ಬಿಜೆಪಿಗೆ ಬಾಗಲಕೋಟೆ ನಗರಸಭೆ ಗದ್ದುಗೆ

bkt-29-1 (1)
ಬಾಗಲಕೋಟೆ ನಗರಸಭೆಗೆ ಅಧ್ಯಕ್ಷೆಯಾಗಿ ಆಯ್ಕೆಯಾದ ಸವಿತಾ ಲಂಕೆನ್ನವರ ಹಾಗೂ ಉಪಾಧ್ಯಕ್ಷೆ ಶೋಭಾ ರಾವ್ ಅವರು ನಗರಸಭೆ ಸದಸ್ಯರೊಂದಿಗೆ ವಿಜಯದ ಸಂಕೇತ ತೋರಿಸಿದರು.
Published on

ಬಾಗಲಕೋಟೆ: ಜಿಲ್ಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಪ್ರಕಟಣೆ ಬಳಿಕ ರಾಜಕೀಯ ಚಟುವಟಿಕೆಗಳು ಗರೆಗೆದ್ದರಿದ್ದವು. ಅದರಲ್ಲೂ ಜಿಲ್ಲಾ ಕೇಂದ್ರ ಸ್ಥಾನ ಬಾಗಲಕೋಟೆ ನಗರಸಭೆ ಬಿಜೆಪಿ ಮತ್ತೆ ಅಽಕಾರ ಗದ್ದುಗೆ ಸ್ಥಾಪಿಸುವ ಮೂಲಕ ಶಕ್ತಿ ಪ್ರದರ್ಶನ ಮಾಡಿದರು.

ಬಾಗಲಕೋಟೆ ನಗರಸಭೆ ನೂತನ ಅಧ್ಯಕ್ಷರಾಗಿ ಬಿಜೆಪಿ ಯ ಸವಿತಾ ಲೆಂಕೆನ್ನವರ, ಉಪಾಧ್ಯಕ್ಷರಾಗಿ ಶೋಭಾ ರಾವ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗುರುವಾರ ನಡೆದ ಚುನಾವಣಾ ಪ್ರಕ್ರಿಯೆ ವೇಳೆ ಬಿಜೆಪಿಯಿಂದ ಸವಿತಾ ಲೆಂಕೆನ್ನವರ ಅಧ್ಯಕ್ಷ ಸ್ಥಾನಕ್ಕೆ, ಶೋಭಾ ರಾವ್ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಇವರನ್ನು ಬಿಟ್ಟು ಬೇರೆ ಯಾವ ನಾಮಪತ್ರಗಳು ಸಲ್ಲಿಕೆ ಆಗಲಿಲ್ಲ. ನಾಮಪತ್ರ ಸಲ್ಲಿಕೆ ಅವಽ ಪೂರ್ಣಗೊಂಡ ಬಳಿಕ ಚುನಾವಣೆ ಅಽಕಾರಿ ಸಂತೋಷ ಜಗಲಾಸರ್ ಅಂತಿಮವಾಗಿ ಅವಿರೋಧ ಆಯ್ಕೆ ಕುರಿತು ಘೋಷಣೆ ಮಾಡಿದರು.

ಬಾಗಲಕೋಟೆ ನಗರ ಸಭೆಯಲ್ಲಿ ೩೫ ಸ್ಥಾನಗಳ ಪೈಕಿ ೩೦ ಸದಸ್ಯರನ್ನು ಬಿಜೆಪಿ ಹೊಂದಿದೆ. ಕಾಂಗ್ರೆಸ್ ಐವರ ಸದಸ್ಯರನ್ನು ಹೊಂದಿತ್ತು. ಕಳೆದ ಒಂದು ವಾರದಿಂದ ಆಪರೇಷನ್ ಹಸ್ತಕ್ಕೆ ಶುರುವಾಗಿತ್ತು. ಸಂಖ್ಯಾ ಬಲ ಇಲ್ಲದಿದ್ದರು ಅಽಕಾರ ಗದ್ದುಗೆ ಏರಲು ಪ್ರಯತ್ನ ನಡೆಸಿತ್ತು. ಆದರೇ ಅಂತಿಮವಾಗಿ ಸಾಧ್ಯವಾಗಲಿಲ್ಲ. ಅಲ್ಲದೆ ಬಿಜೆಪಿಯಲ್ಲಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿ ಇತ್ತು. ಮಾಜಿ ಶಾಸಕ ವೀರಣ್ಣ ಚರಂತಿಮಠ ನೇತೃತ್ವದಲ್ಲಿ ಎರಡು, ಮೂರು ಬಾರಿ ಸಭೆ ಸೇರಿ ಸದಸ್ಯರು ಚರ್ಚೆ ನಡೆಸಿದ್ದರು.

