ಬಿಜೆಪಿ ವಿಶ್ವದ ಅತೀ ದೊಡ್ಡ ಪಕ್ಷ

bkt-19-8
ಬಾಗಲಕೋಟೆ ನವನಗರದಲ್ಲಿ ಗುರುವಾರ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ವಿ.ಪ ಸದಸ್ಯ ಪಿ.ಎಚ್.ಪೂಜಾರ ಚಾಲನೆ ನೀಡಿದರು.
Published on

ಬಾಗಲಕೋಟೆ: ರಾಷ್ಟ್ರ, ಧರ್ಮದ ಬಗ್ಗೆ ಅಪಾರ ನಂಬಿಕೆ ಇಟ್ಟಿರುವ ಏಕೈಕ ಪಕ್ಷ ಬಿಜೆಪಿ. ಪ್ರತಿಯೊಬ್ಬರು ಬಿಜೆಪಿ ಸದಸ್ಯತ್ವ ಹೊಂದಬೇಕು. ವಿಶ್ವದ ಅತೀ ದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ ಎಂದು ವಿ.ಪ ಸದಸ್ಯ ಪಿ.ಎಚ್.ಪೂಜಾರ ಹೇಳಿದರು.

ನವನಗರದಲ್ಲಿ ಗುರುವಾರ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಿಜೆಪಿ ಆದರ್ಶ, ಮೌಲ್ಯಗಳನ್ನು ಇಟ್ಟುಕೊಂಡು ಸಾಗುತ್ತಿದೆ. ಅಽಕಾರಕ್ಕೆ ಬಂದಾಗಲೆಲ್ಲ ಮಹತ್ವ ನಿರ್ಣಯ ಕೈಗೊಂಡು ರಾಷ್ಟ್ರದ ಹಿತಾಸಕ್ತಿ ಕಾಪಾಡಿಕೊಂಡು ಬಂದಿದೆ ಎಂದರು.

ಇನ್ನು ಹೊನ್ನಾಕಟ್ಟಿ ಗ್ರಾಮದಲ್ಲಿ ನಡೆದ ಸದಸ್ಯತ್ವ ಅಭಿಯಾನದಲ್ಲಿ ಡಾ.ಶೇಖರ ಮಾನೆ ಮಾತನಾಡಿ, ತತ್ವಾದರ್ಶದ ತಳಹದಿಯಲ್ಲಿ ಬಿಜೆಪಿ ಜನ್ಮ ತಾಳಿದೆ. ತನ್ನ ವಿಚಾರಧಾರೆಗಳಿಗೆ ಎಂದಿಗೂ ರಾಜಿ ಮಾಡಿಕೊಂಡಿಲ್ಲ. ಬಿಜೆಪಿ ಸದಸ್ಯತ್ವ ಪಡೆದುಕೊಂಡು ಪಕ್ಷ ಹೆಮ್ಮರವಾಗಿ ಬೆಳೆಯಲು ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಕುಮಾರ ಗಿರಿಜಾ, ವಿರೂಪಾಕ್ಷ ಅಮೃತ್ಕರ, ರಾಘು ನಾಗೂರ, ಗಣಪತಿ ದುದಾನಿ, ಸುಽÃರ ಜಾಧವ, ಅಶೋಕ ಘಾಟಗೆ, ವಾಸು ಜಾಧವ, ತುಕಾರಾಂ ಗಲಗಲಿ, ಜ್ಯೋತಿಬಾ ಸೂರ್ಯವಂಶಿ, ಸಂತೋಷ ಜಾಧವ, ಶ್ರೀಶೈಲ ದೊಡಮನಿ, ಬಸವರಾಜ ದಮ್ಮೂರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net