ಬಿಜೆಪಿ ಕಾರ್ಯಕರ್ತರಿಂದ ಪರಿಸರ ಜಾಗೃತಿ

bkt-31-2
ಬಿವಿವಿ ಸಂಘದ ಕಾರ್ಯಾಧ್ಯಕ್ಷ, ಮಾಜಿ ಶಾಸಕ ವೀರಣ್ಣ ಚರಂತಿಮಠ ಬಾಗಲಕೋಟೆ ತಾಲೂಕಿನ ಮುಚಖಂಡಿ ಗ್ರಾಮದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬಿಟಿಡಿಎ ಮಾಜಿ ಅಧ್ಯಕ್ಷ ಜಿ.ಎನ್.ಪಾಟೀಲ, ಡಾ.ಎಂ.ಎಸ್.ದಡ್ಡೆನ್ನವರ, ಲಕ್ಷ್ಮೀನಾರಾಯಣ ಕಾಸಟ, ಬಸವರಾಜ ಯಂಕಂಚಿ, ಸತ್ಯನಾರಾಯಣ ಹೆಮಾದ್ರಿ, ರಾಜು ನಾಯ್ಕರ, ಉಮೇಶ ಹಂಚಿನಾಳ ಇತರರು ಇದ್ದರು.
Published on

ಬಾಗಲಕೋಟೆ: ಮಾಜಿ ಶಾಸಕ ಡಾ. ವೀರಣ್ಣ ಚರಂತಿಮಠರ ಜನ್ಮದಿನದ ಅಂಗವಾಗಿ ಮುಚಖಂಡಿಯ ವೀರಭದ್ರೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ನಗರ ಭಾರತೀಯ ಜನತಾ ಪಾರ್ಟಿ ಹಾಗೂ ಚರಂತಿಮಠ ಅಭಿಮಾನಿ ಬಳಗದಿಂದ ಬೆಳಗಿನ ಜಾವ ಐತಿಹಾಸಿಕ ಮುಚಖಂಡಿಯಲ್ಲಿ ಶ್ರೀವೀರಭದ್ರೇಶ್ವರನಿಗೆ ಪಂಚಾಮೃತ ಅಭಿಷೇಕ, ರುದ್ರಾಭೀಷೇಕ, ಮಹಾಮೃತೃಂಜಯ ಜಪ, ಪುಷ್ಪಾಲಂಕಾರ, ಮಹಾಮಂಗಳಾರತಿ ಮಾಡುವ ಮೂಲಕ ವಿಶೇಷ ಪೂಜೆ ಸಲ್ಲಿಸಿ ಡಾ,ವೀರಣ್ಣ ಚರಂತಿಮಠರಿಗೆ ಆ ಭಗವಂತ ಆಯು ಆರೋಗ್ಯ ಸಮೃದ್ದಿ ನೀಡಿ ಇನ್ನು ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ಮಾಡುವಂತೆ ಹರಿಸುವಂತೆ ಎಂದು ಪ್ರಾರ್ಥಿಸಲಾಯಿತು.

ಆನದಿನ್ನಿ ಕ್ರಾಸ್‌ನಲ್ಲಿರುವ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನ ತೆರಳಿ ಅಲ್ಲಿ ಪರಿಸರ ಬಗ್ಗೆ ಜಾಗೃತಿ ಮೂಡಿಸಲಾಯಿತು, ನಂತರ ಮುನಿ ವೃದ್ಧಶ್ರಾಮಕ್ಕೆ ತೆರಳಿ ಅಲ್ಲಿ ವೃದ್ಧರೊಂದಿಗೆ ಡಾ.ವೀರಣ್ಣ ಚರಂತಿಮಠರ ಹುಟ್ಟು ಹಬ್ಬವನ್ನು ಆಚರಿಸಿ ಅಲ್ಲಿ ಹಿರಿಯರೊಂದಿಗೆ ಪ್ರಸಾದ ಸ್ವೀಕಾರ ಮಾಡಲಾಯಿತು.
ಈ ಸಂದರ್ಭದಲ್ಲಿ ಬಿಟಿಡಿಎ ಮಾಜಿ ಅಧ್ಯಕ್ಷ ಜಿ.ಎನ್.ಪಾಟೀಲ, ಡಾ.ಎಂ.ಎಸ್.ದಡ್ಡೆನ್ನವರ, ಲಕ್ಷ್ಮೀನಾರಾಯಣ ಕಾಸಟ, ಬಸವರಾಜ ಯಂಕಂಚಿ, ಸತ್ಯನಾರಾಯಣ ಹೆಮಾದ್ರಿ, ರಾಜು ನಾಯ್ಕರ, ಉಮೇಶ ಹಂಚಿನಾಳ, ಬಸವರಾಜ ಹುನಗುಂದ, ಸಂಗಪ್ಪ ಸಜ್ಜನ, ಸುರೇಶ ಮಜ್ಜಗಿ, ಮಾನೇಶ ಅಂಬಿಗೇರ, ಶಿವು ಹನಮಕ್ಕನವರ, ಚಂದ್ರುಸರೂರ, ರಾಮಣ್ಣ ಜುಮನಾಳ, ದ್ಯಾವಪ್ಪ ರಾಕುಂಪಿ, ಶ್ರೀಕಾಂತ ಪತ್ತಾರ, ಶಂಕರ ಗಲಗ, ಮಲ್ಲು ಗಬ್ಬೂರ ಸೇರಿದಂತೆ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net