ಬಿಜೆಪಿಯದು ಕಮಿಷನ್ ಸರ್ಕಾರ

bkt-17-1 - Copy
ಬಾಗಲಕೋಟೆ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪಸಿಂಗ್ ಸುರ್ಜೇವಾಲ್ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಬಿಡುಗಡೆಗೊಳಿಸಿದರು. ಕೇರಳ ಶಾಸಕ ವಿಷ್ಣು ನಾಥನ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೊಳ, ನಜೀರ ಅಹ್ಮದ್, ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಮಾಜಿ ಸಚಿವರಾದ ಎಸ್.ಆರ್.ಪಾಟೀಲ, ಉಮಾಶ್ರೀ, ಎಚ್.ವೈ.ಮೇಟಿ, ಆರ್.ಬಿ.ತಿಮ್ಮಾಪುರ, ಎಚ್.ವೈ.ಮೇಟಿ, ಮುಖಂಡರಾದ ಬಸವಪ್ರಭು ಸರನಾಡಗೌಡ, ನಾಗರಾಜ ಹದ್ಲಿ, ಎಂ.ಬಿ.ಸೌದಾಗರ ಸೇರಿದಂತೆ ಇತರರು ಇದ್ದರು.
Published on

ಬಾಗಲಕೋಟೆ: ರಾಜ್ಯದಲ್ಲಿ ಬಿಜೆಪಿ ಸರ್ಕಾರಕ್ಕೆ ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು. ನೇಮಕಾತಿ, ಕಾಮಗಾರಿಯಲ್ಲಿ ಗುತ್ತಿಗೆ ಕಮಿಷನ್ ಪಡೆದುಕೊಂಡಿದೆ. ಇಂತಹ ಕೆಟ್ಟ ಆಡಳಿತಕ್ಕೆ ಜನ ಅಂತ್ಯ ಹಾಡಬೇಕು. ಕಾಂಗ್ರೆಸ್ ಪ್ರಣಾಳಿಕೆಗಳನ್ನು ಕಾರ್ಯಕರ್ತರು ಮತದಾರರ ಮನೆಗೆ ೧೦ ದಿನಗಳಲ್ಲಿ ತಲುಪಿಸಬೇಕು ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪಸಿಂಗ್ ಸುರ್ಜೇವಾಲ್ ಹೇಳಿದರು.
ನಗರದ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕಾಂಗ್ರೆಸ್ ಕರ್ನಾಟಕ ಬ್ಯಾಂಡ್ ಉಳಿಸಲು ಹವಣಿಸುತ್ತಿದೆ. ಆದರೇ ಬಿಜೆಪಿ ಕಮಿಷನ್, ಕೋಮುವಾದದಲ್ಲಿ ನಿರತವಾಗಿದೆ. ಗೃಹ ಲಕ್ಷ್ಷೀ ಯೋಜನೆ, ಉಚಿತ ವಿದ್ಯುತ್ ಬಗ್ಗೆ ಬಿಜೆಪಿಯವರು ಸುಳ್ಳು ವದಂತಿ ಹಬ್ಬಿಸುತ್ತಿದ್ದಾರೆ. ಈ ಬಗ್ಗೆ ಯಾವುದೇ ಅನುಮಾನ ಬೇಡ. ಬಿಜೆಪಿ ತಿಂದಿರುವ ಕಮಿಷನ್ ಹಣದಲ್ಲಿ ಪ್ರತಿ ಮನೆಗೆ ೨೦೦ ಯೂನಿಟ್ ಉಚಿತ ವಿದ್ಯುತ್, ಪ್ರತಿ ಕುಟುಂಬದ ಯಜಮಾನಿಗೆ ೨ ಸಾವಿರ ನೀಡಬಹುದು. ಇದು ಎಲ್ಲಿಗೂ ಹೋಗಲ್ಲ. ತೆರಿಗೆ ರೂಪದಲ್ಲಿ ಮತ್ತೆ ಸರ್ಕಾರ ಖಜಾನೆ ಸೇರುತ್ತದೆ. ಸ್ತ್ರೀ ಯರು ಇಲ್ಲದೇ ಹೋದ ಕುಟುಂಬದಲ್ಲಿ ಪುರುಷರಿಗೆ ಜಮೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಟಿಕೆಟ್ ವಂಚಿತರು ನಿರಾಸೆ ಆಗಬೇಡಿ:
ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ಪ್ರತಿಯೊಬ್ಬರಿಗೂ ತಲುಪಿಸಿ ಪಕ್ಷ ಸೂಚನೆ ನೀಡುವ ರೀತಿಯಲ್ಲಿ ಈ ಕಾರ್ಯಕ್ರಮ ಯಶಸ್ವಿಗೊಳಿಸಬೇಕು. ಜಾತಿ, ಮತ, ಪಥ ಇಲ್ಲದೆ ಜನ ಸೇವೆ ಮಾಡುತ್ತದೆ ಕಾಂಗ್ರೆಸ್. ಸರ್ವೇ ನಡೆಸಿದ ಬಳಿಕ ಟಿಕೆಟ್ ಹಂಚಿಕೆ ಮಾಡಲಾಗುವುದು. ಆಕಾಂಕ್ಷಿಗಳು ಟಿಕೆಟ್ ಸಿಗಲಿಲ್ಲ ಅಂತ ನಿರಾಸೆ ಆಗಬಾರದು. ಪಕ್ಷ ಅ
ಧಿಕಾರಕ್ಕೆ ಬಂದ ಸೂಕ್ತ ಸ್ಥಾನ ಮಾನ ನೀಡಲಾಗುವುದು ಎಂದು ಭರವಸೆ ನೀಡಿದರು.
ಕೇರಳ ಶಾಸಕ ವಿಷ್ಣು ನಾಥನ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ನಜೀರ ಅಹ್ಮದ್, ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ, ಮಾಜಿ ಸಚಿವರಾದ ಎಸ್.ಆರ್.ಪಾಟೀಲ, ಉಮಾಶ್ರೀ, ಎಚ್.ವೈ.ಮೇಟಿ, ಆರ್.ಬಿ.ತಿಮ್ಮಾಪುರ, ಎಚ್.ವೈ.ಮೇಟಿ, ಮುಖಂಡರಾದ ಬಸವಪ್ರಭು ಸರನಾಡಗೌಡ, ಡಾ.ದೇವರಾಜ ಪಾಟೀಲ, ಡಾ.ಎಂ.ಎಸ್.ದಡ್ಡೇನವರ, ನಾಗರಾಜ ಹದ್ಲಿ, ಎಂ.ಬಿ.ಸೌದಾಗರ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net