

ಅರಕಲಗೂಡು: ಪಟ್ಟಣದ ಬಿಜಿಎಸ್ ಕಾಲೇಜಿನ ಕ್ರೀಡಾಪಟುಗಳು ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಗೆಲುವು ಸಾಧಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಬಾಲಕರ ವಿಭಾಗದಲ್ಲಿ ಟೆನಿಸ್, ವಾಲಿಬಾಲ್ ಪ್ರಥಮ ಹಾಗೂ ಧನರಾಜ್ ಕ್ರಾಸ್ ಕಂಟ್ರಿ 5000 ಮೀಟರ್ ಪ್ರಥಮ, ಕ್ರಾಸ್ ಕಂಟ್ರಿ 3000 ಮೀಟರ್ ಪ್ರಥಮ, ಕ್ರಾಸ್ ಕಂಟ್ರಿ 1500 ಮೀಟರ್ ಪ್ರಥಮ, ಹೃತಿಕ್ ಗೌಡ ಕ್ರಾಸ್ ಕಂಟ್ರಿ 5000 ಮೀಟರ್ ದ್ವಿತೀಯ, ಎಂ.ಯು. ನಿಶಾಂತ್ 100 ಮೀಟರ್ ಪ್ರಥಮ, 200 ಮೀಟರ್ ದ್ವಿತೀಯ, ಟ್ರಿಪಲ್ ಜಂಪ್ ದ್ವಿತೀಯ ಹಾಗೂ ಕೆ.ಎಸ್. ಭರತ್ ಚೆಸ್ ಪ್ರಥಮ ಸ್ಥಾನ ಪಡೆದಿದ್ದಾರೆ.
ಾಲಕಿಯರ ವಿಭಾಗದಲ್ಲಿ ಟೆನ್ನಿಸ್, ವಾಲಿಬಾಲ್ ಪ್ರಥಮ, ವಾಲಿಬಾಲ್ ದ್ವಿತೀಯ,4್ಡ400 ರಿಲೇ ದ್ವಿತೀಯ ಹಾಗೂ ಜೆ.ನಿಸರ್ಗಾ ಚೆಸ್ ಪ್ರಥಮ ಸ್ಥಾನ ಪಡೆದಿದ್ದಾರೆ. ವೈಯಕ್ತಿಕ ಪ್ರತಿಭೆಗಳಾದ ಖೋ ಖೋ-ಜಾಹ್ನವಿ, ಯಶಸ್ವಿನಿ ಹಾಗೂ ಬಾಲಕಿಯರ ವಾಲಿಬಾಲ್ ತಂಡದ 4 ಕ್ರೀಡಾಪಟುಗಳು ಜಿಲ್ಲಾ ಮಟ್ಟದದಲ್ಲಿ ಗೆದ್ದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿಜೇತ ಕ್ರೀಡಾಪಟುಗಳನ್ನು ಸಂಸ್ಥೆಯ ಕಾರ್ಯದರ್ಶಿ ಶ್ರೀ ಶಂಭುನಾಥ ಸ್ವಾಮೀಜಿ, ಪ್ರಾಂಶುಪಾಲ ಮಹೇಶ್ ಹೊಡೆನೂರು ಅಭಿನಂದಿಸಿದ್ದಾರೆ.