

ಕಲಬುರಗಿ: ಅನ್ನಭಾಗ್ಯದ ಅಕ್ಕಿ ಅಕ್ರಮವಾಗಿ ಸಂಗ್ರಹಿಸಿದ ಆರೋಪದ ಮೇಲೆ ೨೦೨೩ರ ನವೆಂಬರ್‌ನಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್‌ನನ್ನು ಶಹಾಪುರ ಪೊಲೀಸರು ನಗರದ ಅವರ ಅಪಾರ್ಟ್ಮೆಂಟ್‌ನಿAದ ಮಂಗಳವಾರ ಬಂಧಿಸಿದ್ದಾರೆ.
ನವೆAಬರ್‌ನಲ್ಲಿ ಶಹಾಪುರದ ಟಿಎಪಿಸಿಎಂಸಿ ಗೋದಾಮಿನಲ್ಲಿನ ಅಕ್ಕಿ ನಾಪತ್ತೆ ಆದ ಕುರಿತು ಆಹಾರ ಇಲಾಖೆ ಉಪ ನಿರ್ದೇಶಕ ಭೀಮರಾಯ ಮಸಾಲಿ ನೀಡಿದ್ದ ದೂರಿನಂತೆ ಪ್ರಕರಣ ದಾಖಲಾಗಿತ್ತು. ಮಣಿಕಂಠ ರಾಠೋಡ್ ಸಹೋದರ ರಾಜು ರಾಠೋಡ್‌ಗೆ ಸೇರಿದ್ದ ಗುರುಮಠಕಲ್ ಪಟ್ಟಣದ ಹೊರಭಾಗದ ಶ್ರೀ ಲಕ್ಷಿö್ಮÃ ತಿಮ್ಮಪ್ಪ ರೈಸ್ ಮಿಲ್ ಮೇಲೆ ಶಹಾಪುರ ಪೊಲೀಸರು ದಾಳಿ ಮಾಡಿ, ೭೦೦ ಕ್ವಿಂಟಾಲ್ ಅಕ್ಕಿ ಜಪ್ತಿ ಮಾಡಿದ್ದರು.
ಅಕ್ಕಿ ನಾಪತ್ತೆ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರು ಮಣಿಕಂಠಗೆ ನೋಟೀಸ್ ನೀಡಿದ್ದರೂ ವಿಚಾರಣೆಗೆ ಹಾಜರಾಗಿರಲಿಲ್ಲ. ಅಕ್ಕಿ ನಾಪತ್ತೆಯಲ್ಲಿ ಮಣಿಕಂಠ ರಾಠೋಡ ಭಾಗಿ ಹಿನ್ನೆಲೆಯಲ್ಲಿ ಮಣಿಕಂಠ ರಾಠೋಡ್‌ಗಾಗಿ ಪೊಲೀಸರು ಶೋಧ ನಡೆಸುತ್ತಿದ್ದರು. ಮಂಗಳವಾರ ನಗರದಲ್ಲಿನ ಅಪಾರ್ಟ್ಮೆಂಟ್‌ನಲ್ಲಿದ್ದ ಮಣಿಕಂಠ ಅವರನ್ನು ನಗರ ಪೊಲೀಸರ ಸಹಯೋಗದಲ್ಲಿ ಬಂಧಿಸಿ, ಕರೆದೊಯ್ದರು. ಶಹಾಪುರ ಪಿಐ ಎಸ್.ಎಂ.ಪಾಟೀಲ್ ನೇತೃತ್ವದಲ್ಲಿ ಸಿಬ್ಬಂದಿ ಬಂಧಿಸಿ, ಕರೆದೊಯ್ದರು.
ಚಿತ್ತಾಪುರದಲ್ಲಿ ಪ್ರವಾಸ: ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಕಳೆದ ಕೆಲ ದಿನದಿಂದ ಚಿತ್ತಾಪುರ ತಾಲೂಕಿನಲ್ಲಿ ಪ್ರವಾಸ ಮಾಡಿ, ಬಿಜೆಪಿ ಕಾರ್ಯಕರ್ತರು, ಮುಖಂಡರ ಭೇಟಿ ಮಾಡುತ್ತಿದ್ದರು.