ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನೆ

20sirsi3
Published on

ಕಾರವಾರ: ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಜಿಲ್ಲಾದ್ಯಂತ ಗುರುವಾರ ಪ್ರತಿಭಟನೆ ನಡೆಸಿದೆ. ಎಲ್ಲೆಡೆ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿ, ರಾಜ್ಯಪಾಲರಿಗೆ ಬರೆದ ಪತ್ರವನ್ನು ಎಸಿ, ಹಾಗೂ ತಹಸೀಲ್ದಾರ್​ಗಳ ಮೂಲಕ ಸಲ್ಲಿಸಿದರು.

ಭೂ ಸುಧಾರಣಾ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ, ಕಾರ್ವಿುಕ ಕಾಯ್ದೆ ತಿದ್ದುಪಡಿಯನ್ನು ಕೈಬಿಡಬೇಕು. ಕರೊನಾ ವಿಚಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಮನವಿ ಮಾಡಿದರು.

ಕಾರವಾರದಲ್ಲಿ ಜಿಲ್ಲಾಧಿಕಾರಿ ಕಚೇರಿಯ ಎದುರು ಪ್ರತಿಭಟನೆ ನಡೆಸಿ, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಎಚ್.ಕೆ.ಅವರಿಗೆ ಮನವಿ ಸಲ್ಲಿಸಲಾಯಿತು. ಕಾಂಗ್ರೆಸ್ ಮುಖಂಡರಾದ ಕೆ.ಶಂಭು ಶೆಟ್ಟಿ, ಸಮೀರ ನಾಯ್ಕ, ಕೃಷ್ಣ ಮೇಹತಾ, ರವೀಂದ್ರ ಅಮದಳ್ಳಿ, ಮಚ್ಚೇಂದ್ರ ಮಹಾಲೆ, ಮೋಹನ ನಾಯ್ಕ, ನಾಗರಾಜ ಗೌಡ, ಅನಿಲ ನಾಯ್ಕ ಇದ್ದರು.

ಯಲ್ಲಾಪುರ ಬ್ಲಾಕ್ ಕಾಂಗ್ರೆಸ್ ಪ್ರಮುಖರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಕೆಪಿಸಿಸಿ ಯಲ್ಲಾಪುರದ ಉಸ್ತುವಾರಿ ಶ್ರೀನಿವಾಸ ಹಳ್ಳಳ್ಳಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ. ಎನ್. ಗಾಂವ್ಕಾರ, ಪ್ರಮುಖರಾದ ವೇಣುಗೋಪಾಲ ಮದ್ಗುಣಿ, ಟಿ. ಸಿ. ಗಾಂವ್ಕಾರ, ರವಿ ನಾಯ್ಕ, ಎನ್. ಕೆ. ಭಟ್ಟ ಮೆಣಸುಪಾಲ, ಎಸ್. ಎ. ಬ್ಯಾರಿ ಇತರರಿದ್ದರು.

ಶಿರಸಿಯಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು. ಈ ವೇಳೆ ಪ್ರಮುಖರಾದ ಎಸ್.ಕೆ. ಭಾಗವತ, ದೀಪಕ ದೊಡ್ಡೂರು, ಜಗದೀಶ ಗೌಡ, ರವೀಂದ್ರನಾಥ ನಾಯ್ಕ, ಸಂತೋಷ ಶೆಟ್ಟಿ, ಪ್ರಸನ್ನ ಶೆಟ್ಟಿ, ಸತೀಶ ನಾಯ್ಕ ಹಾಗೂ ಇತರರು ಇದ್ದರು.

ಸಿದ್ದಾಪುರ ತಾಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ತಾಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಸಂತ ನಾಯ್ಕ ಮನಮನೆ, ರಾಜ್ಯ ಪ್ರಧಾನ ಕಾರ್ಯದರ್ಶಿ ಸುಷ್ಮಾ ರಾಜಗೋಪಾಲ ರೆಡ್ಡಿ, ಜಿಪಂ ಸದಸ್ಯೆ ಸುಮಂಗಲಾ ನಾಯ್ಕ, ಪ್ರಮುಖರಾದ ಎಸ್.ಆರ್. ಹೆಗಡೆ ಕುಂಬಾರಕುಳಿ, ವಿ.ಎನ್.ನಾಯ್ಕ ಬೇಡ್ಕಣಿ, ಸಿ.ಆರ್. ನಾಯ್ಕ, ಎನ್.ಡಿ. ನಾಯ್ಕ, ತಾಪಂ ಸದಸ್ಯ ನಾಸೀರ್ ಖಾನ್, ನಟರಾಜ ಜಿಡ್ಡಿ, ಚಂದ್ರಕಾಂತ ಇತರರಿದ್ದರು.

ಭಟ್ಕಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಮಾಜಿ ಶಾಸಕ ಮಂಕಾಳ ವೈದ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ ನಾಯ್ಕ, ಜಿಪಂ ಅಧ್ಯಕ್ಷೆ ಜಯಶ್ರೀ ಮೊಗೇರ, ಜಿಪಂ ಸದಸ್ಯ ಅಲ್ಬರ್ಟ್ ಡೀಕೊಸ್ತಾ, ತಾಪಂ ಅಧ್ಯಕ್ಷ ಈಶ್ವರ ನಾಯ್ಕ, ವಿಷ್ಣು ದೇವಾಡಿಗ, ಮಹಾಬಲೇಶ್ವರ ನಾಯ್ಕ, ಮಾಜಿ ಬ್ಲಾಕ್ ಅಧ್ಯಕ್ಷ ವಿಠಲ ನಾಯ್ಕ, ರಮೇಶ ಮೊಗೇರ ಇತರರು ಇದ್ದರು.

ಮುಂಡಗೋಡದಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ವತಿಯಿಂದ ಜನಧ್ವನಿ ಕಾರ್ಯಕ್ರಮದ ಮೂಲಕ ಪ್ರತಿಭಟನೆ ನಡೆಸಲಾಯಿತು.ಬ್ಲಾಕ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ, ಕೆಪಿಸಿಸಿ ಸಂಯೋಜಕ ಸುರೇಶ ಸವಣೂರ, ಡಿಸಿಸಿ ಕಾರ್ಯದರ್ಶಿ ಎಚ್.ಎಂ. ನಾಯ್ಕ, ಎಂ.ಎನ್ ದುಂಡಶಿ, ಧರ್ಮರಾಜ ನಡಗೇರ, ಅಶೋಕ ಶಿರಸಿಕರ, ಪ್ರದೀಪ ಪಾಟೀಲ, ನಿತಿನ ರಾಯ್ಕರ ಇತರರಿದ್ದರು.

ಕುಮಟಾ ಕಾಂಗ್ರೆಸ್ ಘಟಕದಿಂದ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನಾ ಮನವಿ ಸಲ್ಲಿಸಲಾಯಿತು. ಮಾಜಿ ಶಾಸಕಿ ಶಾರದಾ ಶೆಟ್ಟಿ, ಅಧ್ಯಕ್ಷ ವಿ.ಎಲ್. ನಾಯ್ಕ, ಸಚಿನ್ ನಾಯ್ಕ, ಸುರೇಖಾ ವಾರೇಕರ, ಜಿಪಂ ಸದಸ್ಯ ರತ್ನಾಕರ ನಾಯ್ಕ, ಮಧುಸೂಧನ ಶೇಟ್, ಆರ್.ಎಚ್. ನಾಯ್ಕ, ಕೃಷ್ಣಾನಂದ ವೆರ್ಣೆಕರ, ಹೊನ್ನಪ್ಪ ನಾಯಕ, ನಾಗೇಶ ನಾಯ್ಕ, ಚಂದ್ರಹಾಸ ನಾಯಕ, ಎಂ.ಟಿ.ನಾಯ್ಕ, ದಾಕ್ಷಾಯಿಣಿ ಅರಿಗ, ಮೈಕೆಲ್, ಜಗದೀಶ ಹರಿಕಂತ್ರ ಇದ್ದರು.

ಹಳಿಯಾಳದಲ್ಲಿ ಗುರುವಾರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಯಿತು. ಯುವ ಕಾಂಗ್ರೆಸ್ ಅಧ್ಯಕ್ಷ ರವಿ ತೋರಣಗಟ್ಟಿ, ಜಿಪಂ ಸದಸ್ಯ ಕೃಷ್ಣ ಪಾಟೀಲ, ತಾಪಂ ಸದಸ್ಯೆ ಜಯಶ್ರೀ ಗೌಡ, ಪುರಸಭಾ ಸದಸ್ಯ ಫಯಾಜ್ ಶೇಕ್, ಸುವರ್ಣ ಮಾದರ, ಎಪಿಎಂಸಿ ಅಧ್ಯಕ್ಷ ಶ್ರೀನಿವಾಸ ಘೊಟ್ನೇಕರ, ಪ್ರಮುಖರಾದ ಸತ್ಯಜಿತ ಗಿರಿ, ಶಿವಪುತ್ರಪ್ಪ ನುಚ್ಛಂಬ್ಲಿ, ಗುಲಾಭಷ್ಯಾ ಲತೀಪಣ್ಣನವರ, ಅಶೋಕ ಘೊಟ್ನೇಕರ, ಸಂಜು ಮಿಶಾಳೆ, ಯಶ್ವಂತ ಪಟ್ಟೆಕರ, ಅಪ್ಪಾಸಾಹೇಬ ಹುಂಡೇಕಾರ, ಸಿಕಂದರ ಮುಲ್ಲಾ, ಅಜರ ಹಲಸಿ, ರಮೇಶ ಚೌಹಾಣ ಇತರರು ಇದ್ದರು.

ದಾಂಡೇಲಿ ಕಾಂಗ್ರೆಸ್ ಘಟಕದಿಂದ ನಗರದಲ್ಲಿ ಪ್ರತಿಭಟನೆ ನಡೆಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ತಂಗಳ, ಯುವ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಹಾಗೂ ದಾಂಡೇಲಿ ಯುವ ಕಾಂಗ್ರೆಸ್ ಅಧ್ಯಕ್ಷ ಜಾಫರ್ ಮಸಣಿಕಟ್ಟಿ, ನಗರಸಭಾ ಸದಸ್ಯರಾದ ಸರಸ್ವತಿ ರಜಪೂತ, ನೀಲವ್ವ ಬಂಡಿವಡ್ಡರ, ರುಹಿನಾ ಖತೀಬ್, ಶಾಹಿದಾ ಪಠಾಣ, ರುಕ್ಮೀಣಿ ಬಾಗಡೆ, ಶಿಲ್ಪಾ ಕೊಡೆ, ಯಾಸ್ಮಿನ್ ಕಿತ್ತೂರ, ಅನಿಲ ನಾಯ್ಕರ, ಅಶ್ಪಾಕ್ ಶೇಖ್, ಮೌಲಾಲಿ ಮುಲ್ಲಾ, ಸುಜಾತಾ ಜಾಧವ, ರಾಮಲಿಂಗ ಜಾಧವ, ವೀರೇಶ ಯರಗೇರಿ, ಫಿರೋಜ್ ಶೇಖ್, ದಾದಾಪೀರ ನದಿಮ್ಮುಲ್ಲಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net