ಬಿಜೆಪಿ ೧೫೦ ಸ್ಥಾನಗಳಿಸಿ ಇತಿಹಾಸ ಸೃಷ್ಟಿ

bkt-30-3
ನವನಗರ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಶಕ್ತಿ ಕೇಂದ್ರದ ಪ್ರಮುಖರ ಸಭೆಯಲ್ಲಿ ರಾಜ್ಯ ಉಸ್ತುವಾರಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣಸಿಂಗ್ ಅವರು ಭಾರತಮಾತೆ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಚಿವ ಗೋವಿಂದ ಕಾರಜೋಳ, ಶಾಸಕ ಡಾ.ವೀರಣ್ಣ ಚರಂತಿಮಠ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ ಇದ್ದರು.
Published on

ಬಾಗಲಕೋಟೆ: ಜನರ ಪರವಾಗಿರುವ ಯೋಜನೆಗಳನ್ನು ಕೈಗೊಂಡು ರಾಜ್ಯದ ಸಮಗ್ರ ಅಭಿವೃದ್ಧಿಗೆ ಕಂಕಣಬದ್ಧವಾಗಿ ಸೇವೆ ಮಾಡುತ್ತಿರುವ ಬಿಜೆಪಿ ಚುನಾವಣೆಯಲ್ಲಿ ೧೫೦ ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಹೊಸ ಇತಿಹಾಸ ಸೃಷ್ಠಿ ಮಾಡಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು, ರಾಜ್ಯದ ಉಸ್ತುವಾರಿ ಅರುಣ ಸಿಂಗ್ ಹೇಳಿದ್ದಾರೆ.

ನವನಗರ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶಕ್ತಿ ಕೇಂದ್ರದ ಪ್ರಮುಖ ಸಭೆ-ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಹು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನಸಂಖ್ಯೆಗೆ ಅನುಗುಣವಾಗಿ ದಲಿತ ಜನಾಂಗದ ಒಳಮೀಸಲಾತಿಯನ್ನು, ಹಿಂದುಳಿದ ವರ್ಗಗಳ ಮೀಸಲಾತಿಯ ಪ್ರಮಾಣವನ್ನು ಪರಿಷ್ಕರಿಸಿ ಬಿಜೆಪಿ ನೇತೃತ್ವದ ಸರ್ಕಾರ ಆದೇಶ ಮಾಡಿದೆ.
ಎಸ್‌ಸಿ ಎಡಗೈ ಜನಾಂಗಕ್ಕೆ ಶೇ.೬, ಎಸ್ಸಿ ಬಲಗೈ ಜನಾಂಗಕ್ಕೆ ಶೇ.೫.೫, ಬಂಜಾರ, ಬೋವಿ, ಕೊರಚ, ಕೊರಮ ಜನಾಂಗಕ್ಕೆ ಶೇ.೪.೫, ಅಲೆಮಾರಿ ಸಣ್ಣ ಜನಾಂಗಕ್ಕೆ ಶೇ.೧ ರಷ್ಟು ದಲಿತ ಒಳಮೀಸಲಾತಿ ನೀಡಿದೆ. ಹಿಂದುಳಿದ ಪ್ರವರ್ಗ-೧ಕ್ಕೆ ಶೇ.೪ ರಷ್ಟು, ಹಿಂದುಳಿದ ಪ್ರವರ್ಗ-೨ಕ್ಕೆ ಶೇ.೧೫ ರಷ್ಟು, ಪ್ರವರ್ಗ-೨ಸಿಗೆ ಶೇ.೬ರಷ್ಟು, ಪ್ರವರ್ಗ-೨ಡಿಗೆ ಶೇ.೭ ರಷ್ಟು ಹಿಂದುಳಿದ ವರ್ಗ ಮೀಸಲಾತಿ ಘೋಷಣೆ ಮಾಡಲಾಗಿದೆ ಎಂದರು.

ಸಿಎಂ ರೈತ ವಿದ್ಯಾನಿಽ ಯೋಜನೆಯಡಿ ೧೧ ವಿದ್ಯಾರ್ಥಿಗಳಿಗೆ ೪೮೪ ಕೋಟಿ ವಿದ್ಯಾರ್ಥಿ ವೇತನ ನೀಡಲಾಗಿದೆ. ಪಿಎಂ ಕಿಸಾನ್ ಸಮ್ಮಾನ ನಿಽ ಯೋಜನೆಯಡಿ ೨೦೧೯ ರಿಂದ ಇಲ್ಲಿಯ ವರೆಗೆ ೫೩ ಲಕ್ಷ ರೈತರಿಗೆ ೪೮೨೧.೩೭ ಕೋಟಿ ಹಂಚಿಕೆ ಮಾಡಲಾಗಿದೆ. ರಾಜ್ಯದ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ ೫ ರೂ. ಪ್ರೋತ್ಸಾಹ ಧನ ನೀಡಿದ್ದು, ಒಟ್ಟು ೮.೯೫ ಲಕ್ಷ ಹಾಲು ಉತ್ಪಾದಕರಿಗೆ ೧೬೪೩.೫೭ ಕೋಟಿ ಪ್ರೋತ್ಸಾಹ ಧನ ನೇರ ನಗದು ಹಂಚಿಕೆ ಮಾಡಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಚಿವ ಗೋವಿಂದ ಕಾರಜೋಳ, ಶಾಸಕ ಡಾ.ವೀರಣ್ಣ ಚರಂತಿಮಠ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ರಾಜು ರೇವಣಕರ್, ಜಯಂತ ಕುರಂದವಾಡ, ಸದಾನಂದ ನಾರಾ, ಮಹಾಂತೇಶ ಶೆಟ್ಟರ, ಬಸವರಾಜ ಹುನಗುಂದ, ರಾಜು ಕೊಣ್ಣೂರ, ರಾಜಶೇಖರ ಮುದೇನೂರ ಸೇರಿದಂತೆ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net