

ಬಾಗಲಕೋಟೆ: ಒಂದು ನಿವೇಶನವನ್ನು ಇಬ್ಬರು ಫಲಾನುಭವಿಗಳಿಗೆ ಹಂಚಿಕೆ ಮಾಡಿ ಗೊಂದಲ ಸೃಷ್ಟಿಸಿರುವ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಽಕಾರದ(ಬಿಟಿಡಿಎ) ಅಽಕಾರಿಗಳು, ಗೊಂದಲ ಸರಿಪಡಿಸಿ ನಿವೇಶನದ ಇ-ಖಾತಾ ಮಾಡಿ ಉತಾರ ನೀಡಲು ವಿಳಂಬ ಮಾಡುತ್ತಿರುವುದನ್ನು ಖಂಡಿಸಿ ಶನಿವಾರ ಬಿಟಿಡಿಎ ಕಚೇರಿ ಒಳಗಡೆಯೇ ಅಂಗವಿಕಲ ಒಬ್ಬರು ಧರಣಿ ನಡೆಸಿದರು.
ಗೂಳಪ್ಪ ಏಳೆಮ್ಮಿ ಗೆ ಮತ್ತೊಬ್ಬ ಅಂಗವಿಕಲ ಸಾಮಾಜಿಕ ಕಾರ್ಯಕರ್ತ ಘನಶಾಮ ಭಾಂಗಡೆ ಬೆಂಬಲವಾಗಿ ಧರಣಿಯಲ್ಲಿ ಪಾಲ್ಗೊಂಡಿದ್ದ ವೇಳೆ ಇದೇ ರೀತಿ ಬಿಟಿಡಿಎಗೆ ಹಕ್ಕು ಬದಲಾವಣೆಗಾಗಿ ಅಲೆದು ಅಲೆದು ಸುಸ್ತಾಗಿದ್ದ ಮತ್ತಷ್ಟು ಸಂತ್ರಸ್ತರು ಪ್ರತಿಭಟನೆಗೆ ಕೈಜೋಡಿಸಿದರು. ಕಚೇರಿ ಒಳಗಡೆಯೇ ಕುಳಿತು ಪ್ರತಿಭಟನೆ ನಡೆಸಿದ್ದರಿಂದ ಅನೇಕ ಸಿಬ್ಬಂದಿ ಕಚೇರಿಯಿಂದ ಮೆಲ್ಲಗೆ ಹೊರನಡೆದರು.
ಬಿಟಿಡಿಎ ವತಿಯಿಂದ ಮುಳುಗಡೆ ಸಂತ್ರಸ್ತರಿಗೆ ಹಂಚಿಕೆ ಮಾಡಿದ್ದ ನಿವೇಶನವನ್ನು ಗೂಳಪ್ಪ ಏಳೆಮ್ಮಿ ಅವರು ೨೦೨೪ರಲ್ಲಿ ಬೇರೊಬ್ಬರಿಂದ ತಮ್ಮ ಹೆಸರಿನಲ್ಲಿ ನಿವೇಶನ ಖರೀದಿಸಿದ್ದರು. ಅದೇ ನಿವೇಶನವನ್ನು ಬಿಟಿಡಿಎ ೨೦೧೭ರಲ್ಲಿ ಮತ್ತೊಬ್ಬ ಸಂತ್ರಸ್ತರಿಗೆ ಹಂಚಿಕೆ ಮಾಡಿದ್ದರು. ಇದು ಬೆಳಕಿಗೆ ಬಂದ ನಂತರ ೨ನೇ ಬಾರಿಗೆ ಹಂಚಿಕೆ ಮಾಡಿದ್ದ ನಿವೇಶನ ರದ್ದು ಪಡಿಸುವಂತೆ ಅನೇಕ ಸಲ ಫಲಾನುಭವಿಗಳು ಕಚೇರಿಗೆ ಅಲೆದಾಡಿದ್ದರು.
