ಬಿಟಿಡಿಎ ಹಗರಣ ಸಿಐಡಿಗೆ ವಹಿಸಲು ಅಭ್ಯಂತರ ಇಲ್ಲ

cd6b1cf5-a3df-4414-9aab-dc374516e37d
ಬಾಗಲಕೋಟೆ ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡ ಸ್ವಾತಂತ್ರ‍್ಯೋತ್ಸವದ ಧ್ವಜಾರೋಹಣ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ನೆರವೇರಿಸಿದರು.
Published on

ಬಾಗಲಕೋಟೆ: ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಽಕಾರದಿಂದ ನಿವೇಶನ, ಜಾಗ ಹಂಚಿಕೆ ಸೇರಿದಂತೆ ಎಲ್ಲವನ್ನು ಸಮಗ್ರ ತನಿಖೆಗೆ ವಹಿಸಲು ಯಾವುದೇ ಅಭ್ಯಂತರ ಇಲ್ಲ. ಸಿಐಡಿ ತನಿಖೆಗೆ ಒಪ್ಪಿಸೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಹಾಗೂ ಬಿಟಿಡಿಎ ಅಧ್ಯಕ್ಷ, ಶಾಸಕ ಎಚ್.ವೈ.ಮೇಟಿ ಜಂಟಿಯಾಗಿ ಹೇಳಿದ್ದಾರೆ.

ಜಿಲ್ಲಾ ಕ್ರೀಡಾಂಗಣದಲ್ಲಿ ಸ್ವಾತಂತ್ರ‍್ಯ ದಿನಾಚರಣೆ ಕಾರ್ಯಕ್ರಮದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಶಾಸಕ ಮತ್ತು ಸಚಿವರಿಬ್ಬರು ತನಿಖೆ ನಡೆಸಲು ಒಲವು ವ್ಯಕ್ತಪಡಿಸಿದರು.

ಹಿಂದಿನ ಬಿಜೆಪಿ ಆಡಳಿತದಲ್ಲಿ ಬಿವಿವಿ ಸಂಘಕ್ಕೆ ೨೦ ಎಕರೆ ವಿಸ್ತೀರ್ಣದ ನಿವೇಶನ ಹೊಂದಿರುವ ಸೆಕ್ಟರ್ ನಂಬರ್ ೫೯ನ್ನು ಹಂಚಿಕೆ ಮಾಡುವಲ್ಲಿ ನಿಯಮ ಉಲ್ಲಂಘನೆ ಆಗಿದೆ ಎಂದು ಸರ್ಕಾರ ಸಂಘಕ್ಕೆ ಹಂಚಿಕೆ ಆಗಿದ್ದ ಜಾಗ ರದ್ದು ಪಡಿಸಿದೆ. ಈ ಬಗ್ಗೆ ಸಾರ್ವಜನಿಕ ದೂರ ಬಂದ ಹಿನ್ನಲೆಯಲ್ಲಿ ನಾನು ಪ್ರಾದೇಶಿಕ ಆಯುಕ್ತರಿಗೆ ದೂರು ಕೊಟ್ಟಿದ್ದೆ. ಅವರು ತನಿಖೆ ನಡೆಸಿ ನಿಯಮ ಉಲ್ಲಂಘನೆ ಆಗಿರುವ ಬಗ್ಗೆ ವರದಿ ಸಲ್ಲಿಸಿದ್ದರಿಂದ ಸರ್ಕಾರ ರದ್ದು ಪಡಿಸಿದೆ ಎಂದು ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಸ್ಪಷ್ಟಪಡಿಸಿದರು.

ತನಿಖೆ ವೇಳೆ ದೂರ ಸತ್ಯ ಎನ್ನಿಸಿದ್ದರಿಂದ ಅವರಿಗೆ ಎದುರಾಳಿ ಬಿವಿವಿ ಸಂಘಕ್ಕೆ ನೋಟಿಸ್ ಕೊಡುವುದು, ಅಭಿಪ್ರಾಯ ಪಡೆಯಬೇಕೆಂದು ಕಂಡು ಬಂದಿರಲಿಕ್ಕಿಲ್ಲ. ಹೀಗಾಗಿ ಅವರಿಗೆ ಮಾಹಿತಿ ಕೊಟ್ಟರಲಿಕ್ಕಿಲ್ಲ ಎಂದು ಪ್ರಶ್ನೆಯೊಂದಕ್ಕೆ ಸಚಿವರು ಉತ್ತರಿಸಿದರು.