ಕಾಂಕ್ಷಿಗಳ ಲಾಭಿಯು ದೊಡ್ಡಮಟ್ಟಕ್ಕೆ ಕಂಡು ಬಂದಿತ್ತು. ಬೆಳಗ್ಗೆ ಬಿವಿವಿ ಸಂಘದ ಕುಮಾರೇಶ್ವರ ಮೆಡಿಕಲ್ ಕಾಲೇಜಿನ ಗೆಸ್ಟ್ ಹೌಸ್‌ನಲ್ಲಿ ಬಿಜೆಪಿ ನಗರಸಭೆ ಸದಸ್ಯರಿಗೆ ಉಪಹಾರ ಕೂಟಾ ಏರ್ಪಡಿಸಿ ಸಂಸದ ಪಿ.ಸಿ.ಗದ್ದಿಗೌಡರ, ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಹಾಗೂ ಮಾಜಿ ಶಾಸಕ ವೀರಣ್ಣ ಚರಂತಿಮಠ ನೇತೃತ್ವದಲ್ಲಿ ಪ್ರತಿಯೊಬ್ಬ ನಗರಸಭೆ ಸದಸ್ಯರನ್ನು ಕರೆದು ಅಭಿಪ್ರಾಯ ಸಂಗ್ರಹಿಸಲಾಯಿತು. ರಾಜಕೀಯ ಮೇಲಾಟ, ಒಳ ಆಟಕ್ಕೆ ಬ್ರೇಕ್ ಹಾಕಿದ ಮಾಜಿ ಶಾಸಕ ವೀರಣ್ಣ ಚರಂತಿಮಠ ಗುರುವಾರ ಬೆಳಗ್ಗೆ ಅಂತಿಮ ಸುತ್ತಿನ ಸಭೆ ನಡೆಸಿ ನಾಮಪತ್ರ ಸಲ್ಲಿಸುವವರ ಹೆಸರು ಬಹಿರಂಗಗೊಳಿಸಿದರು.

ಬಹುಮತ ಇರದ ಕಾರಣ ಕಾಂಗ್ರೆಸ್ ಪರ ಯಾವುದೇ ನಾಮಪತ್ರ ಸಲ್ಲಿಕೆ ಆಗಲಿಲ್ಲ. ಬೆಳಗ್ಗೆ ಬಿಜೆಪಿ ಎಲ್ಲ ಸದಸ್ಯರು ಸಭೆ ಬಳಿಕ ಒಂದೇ ಬಸ್‌ನಲ್ಲಿ ನಗರಸಭೆಗೆ ಆಗಮಿಸಿದರು. ಅಧ್ಯಕ್ಷರಾಗಿ ಸವಿತಾ ಲೆಂಕೆನ್ನವರÀ, ಉಪಾಧ್ಯಕ್ಷರಾಗಿ ಶೋಭಾ ರಾವ್ ಆಯ್ಕೆಯಾದರು. ಈ ಸಂದರ್ಭದಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ರಾಜ್ಯ ಸಭಾ ಸದಸ್ಯ ನಾರಾಯಣಸಾ ಭಾಂಡಗೆ, ವಿ.ಪ ಸದಸ್ಯ ಪಿ.ಎಚ್.ಪೂಜಾರ ಹಾಜರಾಗಿದ್ದರು. ಆಯ್ಕೆ ಘೋಷಣೆಯಾಗುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು, ಮುಖಂಡರು ಪಟಾಕಿ ಸಿಡಿಸಿ, ಸಿಹಿ ಹಂಚಿ, ಗುಲಾಲ್ ಎರಚಿ ಸಂಭ್ರಮಿಸಿದರು. ನಂತರ ರ‍್ಯಾಲಿ ಮೂಲಕ ನಗರಸಭೆಯಿಂದ ವಿದ್ಯಾಗಿರಿ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಡಾ. ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಮುಖಂಡರಾದ ರಾಜು ನಾಯ್ಕರ, ಬಸವರಾಜ ಅವರಾದಿ, ಬಸವರಾಜ ಯಂಕಂಚಿ, ಪ್ರಭು ಹಡಗಲಿ, ಜಯಂತ ಕುರಂದವಾಡ, ಉಮೇಶ ಹಂಚನಾಳ, ವೀರಣ್ಣ ಹಳೇಗೌಡರ ಸೇರಿದಂತೆ ಅನೇಕರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net