾಲಿ ಮಾಡಿದರು. ಹಾಗಿದ್ದರೇ ನಡೆಯುತ್ತಿರುವುದಾದರು ಏನು? ಬಿಟಿಡಿಎ ಅಧ್ಯಕ್ಷರಾಗಿರುವ ಶಾಸಕ ವೀರಣ್ಣ ಚರಂತಿಮಠ ಅವರೇ ಈ ಬಗ್ಗೆ ಕ್ರಮ ತೆಗೆದುಕೊಂಡಿಲ್ಲ ಏಕೇ ಅಂತ ಪ್ರಶ್ನಿಸಿದರು.

ಟೆಂಡರ್ ನೀಡುವಾಗ ನಿಯಮ ಉಲ್ಲಂಘನೆ:
ನವನಗರದ ಯೂನಿಟ್ ೩ ನಿರ್ಮಾಣಕ್ಕೆ ೨೮೦೦ ಕೋಟಿ ರೂ. ಟೆಂಡರ್ ಕರೆಯಲಾಗಿದೆ. ಅದನ್ನು ಸಹ ಪ್ರತ್ಯೇಕವಾಗಿ ನಾಲ್ಕು ಜನ ಗುತ್ತಿಗೆದಾರರ ನೀಡಲಾಗುತ್ತಿದೆ. ಟೆಂಡರ್ ನಿಯಮದಲ್ಲಿ ೧೦೦ ಕೋಟಿ ರೂ. ಅಽಕ ಮೊತ್ತ ವಿದ್ದಲ್ಲಿ ಓಬ್ಬರಿಗೆ ನೀಡಬೇಕು ಎನ್ನುವ ನಿಯಮವಿದೆ. ಸುಪ್ರೀಂಕೋರ್ಟ ಆದೇಶವಿದೆ. ಎಲ್ಲವು ಉಲ್ಲಂöಸಲಾಗಿದೆ. ಯೂನಿಟ್ ೩ ನಿರ್ಮಾಣಕ್ಕೆ ಇಷ್ಟೊಂದು ದೊಡ್ಡ ಮೊತ್ತ ಅಗತ್ಯ ಇದೇಯಾ? ಇದರಲ್ಲಿಯೂ ಕೂಡಾ ಲೂಟಿ ಹೊಡೆಯುವ ಹುನ್ನಾರ ಅಡಗಿದೆ ಎಂದು ಆರೋಪಿಸಿದರು.
ಮುಖಂಡರಾದ ವಿಠಲ ಲಮಾಣಿ, ಬಿ.ಎಸ್.ಭಜನ್ನವರ, ವೀರನಗೌಡ ಕೋಮಾರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net