

ಬಾಗಲಕೋಟೆ: ಬಿಜೆಪಿ ಸದಸ್ಯತ್ವ ಅಭಿಯಾನ ಭರದಿಂದ ಸಾಗಿದ್ದು, ಕಾರ್ಯಕರ್ತರು, ಪದಾಽಕಾರಿಗಳು, ನಾಯಕರು ಸಕ್ರಿಯವಾಗಿ ಭಾಗವಹಿಸಿ ಸದಸ್ಯತ್ವ ಅಭಿಯಾನ ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ೨.೯೦ ಲಕ್ಷ ಸದಸ್ಯರ ನೋಂದಣಿಯಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದಸ್ಯತಾ ಅಭಿಯಾನದಲ್ಲಿ ಬೀದರ ಪ್ರಥಮ, ಬೆಂಗಳೂರು ಉತ್ತರ ದ್ವಿತೀಯ, ಬಾಗಲಕೋಟೆ ಜಿಲ್ಲೆ ತೃತೀಯ ಸ್ಥಾನದಲ್ಲಿದೆ. ಆರಂಭದಲ್ಲಿ ನಿಧಾನವಾಗಿ ಸಾಗಿದ್ದರು ಸಹ ನಂತರ ದಿನಗಳಲ್ಲಿ ಅತ್ಯಂತ ಚುರುಕಿನಿಂದಾಗಿ ಸದಸ್ಯತ್ವ ಅಭಿಯಾನ ಆರಂಭವಾಗಿದೆ. ಈತನಕ ಒಟ್ಟು ೨,೯೦,೮೩೨ ಸದಸ್ಯರ ನೋಂದಣಿಯಾಗಿದೆ ಎಂದರು.
ಜಿಲ್ಲೆಯ ಬಾಗಲಕೋಟೆಯಲ್ಲಿ ೩೯೯೦೮, ಬಾದಾಮಿಯಲ್ಲಿ ೨೫೬೯೧, ಹುನಗುಂದದಲ್ಲಿ ೨೫೨೪೩ ಹಾಗೂ ಮುಧೋಳ ಮತಕ್ಷೇತ್ರದಲ್ಲಿ ೨೪೭೭೨, ಬೀಳಗಿ ವಿಧಾನಸಭಾ ಕ್ಷೇತ್ರದಲ್ಲಿ ೬೭೦೭೩ ಸದಸ್ಯರ ನೋಂದಣಿಯಾಗಿದ್ದರೆ, ತೇರದಾಳದಲ್ಲಿ ೬೧೭೬೫, ಜಮಖಂಡಿಯಲ್ಲಿ ೪೬೦೩೦ ಸದಸ್ಯರ ನೋಂದಣಿಯಾಗಿದೆ. ಅ.೩೦ ರವರೆಗೂ ಅಭಿಯಾನ ನಡೆಯಲಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಎಲ್ಲ ವರ್ಗದ ಜನರನ್ನು ಸದಸ್ಯರನ್ನಾಗಿ ಮಾಡುವ ಕೆಲಸ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ಪ್ರಾಥಮಿಕ ಸದಸ್ಯತ್ವ ಹಾಗೂ ಸಕ್ರೀಯ ಸದಸ್ಯತ್ವ ಕೈಗೊಳ್ಳಲಾಗಿದೆ. ಜಿಲ್ಲೆಗೆ ನೀಡಿರುವ ೪.೪೬ ಲಕ್ಷ ಸದಸ್ಯತ್ವದ ಗುರಿಯನ್ನು ತಿಂಗಳಾಂತ್ಯಕ್ಕೆ ಪೂರ್ಣಗೊಳಿಸುವುದಾಗಿ ಶಾಂತಗೌಡ ಪಾಟೀಲ ಹೇಳಿದರು.
ಬಿಜೆಪಿ ವಿಭಾಗೀಯ ಸಹ ಪ್ರಭಾರಿ ಬಸವರಾಜ ಯಂಕಂಚಿ, ಮುಖಂಡರಾದ ರಾಜು ಮುದೇನೂರ, ನಾಗಪ್ಪ ಅಂಬಿ, ಸತ್ಯನಾರಾಯಣ ಹೇಮಾದ್ರಿ, ಈಶ್ವರ ಆದೆಪ್ಪನವರ, ಶಂಕರ ಹುನ್ನೂರ ಇದ್ದರು.