ಬಾವಿಗೆ ಬಿದ್ದಿದ್ದ ಶ್ವಾನ ರಕ್ಷಣೆ

15 HANUR 2
Published on

ಹನೂರು: ತಾಲೂಕಿನ ಮಂಗಲ ಗ್ರಾಮದ ಜಮೀನೊಂದರಲ್ಲಿ ಮಂಗಳವಾರ ಬಾವಿಗೆ ಬಿದ್ದಿದ್ದ ಶ್ವಾನವನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ.

ಗ್ರಾಮದ ಹೊರವಲಯದಲ್ಲಿನ ನರೇಂದ್ರನಾಥ್ ಅವರ ಫಾರ್ಮ್‌ಹೌಸ್‌ನಲ್ಲಿ ಬೆಳಗ್ಗೆ ಸುಮಾರು 70 ಅಡಿ ಆಳವಿದ್ದ ಬಾವಿಗೆ ಶ್ವಾನ ಬಿದ್ದಿದೆ. ಆದರೆ, ಮೇಲೆ ಬರಲು ಅವಕಾಶವಿಲ್ಲದೆ ಪರಿತಪಿಸುತ್ತಿತ್ತು. ನರೇಂದ್ರನಾಥ್ ಅಗ್ನಿಶಾಮಕ ಠಾಣೆಗೆ ಮಾಹಿತಿ ತಿಳಿಸಿದರು. ಸ್ಥಳಕ್ಕಾಗಮಿಸಿದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಶ್ವಾನವನ್ನು ಸುರಕ್ಷಿತವಾಗಿ ಮೇಲೆತ್ತಿದರು. ಪ್ರಭಾರ ಅಗ್ನಿಶಾಮಕ ಠಾಣಾಧಿಕಾರಿ ಮಹೇಶ್, ಸಿಬ್ಬಂದಿ ಪೆರಿಯನಾಯಗಂ, ಅಶೋಕ್, ಲಿಂಗೇಶ್, ಬಸವರಾಜು, ಲೋಕೇಶ್ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net