ಬಿಜೆಪಿ ಜೋಡೆತ್ತಗಳಲ್ಲ ಅವು ಕಳ್ಳೆತ್ತುಗಳು

2825c972-c811-45c4-83e4-50436a21d911
Published on

ಬಾಗಲಕೋಟೆ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ವಿಪಕ್ಷ ನಾಯಕ ಆರ್.ಅಶೋಕ ಅವರನ್ನು ಬಿಜೆಪಿಗರು ಜೋಡೆತ್ತು ಎಂದು ಕರೆಯುತ್ತಿದ್ದು, ಇದನ್ನು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ವ್ಯಂಗ್ಯವಾಡಿದ್ದು, ಅವರು ಜೋಡೆತ್ತುಗಳು ಅಲ್ಲ, ಕಳ್ಳೆತ್ತುಗಳು ಎಂದು ಮೂದಲಿಸಿದ್ದಾರೆ.

ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು, ಜೋಡೆತ್ತು ಬರೀ ಇಲ್ಲೆ ಅಲೆದಾಡುತ್ತಿವೆ. ಜನತೆಯ ಹಿತಕಾಪಾಡಲು ಆಗುತ್ತಿಲ್ಲ. ಕಾಂಗ್ರೆಸ್ ಪಕ್ಷವನ್ನು ಬೈಯುವದಷ್ಟೆ ಮಾಡುತ್ತಿದ್ದಾರೆ. ರೈತರು ಇಷ್ಟೊಂದು ತೊಂದರೆಯಲ್ಲಿ ಇದ್ದಾರೆ. ನಾವು ಕೇಂದ್ರದಿಂದ ಇಷ್ಟು ಪರಿಹಾರ ತರುತ್ತೇವೆ, ರಾಜ್ಯದವರು ಎಷ್ಟು ಕೊಡುತ್ತೀರಿ ಎಂದು ಮಾತನಾಡಿದ್ದರೆ ಜೋಡೆತ್ತಿಗೆ ಶಹಬ್ಬಾಷ್ ಎನ್ನುತ್ತಿದ್ದೇವು.

ಅದು ಏನು ಇಲ್ಲವೆ ಇಲ್ಲ? ಕಾಂಗ್ರೆಸ್‌ಗೆ ಬಯುವುದು, ಮನೆಯಲ್ಲಿ ಮಲಗುವುದು ಅಷ್ಟೆ. ದೆಹಲಿಗೆ ಯಾಕೆ ಹೋಗುತ್ತಿಲ್ಲ? ಈ ಜೋಡೆತ್ತು ಚನ್ನಾಗಿವೆ ಎಂದು ಅನ್ನಿಸುತ್ತಿದೆಯಾ? ಇವು ಕಳ್ಳೆತ್ತುಗಳು, ತಮ್ಮ ಪಕ್ಷದವರನ್ನು ಸಮಾಧಾನ ಮಾಡುವುದೇ ಅವರಿಗೆ ದುಭಾರಿ ಆಗಿದೆ ಎಂದು ಲೇವಡಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net