ಬಿಜೆಪಿ ಮಹಿಳಾ ಮೋರ್ಚಾ ಬೈಕ್ ರ‍್ಯಾಲಿ

bkt-6-2
ಬಾಗಲಕೋಟೆ ನಗರದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರಿಂದ ಬೈಕ್ ರ‍್ಯಾಲಿ ನಡೆಯಿತು.
Published on

ಬಾಗಲಕೋಟೆ: ಭಾರತೀಯ ಜನತಾ ಪಕ್ಷದ ಮಹಿಳಾ ಮೋರ್ಚಾ ವತಿಯಿಂದ ಶಕ್ತಿ ವಂದನಾ ಅಭಿಯಾನದ ನಿಮಿತ್ತ ಬೈಕ್ ರ‍್ಯಾಲಿ ಯಶಸ್ವಿಯಾಗಿ ಜರುಗಿತು.

ನಗರದಲ್ಲಿ ಸೋಮವಾರ ಸಂಜೆ ಬಿಳೂರು ಗುರು ಬಸವ ದೇವಸ್ಥಾನದಿಂದ ಆರಂಭವಾದ ಮಹಿಳೆಯರ ಬೈಕ್ ರ‍್ಯಾಲಿ ಟಂಗಿನಮಠ, ಅಡತ್ ಬಜಾರ್, ರಸ್ತೆ ಮೂಲಕ ಹಾಯ್ದು ಪೊಲೀಸ್ ಚೌಕ್, ಟಾಂಗಾ ಸ್ಟ್ಯಾಂಡ್, ಹಳೆ ಪೋಸ್ಟ ಆಪೀಸ್, ಸರದಾರ್ ವಲ್ಲಭಾಯಿ ಚೌಕ್, ಮಹಾತ್ಮಗಾಂಧಿ ರಸ್ತೆ ಮಾರ್ಗವಾಗಿ ಬಸವೇಶ್ವರ ವೃತ್ತದಲ್ಲಿ ಸಮಾವೇಶಗೊಂಡಿತು. ಬೈಕ್ ರ‍್ಯಾಲಿಯೂದ್ಧಕ್ಕೆ ನರೇಂದ್ರ ಮೋದಿಯವರನ್ನು ಮೊತ್ತಮ್ಮೆ ಪ್ರಧಾನಿ ಮಾಡೋಣ ಎಂಬ ಜಯಘೋಷ ಹಾಕಲಾಯಿತು.

ಶಕ್ತಿವಂದನಾ ಕಾರ್ಯಕ್ರಮದ ಜಿಲ್ಲಾ ಉಸ್ತುವಾರಿ ಸುಜಾತಾ ಪ್ರಸನ್ನ ಶಿಂಧೆ, ಸಂಚಾಲಕರಾದ ಶಶಿಕಲಾ ಮಜ್ಜಗಿ, ಶೀವಲೀಲಾ ಪಟ್ಟಣಶೇಟ್ಟಿ, ರಾಜ್ಯಕಾರ್ಯಕಾರಣಿ ಸದಸ್ಯೆ ಭಾಗೀರಥಿ ಪಾಟೀಲ, ಪ್ರಧಾನ ಕಾರ್ಯದರ್ಶಿ ಮಂಜುಳಾ ಮಿಸ್ಕಿನ್, ವೀಣಾ ಘಾಟಗೆ, ಜ್ಯೋತಿ ಚವ್ಹಾಣ, ಮಂಜುಳಾ ಛೆಬ್ಬಿ, ಶೋಭಾ ರಾವ, ಸ್ಮೀತಾ ಪವಾರ, ಡಾ,ರೇಖಾ ಕಲಬುರ್ಗಿ, ಸೌಮ್ಯ ಸುಲಾಖೆ, ರೇಣುಕಾ ಬಡಿಗೇರ, ಲಕ್ಷ್ಷ್ಮೀ ಮಡಿವಾಳ, ನೆಹಾ ಇಂಜನಗೇರಿ, ವಿನಿತಾ ಕಲಬುರಗಿ, ವೃಶಾಲಿ ಆರಬ್ಬಿ, ಸುರೇಖಾ ಮನ್ನೋಳ್ಳಿ, ಶಿವಲೀಲಾ ಸಂಬನ್ನವರ ಸೇರಿದಂತೆ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net