ಬಿಜೆಪಿ ಕೇಂದ್ರ ನಾಯಕರಿಂದ ಕನ್ನಡಿಗರಿಗೆ ಅಪಮಾನ ಸಚಿವ‌ ಪ್ರಿಯಾಂಕ್ ಖರ್ಗೆ ಕಿಡಿ

IMG-20230804-WA0052
Published on

ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ | ಕುಮಾರಸ್ವಾಮಿ ವಿರೋಧ ಪಕ್ಷದ ನಾಯಕರಾಗಬೇಕು ಎಂದುಕೊಂಡಿರುವಂತಿದೆ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ರಾಜ್ಯದಲ್ಲಿ ಜೆಡಿಎಸ್ ಕಥೆ ಮುಗಿದಿದೆ. ಇನ್ನೂ ಬಿಜೆಪಿಯೂ ಅದೇ ಹಾದಿಯಲ್ಲಿದೆ. ಬಿಜೆಪಿ ಕೇಂದ್ರ ನಾಯಕರು ವಿರೋಧ ಪಕ್ಷದ ನಾಯಕನನ್ನು ನೇಮಕ ಮಾಡದೆ ಕನ್ನಡಿಗರಿಗೆ ಅಪಮಾನ ಮಾಡುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಛೇಡಿಸಿದರು.
ನಗರದಲ್ಲಿ  ಶನಿವಾರ ಜರುಗಲಿರುವ ಭಾಗ್ಯಜ್ಯೋತಿ ಯೋಜನೆ ಉದ್ಘಾಟನಾ ಸಮಾರಂಭದ ತಯಾರಿ ಕಾರ್ಯಗಳನ್ನು ಶುಕ್ರವಾರ ಪರಿಶೀಲಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿ, ಬಜೆಟ್ ಮಂಡನೆ ಮಾಡಿದೇವು, ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದರೂ ಇನ್ನೂ ಬಿಜೆಪಿಯವರಿಗೆ ವಿಪಕ್ಷ ನಾಯಕನನ್ನು ನೇಮಕ ಮಾಡಲು ಆಗುತ್ತಿಲ್ಲ ಎಂದರು.
ಮುಖ್ಯಮAತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಮಾಡದೆ ಅವರಿಗೂ ಸೇರಿದಂತೆ ಇಡಿ ಕನ್ನಡಿಗರಿಗೆ ಬಿಜೆಪಿ ಕೇಂದ್ರ ನಾಯಕರು ಅಪಮಾನ ಮಾಡುತ್ತಿದ್ದಾರೆ. ವಿಧಾನ ಸಭೆ ಅಧಿವೇಶನದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ನವರು ಮಾತನಾಡಿದ ಶೈಲಿ ನೋಡಿದರೆ ಮಾಜಿ ಸಿಎಂ ಕುಮಾರಸ್ವಾಮಿ ಅವರು ವಿರೋಧ ಪಕ್ಷದ ನಾಯಕರಾಗಬೇಕು ಎಂದುಕೊAಡಿರುವAತಿದೆ ಎಂದು ಹೇಳಿದರು.
ಆಟದ ತಂಡಕ್ಕೆ ನಾಯಕನ ಹುಡುಕಬೇಕು, ಅದು ಬಿಟ್ಟು ೧೨ನೇ ಆಟಗಾರರನನ್ನು ಕ್ಯಾಪ್ಟನ್ ಮಾಡಲು ಬಿಜೆಪಿ ಹೊರಂಟತಿದೆ. ಇನ್ನೂ ಜೆಡಿಎಸ್ ಹುಡುಕಾಡಬೇಕಾಗುತ್ತದೆ  ಎಂದು ಎರಡು ಪಕ್ಷಗಳ ವಿರುದ್ಧ ಪ್ರಿಯಾಂಕ್ ವಾಗ್ದಾಳಿ ನಡೆಸಿದರು.
ಇನ್ನೂ ಮಾತಿಗೊಮ್ಮೆ ಸರ್ಕಾರದ ವರ್ಗಾವಣೆ ದಂಧೆ ನಡೆದಿದೆ ಎಂದು ಪೆನ್ ಡ್ರೆÊವ್ ತೋರಿಸಿ ಬೆದರಿಸುತ್ತಿದ್ದ ಕುಮಾರಸ್ವಾಮಿ ಅವರ ಪೆನ್ ಡ್ರೆÊವ್ ಈಗ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದರು. ಬಿಜೆಪಿ-ಜೆಡಿಎಸ್ ಜಂಟಿ ಜುಗುಲ್ ಬಂಧಿ ಚೆನ್ನಾಗಿ ನಡೆದಿದೆ. ನಡೆಯಲಿ. ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ನಾನು ಸಮಾಜ ಕಲ್ಯಾಣ ಸಚಿವನಾಗಿದ್ದೆ. ಆಗ ಪ್ರಗತಿಪರರಾಗಿ ಮಾತನಾಡುತ್ತಿದ್ದರು. ಈಗ ಹೀಗೇಕೆ ಆಗಿದ್ದಾರೋ ಎಂಬುದು ಗೊತ್ತಾಗುತ್ತಿಲ್ಲ ಎಂದು ಪ್ರಿಯಾಂಕ್ ಕಿಚಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net