ಈಗ ಬಿವಿವಿ ಸಂಘದವರು ಏನಾದರೂ ಇತರೆ ಸಂಸ್ಥೆಗಳಿಗೆ ಹಂಚಿಕೆ ಮಾಡಿರುವ ಜಾಗದಲ್ಲಿ ಲೋಪ ಆಗಿವೆ ಎಂದರೆ ಆ ಬಗ್ಗೆಯೂ ತನಿಖೆ ನಡೆಸೋಣ. ಒಟ್ಟಾರೆ, ಬಿಟಿಡಿಎ ನಿವೇಶನ ಹಂಚಿಕೆ ಒಳಗೊಂಡಂತೆ ಸಮಗ್ರ ತನಿಖೆ ನಡೆಸಲು ಯಾವುದೇ ಅಭ್ಯಂತರ ಇಲ್ಲ. ಬಿಟಿಡಿಎ ಅಧ್ಯಕ್ಷರೇ ತನಿಖೆಯನ್ನು ಸಿಐಡಿಗೆ ಒಪ್ಪಿಸಿ ಎಂದು ಒತ್ತಾಯಿಸಿದ್ದಾರೆ. ಇದರಿಂದ ಯಾವುದೇ ತೊಂದರೆ ಇಲ್ಲ ಎಂದರು.

ಹೈಕೋರ್ಟ್ ನಿವೃತ್ತ ನ್ಯಾಯಾಽÃಶರ ಅಧ್ಯಕ್ಷತೆಯಲ್ಲಿ ಬಿಟಿಡಿಎ ಆರಂಭದಿಂದ ಈ ವರೆಗೂ ತನಿಖೆಗೆ ಮಾಜಿ ಶಾಸಕ ಹಾಗೂ ಬಿಟಿಡಿಎ ಹಿಂದಿನ ಅಧ್ಯಕ್ಷ ವೀರಣ್ಣ ಚರಂತಿಮಠ ಆಗ್ರಹಿಸಿರುವ ಬಗ್ಗೆ, ಅವರು ಎಲ್ಲಿಂದ ಎನ್ನುತ್ತಾರೋ ಅಲ್ಲಿಂದಲೇ ತನಿಖೆ ಮಾಡಿಸೋಣ ಬಿಡಿ. ಆದರೆ, ನಮಗೆ ನಮ್ಮ ಅಽಕಾರಿಗಳ ಮೇಲೆ ವಿಶ್ವಾಸ ಇದೆ. ಅವರಿಗೆ ತನಿಖೆಯ ಜವಾಬ್ದಾರಿ ನೀಡಲಾಗುವುದು ಎಂದು ತಿಳಿಸಿದರು.

ಬಿಟಿಡಿಎ ಅಧ್ಯಕ್ಷ ಎಚ್.ವೈ.ಮೇಟಿ ಮಾತನಾಡಿ, ತನಿಖೆ ಬಗ್ಗೆ ಯಾವುದೇ ಆತಂಕ ಬೇಡ. ತಮ್ಮ ಕಡೆಗೂ ಏನಾದರೂ ಮಾಹಿತಿ ಇದ್ದರೆ ಕೊಡಿ. ಅದನ್ನು ಸಹ ತನಿಖೆ ವ್ಯಾಪ್ತಿಗೆ ಒಳಪಡಿಸೋಣ. ತನಿಖೆ ನಾನೇ ಸಚಿವರ ಬಳಿ ಒತ್ತಾಯಿಸಿದ್ದೇನೆ. ೨೦೧೩ ರಲ್ಲಿ ನಾನು ಶಾಸಕನಾಗಿದ್ದೆ. ಹೀಗಾಗಿ ೨೦೧೩ ರಿಂದ ಇಲ್ಲಿಯವರೆಗೂ ನಿವೇಶನ, ಜಾಗ ಹಂಚಿಕೆ, ಸಂತ್ರಸ್ತರ ಹೆಸರಿನಲ್ಲಿ ನಿವೇಶನ ಹಂಚಿಕೆಯಲ್ಲಿ ಆಗಿವೆ ಎನ್ನಲಾದ ಅವ್ಯವಹಾರಗಳು ಹಾಗೂ -ÀÅಟ್ ಪಾತ್ ತೆರವು ಸೇರಿದಂತೆ ಎಲ್ಲ ಕಾಮಗಾರಿಗಳನ್ನು ಸಿಐಡಿಗೆ ಒಪ್ಪಿಸೋಣ. ತನ್ನಿಂದ ತಪ್ಪಾಗಿದ್ದರೂ ನನಗೂ ಶಿಕ್ಷೆಯಾಗಲಿ. ಈ ಬಗ್ಗೆ ಶೀಘ್ರವೇ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಸಭೆ ನಡೆಸಿ, ಆದಷ್ಟು ಬೇಗ ಸಿಐಡಿ ತನಿಖೆಗೆ ವಹಿಸುವ ನಿರ್ಧಾರ ತೆಗೆದುಕೊಳ್ಳಲು ಸಚಿವರಿಗೆ ಆಗ್ರಹಿಸುತ್ತೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net