ಬಿಜೆಪಿಗರಿಗೆ ಹನುಮ, ರಾಮ ಬೇಕಿಲ್ಲ

rbt
ಸಚಿವ ಆರ್.ಬಿ.ತಿಮ್ಮಾಪುರ
Published on

ಬಾಗಲಕೋಟೆ: ಬಿಜೆಪಿಗರಿಗೆ ರಾಮನೂ ಬೇಕಿಲ್ಲ, ಹನುಮನೂ ಬೇಕಾಗಿಲ್ಲ. ಬಿಜೆಪಿಗರಿಗೆ ಮತ ಬೇಕಾಗಿದೆ. ಮತಗಳ ಲಾಲಸೆ, ಆಸೆಗೆ ಹೀನ ಕೃತ್ಯಕ್ಕೆ ಇಳಿಯುವ ಕೆಲಸ ಬಿಜೆಪಿ ಮಾಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಆರೋಪಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಕಿಡಿಗೇಡಿತನ ನಡೆಯುತ್ತಿದೆ. ಚುನಾವಣೆ ಬಂದಾಗ ಕೋಮು ಗಲಭೆ, ಜಾತಿ ಗಲಭೆ ಎಬ್ಬಿಸುವ ಮೂಲಕ ಬಿಜೆಪಿ ಲಾಭ ಪಡೆಯಬೇಕೆಂಬ ಕುತಂತ್ರ ನಡೆಸಿದೆ ಎಂದು ಟೀಕಿಸಿದರು.

ಮಾಜಿ ಸಚಿವ ಪ್ರಭು ಚೌವ್ಹಾಣ್ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಾಲಿಗೆ ಬಿದ್ದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇಂತವರು ಇದ್ದಾರೇ ಏನೂ ಮಾಡಲಿಕ್ಕೆ ಆಗಲ್ಲ. ವಿಜಯಪುರ ಹಾಗೂ ಬಾಗಲಕೋಟೆಯಲ್ಲೂ ನಮಸ್ಕಾರ ಹಾಕಿದ್ದಾರೆ. ಬಾಗಲಕೋಟೆ ಡಿಸಿ ಕಚೇರಿಯಲ್ಲಿ ಹಾಕಿದ್ದಾರೆ. ಅಂತವರು ಅಽಕಾರ ಲಾಲಸೆಗಾಗಿ ಹಾಕುತ್ತಾರೆ ಎಂದರು.

ಕೇಂದ್ರದ ಬಜೆಟ್ ಬಗ್ಗೆ ಮಾತನಾಡಿದ ಅವರು, ಬಾಗಲಕೋಟೆ-ಕುಡಚಿ ರೈಲ್ವೆಗೆ ಪೂರ್ಣ ಅನುದಾನದ ನಿರೀಕ್ಷೆ, ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಣೆ ಹಾಗೂ ಜಿಲ್ಲೆಯ ಮುಳುಗಡೆ ಸಂತ್ರಸ್ತರ ಸಮಸ್ಯೆಗಳ ಪರಿಹಾರಕ್ಕೆ ಸ್ಪಂದಿಸುತ್ತಾರೆ ಎನ್ನುವ ನಿರೀಕ್ಷೆಯಿದೆ. ಕೇಂದ್ರದ ಬಜೆಟ್‌ನಲ್ಲಿ ಜಿಲ್ಲೆಗೆ ಏನು ಬರುತ್ತದೆ ಕಾದು ನೋಡೋಣ ಎಂದರು.

ಕೇಂದ್ರ ಸರ್ಕಾರ ಸಿಎಎ ಜಾರಿಗೆ ತರುತ್ತಿರುವುದು ಕೇವಲ ಚುನಾವಣೆ ಗಿಮಿಕ್, ಬಿಜೆಪಿಗರು ಚುನಾವಣೆಗೆ ಏನು ಬೇಕು ಅಷ್ಟೇ ಮಾಡುತ್ತಾರೆ. ಮುಂದೆ ಅದನ್ನು ಜಾರಿಗೆ ತರಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net