ಇದೀಗ ಗೂಳಪ್ಪ ಏಳೆಮ್ಮಿ ಅವರ ಮನೆಯಲ್ಲಿ ಮದುವೆ ಕಾರ್ಯ ಇದ್ದು, ನಿವೇಶನದ ಮೇಲೆ ಬ್ಯಾಂಕ್ ಸಾಲ ಪಡೆಯಲು ಅವರಿಗೆ ನಿವೇಶನವನ್ನು ಇ-ಖಾತಾ ಉತಾರ ಬೇಕಿದ್ದು, ಇದಕ್ಕಾಗಿ ಕಳೆದ ನಾಲ್ಕೆÊದು ತಿಂಗಳಿAದ ಬಿಟಿಡಿಎಗೆ ಅಲೆದಾಡುತ್ತಿದ್ದರೂ ಅಽಕಾರಿಗಳು ಮಾತ್ರ ಬರೀ ಇಂದು, ನಾಳೆಗಳನ್ನು ಹೇಳುತ್ತಾ ಸಾಗಹಾಕುತ್ತ ಬಂದಿದ್ದರು. ಮದುವೆ ಫಿಕ್ಸ್ ಮಾಡಿದ್ದು, ಅದಕ್ಕಾಗಿ ಎಲ್ಲ ಸಿದ್ದತೆ ಮಾಡಿಕೊಂಡಿದ್ದರೂ ಬ್ಯಾಂಕ್ ಸಾಲ ಇಲ್ಲದೇ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಶನಿವಾರ ಕಚೇರಿಗೆ ಬಂದಾಗಲೂ ಅವರಿಗೆ ಮತ್ತೆ ಇಂದು, ನಾಳೆ ಹೇಳಿದ್ದರಿಂದ ಅನಿವಾರ್ಯವಾಗಿ ಅವರು ಸಾಮಾಜಿಕ ಕಾರ್ಯಕರ್ತ ಘನಶಾಮ ಭಾಂಡಗೆ ಅವರಿಗೆ ವಿಷಯ ತಿಳಿಸಿ, ಕಚೇರಿಯಲ್ಲಿ ಧರಣಿ ಅರಂಭಿಸಿದ್ದರು. ಇದೇ ವೇಳೆ ಕಚೇರಿಗೆ ವಿವಿಧ ಕೆಲಸಗಳಿಗಾಗಿ ಅಲೆಯುತ್ತ ಬಂದಿದ್ದ ಅನೇಕ ಸಂತ್ರಸ್ತರು ತಮ್ಮದು ಅದೇ ಪರಿಸ್ಥಿತಿ ಎಂದು ಪ್ರತಿಭಟನೆಯಲ್ಲಿ ತೊಡಗಿದರು.
ಸಮಸ್ಯೆ ಬಗೆಹರಿಸಿ, ಬ್ಯಾಂಕ್ ಸಾಲ ಸಿಗುವವರೆಗೂ ತಾವು ಕಚೇರಿಯಲ್ಲೆ ಪ್ರತಿಭಟನೆ ಮುಂದುವರೆಸುವುದಾಗಿ ಪಟ್ಟುಹಿಡಿದು ಕುಳಿತರು. ಆಗ ಬಿಟಿಡಿಎ ಪುನರ್‌ವಸತಿ ಅಽಕಾರಿ ಸುನೀಲ ದೊಡ್ಡಮನಿ ಅವರು, ಬ್ಯಾಂಕ್ ಸಾಲ ನೀಡುವ ವಿದ್ಯಾಗಿರಿಯ ಗ್ರಾಮೀಣ ವಿಕಾಸ ಬ್ಯಾಂಕ್ ಗೆ ಪತ್ರವೊಂದನ್ನು ಕೊಟ್ಟಿದ್ದಾರೆ. ಒಂದು ನಿವೇಶನ ಇಬ್ಬರಿಗೆ ಹಂಚಿಕೆ ಆಗಿದೆ. ಇದನ್ನು ಸರಿಪಡಿಸಿ, ಸುವರ್ಣ ಗೂಳಪ್ಪ ಏಳೆಮ್ಮಿ ಅವರಿಗೆ ಇ-ಸ್ವತ್ತಿಗಾಗಿ ಅರ್ಜಿ ಸಲ್ಲಿಸಿದ್ದು, ಮತ್ತೊಬ್ಬರ ಹೆಸರು ರದ್ದು ಪಡಿಸಿ, ಇವರಿಗೆ ಇ-ಸ್ವತ್ತು ಉತಾರ ತಯಾರಿಸಲು ವಿಳಂಬವಾಗಿದೆ. ಸದ್ಯಕ್ಕೆ ಏಳೆಮ್ಮಿ ಅವರಿಗೆ ಸಾಲ ಮಂಜೂರು ಮಾಡಿಕೊಡಿ. ನಂತರದಲ್ಲಿ ಬಿಟಿಡಿಎ ವತಿಯಿಂದ ಇ-ಸ್ವತ್ತು ಉತಾರ ಕೊಡಲಾಗುವುದು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಹಾಗೆಯೇ ಹಿರಿಯ ಉಪನೋಂದಣಿ ಅಽಕಾರಿಗೂ ಸಹ ಗುತ್ತಿಗೆ ಹಾಗೂ ಕ್ರಯ ಪತ್ರವನ್ನು ರದ್ದು ಮಾಡುವ ಬಗ್ಗೆ ಪುನರ್ ವಸತಿ ಅಽಕಾರಿ ಲಿಖಿತ ರೂಪದಲ್ಲಿ ಬರೆದುಕೊಟ್ಟ ಬಳಿಕ ಪ್ರತಿಭಟನೆ ಕೈಬಿಟ್ಟರು.